ಬೆಂಗಳೂರು, ಅ2: ಮೇಯರ್ ಚುನಾವಣೆಯಲ್ಲಿ ತಮ್ಮ ಪರ ಮತ ಚಲಾಯಿಸುವಂತೆ ಯಾರ ಮೇಲೂ ಒತ್ತಡ ಹೇರಿಲ್ಲ ಎಂದು ಮಹಾಪೌರರಾದ ಗೌತಮ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಯಾರ ಪರವಾಗಿ ಮತ ಚಲಾಯಿಸಬಹುದು.
ಇಂತವರಿಗೆ ಮತದಾನ ಮಾಡಿ ಎಂದು ಒತ್ತಾಯ ಮಾಡಲು ಆಗುವುದಿಲ್ಲ ಎಂದರು. ಪ್ರಜಾಪ್ರಭುತ್ವದಲ್ಲಿ ಯಾರಿಗೂ ಒತ್ತಾಯ ಮಾಡಲು ಆಗುವುದಿಲ್ಲ. ಬಿಬಿಎಂಪಿಯಲ್ಲಿ ಈ ಹಿಂದೆ ಜೆಡಿಎಸ್ ಮೋಸ ಆಗಿದೆ. ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಬೇಸರ ಆಗಿತ್ತು. ಹೀಗಾಗಿ ಅವರು ಮತದಾನ ಮಾಡಿಲ್ಲ ಎಂದರು. ನಾವು ಬಿಬಿಎಂಪಿಯಲ್ಲಿ ಆಪರೇಷನ್ ಕಮಲ ಮಾಡಿಲ್ಲ, ಯಾರಿಗೂ ಒತ್ತಾಯವನ್ನೂ ಮಾಡಿಲ್ಲ. ಆದರೂ ಮತದಾನ ಮಾಡಿ ತಮ್ಮ ಗೆಲುವಿಗೆ ಸಹಕರಿಸಿದ್ದಾರೆ. ಪ್ರೀತಿ, ವಿಶ್ವಾಸಕ್ಕೆ ಬೆಲೆಕೊಟ್ಟು ಎಲ್ಲಾ ಸದಸ್ಯರು ಮತದಾನ ಮಾಡಿದ್ದಾರೆ. ನಾವು ಯಾರಿಗೂ ಯಾವುದೇ ಆಮಿಷ ಒಡ್ಡಿಲ್ಲ. ಬೆಂಗಳೂರು ಅಭಿವೃದ್ಧಿಯೇ ತಮ್ಮ ಗುರಿ ಎಂದು ಗೌತಮ್ ಕುಮಾರ್ ಸ್ಪಷ್ಟಪಡಿಸಿದರು.