ಯಾವ ಜಂಟಿ ಸಮೀಕ್ಷೆ ಮಾಡುವುದು ಅವಶ್ಯಕತೆ ಇಲ್ಲ: ಪ್ರತಿ ಎಕರೆಗೆ 50,000 ಪರಿಹಾರ ಕೊಡುವಂತೆ ಆಗ್ರಹ

ಯಾವ ಜಂಟಿ ಸಮೀಕ್ಷೆ ಮಾಡುವುದು ಅವಶ್ಯಕತೆ ಇಲ್ಲ: ಪ್ರತಿ ಎಕರೆಗೆ 50,000 ಪರಿಹಾರ ಕೊಡುವಂತೆ ಆಗ್ರಹ  No need to conduct any joint survey: Demand for compensation of 50,000 per acre

ಯಾವ ಜಂಟಿ ಸಮೀಕ್ಷೆ ಮಾಡುವುದು ಅವಶ್ಯಕತೆ ಇಲ್ಲ: ಪ್ರತಿ ಎಕರೆಗೆ 50,000 ಪರಿಹಾರ ಕೊಡುವಂತೆ ಆಗ್ರಹ  

ತಾಳಿಕೋಟಿ 10: ಕಳೆದ ಐದು ತಿಂಗಳಿಂದ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ  ಪ್ರತಿ ಹಳ್ಳಿಯಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಎಲ್ಲ ಬೆಳೆಗಳು ಸಂಪೂರ್ಣ ನೀರಲ್ಲಿ ನಿಂತು ಹಾಳಾಗಿವೆ. ಜಂಟಿ ಸಮೀಕ್ಷೆ ನೆಪದಲ್ಲಿ ಯಾವುದೇ ಸಮಯವನ್ನು ಹಾಳು ಮಾಡದೆ  ತಾಲೂಕಿನ ಪ್ರತಿಯೊಂದು ಗ್ರಾಮದ ಪ್ರತಿಯೊಬ್ಬ ರೈತರಿಗೂ ಒಣ ಬೇಸಾಯಕ್ಕೆ 50,000 ಹಾಗೂ ನೀರಾವರಿ ಭೂಮಿಗೆ ಒಂದು ಲಕ್ಷ ರೂಪಾಯಿ ಹಾಗೆ ಬಹು ವಾರ್ಷಿಕ ಬೆಳೆಗಳಿಗೆ 2ಲಕ್ಷ ಪರಿಹಾರವನ್ನು ಕೊಡಬೇಕೆಂದು ಈ ಮೂಲಕ ಜಿಲ್ಲಾಡಳಿತಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಆಗ್ರಹ ಮಾಡಿದರು. 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಳಿಕೋಟಿ ತಾಲೂಕು ದಂಡಧಿಕಾರಿಗಳ ಮೂಲಕ  ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ವಿಪರೀತ ಮಳೆಯಿಂದಾಗಿ ತಾಲೂಕಿನ ಕೃಷಿ ಬೆಳೆಗಳಾದ ತೊಗರಿ ಹತ್ತಿ ಮೆಕ್ಕೆಜೋಳ ಸಜ್ಜಿ ಸೇರಿದಂತೆ ಸಮಸ್ತ ಬೆಳೆಗಳು ಹಾಳಾಗಿವೆ ದ್ರಾಕ್ಷಿ ದಾಳಿಂಬ್ರಿ ಲಿಂಬೆ, ಬಾಳೆ ಸೇರಿದಂತೆ ಎಲ್ಲ  ಬೆಳೆಗಳಲ್ಲಿ ನೀರು ನಿಂತು ಹಾಳಾಗಿವೆ ಆದ್ದರಿಂದ ಯಾವುದೇ ಜಂಟಿ ಸಮೀಕ್ಷೆ ವೈಮಾನಿಕ ಸಮೀಕ್ಷೆ ಎಂದು ನೆಪ ಹೇಳದೆ 15 ದಿನದ ಒಳಗಾಗಿ ಜಿಲ್ಲೆಯ ಎಲ್ಲರಿಗೂ ಪರಿಹಾರ ಬರಲೇಬೇಕೆಂದು ಒತ್ತಾಯ ಮಾಡಲಾಯಿತು ಸಮಸ್ತ ಬೆಳೆಗಳು ಕೂಡ ನಷ್ಟಗೊಂಡಿರುವ ಹಿನ್ನೆಲೆಯಲ್ಲಿ ಯಾರಿಗೂ ತಾರತಮ್ಯ ಮಾಡದೆ ಎಲ್ಲರಿಗೂ  ನಷ್ಟ ಪರಿಹಾರವನ್ನು ಹಾಕಬೇಕು ಅದೇ ರೀತಿಯಾಗಿ ಫಸಲು ಭೀಮಾ ಯೋಜನೆಯ ವಿಮೇವೂ ಕೂಡ ಆದಷ್ಟು ಬೇಗನೆ ಕೊಡಬೇಕೆಂದರು ತಾಲೂಕ ಅಧ್ಯಕ್ಷರಾದ ಶ್ರೀಶೈಲ್ ವಾಲಿಕಾರ ಅವರು ಮಾತ್ನಾಡುತ್ತಾ ಭೀಮೆ,  ಕೃಷ್ಣಾ  ಹಾಗೂ ದೋಣಿಯ ಪ್ರವಾಹದಿಂದಾಗಿ ಸಾಕಷ್ಟು ರೈತರ ಕೃಷಿ ಭೂಮಿಗಳ ಬೆಳೆಗಳು ಹಾಳಾಗಿರುವ ಜೊತೆಗೆ ಮನೆ ಮಠಗಳು ಕೂಡ ಬಿದ್ದು ಹಲವಾರು ಪ್ರಾಣಿಗಳು ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಇದಕೆಲ್ಲ ಪರಿಹಾರ ನೀಡಬೇಕೆಂದು  ಆಗ್ರಹ ಮಾಡುತ್ತಿದ್ದೇವೆ ಒಂದು ವೇಳೆ ತಡವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.ಮಹಿಳಾ ಘಟಕದ ತಾಲೂಕಾ ಅಧ್ಯಕ್ಷರಾದ ಸುಜಾತಾ ಅವಟಿ ಅವರು ಮಾತನಾಡುತ್ತ ನೆಪ ಮಾತ್ರಕ್ಕೆ ಸಮೀಕ್ಷೆ ಮಾಡಿ ಕಣ್ಣಿಗೆ ಕಾಣಬರುವ ಕೆಲವೇ ರೈತರಿಗೆ ನಷ್ಟ ಪರಿಹಾರ ಕೊಡುವುದಾಗಿ ವರದಿ ತಯಾರಿಸಿದ್ದೀರಿ ಆದರೆ ತಾಲೂಕಿನ ಎಲ್ಲಾ ಹಳ್ಳಿಯ ರೈತರಿಗೆ ಮಳೆಯಿಂದ ನಷ್ಟವಾಗಿದೆ. ಅವರೆಲ್ಲರಿಗೂ ಮತ್ತೊಮೆ ಸಮೀಕ್ಷೆ ಮಾಡಿ ಅವರಿಗೂ ಪರಿಹಾರ ಕೊಡಿ ಎಂದರು.  

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಅವರು ಈಗಾಗಲೇ ಮೊದಲೇ ಹಂತದ ಡೋಣಿ ಇಂದ ನಷ್ಟಗೊಂಡ ರೈತರಿಗೆ ಪರಿಹಾರಕ್ಕೆ ಗುರುತಿಸಲಾಗಿತ್ತು, ಮತ್ತೆ ಇತ್ತೀಚಿಗೆ ಹೆಚ್ಚಿನ ಮಳೆ ಉಂಟಾಗಿ ಅನೇಕ ರೈತರ ಜಮೀನುಗಳಲ್ಲಿ ನೀರು ನಿಂತು ನಷ್ಟಗೊಂಡಿರುವ ಕುರಿತು ಪ್ರಥಮ ವರದಿಯನ್ನು ಆಯಾ ಗ್ರಾಮ ಪಂಚಾಯತ್ ಅಥವಾ ತಲಾಟಿ ಕಚೇರಿ ಮುಂದೆ ಅಂಟಿಸಲಾಗಿದೆ.  ಇನ್ನು ಯಾವ್ ರೈತರು ನಷ್ಟಗೊಂಡು ಉಳಿದಿದ್ದರೆ  ಅಂಥವರು ದಾಖಲೆಗಳನ್ನು ಕೊಡುವಂತೆ ತಿಳಿಸಿದರು.  

ಈ ವೇಳೆ ಬಾಗೇವಾಡಿ ತಾಲೂಕಾ ಅಧ್ಯಕ್ಷರಾದ ಮುದಕಣ್ಣ ಬಾಗೇವಾಡಿ, ನಿಂಗಣ್ಣ ಸುಣದಳ್ಳಿಈರಯ್ಯ ಅಲಾಳಮಠ, ಶಿವಶಂಕ್ರ​‍್ಪ ಸಜ್ಜನ್, ಲಿಂಗರಾಜ ಮೇಟಿ, ರಮೇಶಗೌಡ ವಡವಡಗಿ, ದೇವರೆಡ್ಡಿ ಬಿರಾದಾರ, ದೇವೀಂದ್ರ​‍್ಪಗೌಡ್ ಪಾಟೀಲ್,ಮಹದೇಪ್ಪಾಗೌಡ ಜಲಪುರ್, ದೇವಿಡ್ರಾ​‍್ಪಗೌಡ ಕೊನಾಳ, ಸಂಗನಗೌಡ ಬೆಂಡೆಗೊಂದಳ, ಈರಣ್ಣ ಸಿಂಪಿಗೆರೆ, ಮಡಿವಾಳಪ್ಪ ಸಿಂಪಿಗೆರೆ, ಶಿವಾಜಿ ಮೊಪಗಾರ, ಸಿದ್ದಪ್ಪತಳವಾರ್, ಅಪ್ಪಸಾಹೇಬ್ ಸಜ್ಜನ್, ಮುರ್ತುಜ ಹಳ್ಳದಮನಿ. ಮಲ್ಲು ಮುದನೂರ್, ಅಪ್ಪಯ್ಯ ಕಾರಕಳ್ಳಿಮಠ. ಶಿವಶಂಕರ​‍್ಪ ಟಕಳಕ್ಕಿ, ಬಸವರಾಜ್ ನಾಟಿಕಾರೀ​‍್ಭಮಣ್ಣ ಸಜ್ಜನ, ಬೋರಮ್ಮ ಕುಂಬಾರ, ಸುಧಾ ಮಡ್ಡಿ, ದ್ರಾಕ್ಷಿಯಿಣಿ ಲಿಂಗದಳ್ಳಿ,ತ ರೇಣುಕಾ ಹಂಚಾಟೆ, ಲಕ್ಷ್ಮಿಬಾಯಿ ಸಜ್ಜನ ಸೇರಿದಂತೆ ನೂರಾರು, ರೈತರು ಇದ್ದರು