ನವದೆಹಲಿ, ನ.30- ರೈತರ ಬೆಂಬಲವಿಲ್ಲದೆ ಯಾವುದೇ ಸಕರ್ಾರ ಉಳಿಯಲು ಸಾಧ್ಯವಿಲ್ಲ. ಮೊದಲು ಅವರ ಸಮಸ್ಯೆ ಬಗೆಹರಿಸುವತ್ತ ಸಕರ್ಾರ ಗಮನ ಹರಿಸಲಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಲಹೆ ಮಾಡಿದ್ದಾರೆ.
ಸಾಲಮನ್ನಾ, ಕೃಷಿ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಬೃಹತ್ ಕಿಸಾನ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾಜಿ ಪ್ರಧಾನಿ ಮಾತನಾಡಿದರು.
ನಾವು ಕೃಷಿಕರ ಜತೆ ಇದ್ದೇವೆ. ರೈತರು ಬರ, ಬೆಳೆಗೆ ಉತ್ತಮ ಬೆಲೆಯಿಲ್ಲದೆ ಪರದಾಡುತ್ತಿದ್ದರೆ ಕೇಂದ್ರ ಸಕರ್ಾರ ಆ ಕಡೆಗೆ ಗಮನವನ್ನೇ ಹರಿಸುತ್ತಿಲ್ಲ. ರೈತರ ಕೂಗಿಗೆ ಬೆಲೆಯೇ ಇಲ್ಲದಂತಾಗಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಯೋಚಿಸುತ್ತಿಲ್ಲ. ಆದರೆ, ಆ ಎಲ್ಲ ರೈತರ ಜತೆಯಲ್ಲಿ ನಾವಿದ್ದೇವೆ. ಬಿಜೆಪಿ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳ ನಾಯಕರೂ ನಿಮ್ಮ ಜತೆಗಿದ್ದೇವೆ ಎಂದು ರೈತರಿಗೆ ಗೌಡರು ಭರವಸೆ ನೀಡಿದರು.
ಸಕರ್ಾರ ಎಂದೂ ರೈತರನ್ನು ನಿರ್ಲಕ್ಷ್ಯ ಮಾಡಬಾರದು. ಅನ್ನದಾತರನ್ನು ನಿರ್ಲಕ್ಷಿಸಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ರೈತರ ಬೆಂಬಲವಿಲ್ಲದೆ ಯಾವುದೇ ಸಕರ್ಾರ ಉಳಿಯಲು ಸಾಧ್ಯವಿಲ್ಲ. ಕೇಂದ್ರ ಸಕರ್ಾರದ ಈ ಧೋರಣೆಯ ವಿರುದ್ಧ ನಾವೆಲ್ಲರೂ ರೈತರ ಪರವಾಗಿ ನಿಲ್ಲಲಿದ್ದೇವೆ ಎಂದು ದೇವೇಗೌಡರು ಬೆಂಬಲದ ಅಭಯ ನೀಡಿದರು.
ಇನ್ನು ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಇತಿಹಾಸದಲ್ಲೇ ಅತಿದೊಡ್ಡ ರೈತರ ಪ್ರತಿಭಟನೆ ಇದಾಗಿದೆ. ಬೇರೆ ಬೇರೆ ರಾಜ್ಯಗಳ ಸುಮಾರು 200ಕ್ಕೂ ಅಧಿಕ ರೈತ ಸಂಘಟನೆಗಳು ಪ್ರತಿಭಟನನೆಗೆ ಕೈಜೋಡಿಸಿವೆ. ಒಂದು ಲಕ್ಷಕ್ಕೂ ಅಧಿಕ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇಂದು ಸಂಜೆ ರೈತರೆಲ್ಲರೂ ರಾಮ್ಲೀಲಾ ಮೈದಾನದಲ್ಲಿ ಸೇರಿ ಬಳಿಕ ಸಂಸತ್ಗೆ ಮುತ್ತಿಗೆ ಹಾಕುವ ಕಾರ್ಯಕ್ರಮವಿದೆ.