ವೇತನ ಕಡಿತವಿಲ್ಲ, ಕೇಂದ್ರದಿಂದ ನೌಕರರಿಗೆ ಸಿಹಿಸುದ್ದಿ..!!

ನವದೆಹಲಿ, ಮೇ 12, ವೇತನ ಕಡಿತದ ಭೀತಿಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರಿಗೆ  ಸಿಹಿಸುದ್ದಿ ದೊರಕಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ ಕಡಿತ ಮಾಡಲಾಗುತ್ತದೆ ಎಂಬ ವರದಿಗಳು ಸುಳ್ಳು , ಆಧಾರ ರಹಿತ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, ಕೇಂದ್ರ ಸರ್ಕಾರಿ ನೌಕರರ  ವೇತನ ಕಡಿತ ಮಾಡುವ ಯಾವುದೇ ಪ್ರಸ್ತಾಪವಿಲ್ಲ  ಈ ಕುರಿತು ಕೆಲಮಾಧ್ಯಮಗಳಲ್ಲಿ ಬಂದ ವರದಿಗಳು ಸುಳ್ಳು  ಎಂದು ಸ್ಪಷ್ಟಪಡಿಸಿದೆ. ಇನ್ನು ಪಿಂಚಣಿಯಲ್ಲೂ ಯಾವುದೇ ಕಡಿತ ವಾಗುದಿಲ್ಲ  ಕೇಂದ್ರ ಸರ್ಕಾರಿ ನೌಕರರ ಪಿಂಚಣಿ ಶೇ. 20 ರಷ್ಟು  ಕಡಿತವಾಗಲಿದೆ ಎಂಬ ವರದಿಗಳು ಸಹ ಸತ್ಯಕ್ಕೆ ದೂರ ಜನತೆ  ವದಂತಿಗಳಿಗೆ  ಕಿವಿಗೊಡಬೇಡಿ ಎಂದೂ  ಸಚಿವಾಲಯ ಸ್ಪಷ್ಪಪಡಿಸಿದೆ.