ವಿಡಿಯೋ ಡಿಲೀಟ್ ಮಾಡುವಂತೆ ಒತ್ತಡವಿಲ್ಲ: ಬಸವರಾಜ್ ಬೊಮ್ಮಾಯಿ

Basavaraj Bommai

ದಾವಣಗೆರೆ,  ಡಿ 2 - ಹನಿಟ್ರ್ಯಾಪ್ ನಲ್ಲಿ ಸಿಲುಕಿದ  ಜನಪ್ರತಿನಿಧಿ, ಅಧಿಕಾರಿಗಳ ಸೆರೆಯಾದ ವಿಡಿಯೋ ಡಿಲೀಟ್ ಮಾಡುವಂತೆ ಯಾರೊಬ್ಬರೂ ಒತ್ತಡ ಹೇರಿಲ್ಲ ಎಂದು ಗೃಹ ಸಚಿವ  ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. 

ರಾಜ್ಯದ  ಜನಪ್ರತಿನಿಧಿಗಳು, ಅಧಿಕಾರಿಗಳ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಾತ್ಮಕವಾಗಿ ಹನಿಟ್ರ್ಯಾಪ್ ಪ್ರಕರಣವನ್ನು  ತನಿಖೆ ಮಾಡಲಾಗುತ್ತಿದ್ದು, ಯಾರೊಬ್ಬರಿಂದ ವಿಡಿಯೋ ಡಿಲೀಟ್ ಮಾಡುವಂತೆ ಯಾವುದೇ  ಒತ್ತಡವಿಲ್ಲ ಎಂದು ತಿಳಿಸಿದರು.

ಉಪಚುನಾವಣೆ  ಪ್ರಚಾರದಲ್ಲಿ ಕೇವಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರೇ ತೊಡಗುತ್ತಿದ್ದಾರೆ‌.  ಉಳಿದ ಶಾಸಕರೆಲ್ಲ ಕೇವಲ ಸುದ್ದಿ ಗೋಷ್ಠಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಅವರು  ಟೀಕಿಸಿದರು. 

ಎಲ್ಲಾ  ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ  ಗೆಲುತ್ತದೆ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ ಜನ  ತಮ್ಮ ಪಕ್ಷಕ್ಕೆ ಮತಹಾಕಲಿ ಎಂಬ ಉದ್ದೇಶ ದಿಂದ ಅವರು ನೂತನ ಸರ್ಕಾರ ರಚಿಸುತ್ತೇವೆ ಎಂದು  ರಾಗ ಬದಲಾಯಿಸಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.