ಬಂಜೆತನ ಸಮಸ್ಯೆಗೆ ಚಿಂತಿಸಬೇಕಿಲ್ಲ: ಸುಗಣ್ಣವರ

No need to worry about infertility problem: Sugannavara

ಕಾಗವಾಡ 27: ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದು, ಬಂಜೆತನದ ಸಮಸ್ಯೆಗೆ ಚಿಂತಿಸಬೇಕಾಗಿಲ್ಲ ಎಂದು ಮಿರಜದ ಸಚಿನ್ ಟೆಸ್ಟ್‌ಟ್ಯೂಬ್ ಬೇಬಿ ಸೆಂಟರ್‌ನ ವೈದ್ಯ ಡಾ. ಸಚಿನ್ ಸುಗಣ್ಣವರ ಹೇಳಿದರು. 

ಮಿರಜ್‌ದ ಸಚಿನ ಟೆಸ್ಟ್‌ಟ್ಯೂಬ್ ಬೇಬಿ ಸೆಂಟರ್ ಆಸ್ಪತ್ರೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಂಜೆತನ ನಿವಾರಣೆ ಮತ್ತು ಸ್ತ್ರೀ ರೋಗಗಳ ಉಚಿತ ತಪಾಸನೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.  

ವಿದೇಶದಲ್ಲಿ ಬಂಜೆತನ ನಿವಾರಣೆಗೆ ಬಳೆಸುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಸಚಿನ್ ಆಸ್ಪತ್ರೆಯಲ್ಲಿ ಲಭ್ಯವಿದ್ಯು, ಕರ್ನಾಟಕ, ಮಹಾರಾಷ್ಟ್ರದ ಗಡಿ ಭಾಗದ ಸಾವಿರಾರು ಜನ ಚಿಕಿತ್ಸೆ ಪಡೆದು, ಸಂತಾನ ಭಾಗ್ಯ ಪಡೆದುಕೊಂಡಿದ್ದಾರೆ. 

ಬಂಜೆತನದ ಸಮಸ್ಯೆಯಿಂದ ಬಳಲುವರು ಸಮಸ್ಯೆ ಪರಿಹಾರಕ್ಕಾಗಿ ಮೊ. 09765010834 ಸಂಪರ್ಕಿಸಬಹುದು ಎಂದು ತಿಳಿಸಿದರು. ಡಾ. ನೇಹಾ ಸುಗಣ್ಣವರ ಇತರರು ಇದ್ದರು.