ಗೋಕಾಕ ಕ್ಷೇತ್ರದ ರಾಜಕೀಯ ಗಣಿತ ಯಾರಿಗೂ ಗೊತ್ತಾಗಲ್ಲ

ಲೋಕದರ್ಶನ ವರದಿ

ಗೋಕಾಕ 14: ಗೋಕಾಕ ಕ್ಷೇತ್ರದ ರಾಜಕೀಯ ಗಣಿತ ಯಾರಿಗು ಗೊತ್ತಾಗಲ್ಲ. ಜಾರಕಿಹೊಳಿ ಸಹೋದರರಿಗೆ ಮಾತ್ರ ಈ ಲೆಕ್ಕಾಚಾರ ಗೊತ್ತಾಗುತ್ತದೆ. ಶಿಷ್ಯ ಎಂದು ಹೇಳಿ ಸಿದ್ದರಾಮಯ್ಯ ಹೆಸರನ್ನು ರಮೇಶ ಜಾರಕಿಹೊಳಿ ಹಾಳು ಮಾಡಿದ್ದಾರೆ ಎಂದು ಗೋಕಾಕ ನಿಯೋಜಿತ ಕಾಂಗ್ರೇಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.

    ಅವರು, ಅನರ್ಹರ ಬಗ್ಗೆ ಸುಪ್ರೀಂ ಕೋರ್ಟ ಮಹತ್ವದ ತೀರ್ಪು ಹಿನ್ನೆಲೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವದು ಖಚಿತ. ಯಾವುದೇ ಮ್ಯಾಚ್ ಫಿಕ್ಸಿಂಗ್ ಕ್ಷೇತ್ರದಲ್ಲಿ ಇಲ್ಲ. ನಾವು ಸಹೋದರ ಎಂದು ಪರಿಗಣಿಸಲ್ಲ. ನಾನು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ  ಎಂದು ಕಣಕ್ಕಿಳಿಯುವೇನೆಂದು ಸಹೋದರ ರಮೇಶ ವಿರುದ್ಧ ಲಖನ್ ಕಿಡಿಕಾರಿದ್ದಾರೆ.

  ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರಾಗಿ ಕೆಲಸ ಮಾಡಿದ್ದೂ ಕಾಂಗ್ರೇಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಶುಕ್ರವಾರ, ಶನಿವಾರ ನಾಮಪತ್ರ ಸಲ್ಲಿಸಲು ಸಿದ್ದತೆ ನಡೆಸಿದ್ದೆನೆ. ಸತೀಶ ಜಾರಕಿಹೊಳಿ ಜತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವದಾಗಿ ತಿಳಿಸಿದರು.

   ಟಿಕೆಟ್ ತಪ್ಪುಸಲುಯತ್ನ ವಿಚಾರಕ್ಕೆ ಸಂಭಂದಿಸಿದಂತೆ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಇದೆಲ್ಲ ಸಹಜ. ಸಹೋದರರ ನಡುವೆ ಯಾವುದೇ ಮ್ಯಾಚ್ ಫಿಕ್ಸಿಂಗ್ ಇಲ್ಲ. ರಮೇಶ ಜಾರಕಿಹೊಳಿ ಚುನಾವಣೆ ತಂತ್ರಗಾರಿಕೆ ಗೊತ್ತಿದೆ. ಹೊಸದಾಗಿ ಬಂದು ಟಿಕೆಟ್ ಕೇಳುವವರಿಗೆ ತಂತ್ರ ಗೊತ್ತಾಗಲು 2 ವರ್ಷ ಬೇಕು. 20 ದಿನದಲ್ಲಿ ಎಲ್ಲಾ ಹೋರಾಟ ಮಾಡುತ್ತೇನೆ. 

ಗೋಕಾಕ್ ರಾಜಕಾರಣ ನಮಗೆ ಮಾತ್ರ ಗೊತ್ತಿದೆ. ಈಗಾಗಲೇ ಎರಡು ಸುತ್ತು ಪ್ರಚಾರ ಕಾರ್ಯ ನಡೆಸಿದ್ದೇವೆ. ಗೋಕಾಕ್ ಕ್ಷೇತ್ರದಿಂದ ಸ್ಫರ್ಧಿಸುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಗಿಫ್ಟ್ ನೀಡುವದಾಗಿ ತಿಳಿಸಿದರು.