ಖಾಯಿಲೆಗೊಳಗಾದವರಿಗೆ ಯಾವುದೆ ಬೇಧ ಬೇಡ: ಶ್ರೀನಿವಾಸ್

ಕೊಪ್ಪಳ 01: ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ಸಮಾನವಾಗಿ ಬದುಕುವ ಹಕ್ಕು ಕಾನೂನಿನಲ್ಲಿದ್ದು, ಖಾಯಿಲೆಗೊಳಗಾದವರಿಗೆ ಯಾವುದೆ ರೀತಿಯ ಬೇಧ ಬೇಡ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಟಿ. ಶ್ರೀನಿವಾಸ್ ಅವರು ಹೇಳಿದರು.  

ಕೊಪ್ಪಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕನರ್ಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ವತಿಯಿಂದ "ವಿಶ್ವ ಏಡ್ಸ್ ದಿನ" ಅಂಗವಾಗಿ ನಗರದ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತ್ತಕೋತ್ತರ ಕೇಂದ್ರದಲ್ಲಿ ಶನಿವಾರದಂದು ಆಯೋಜಿಸಲಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ಸಮಾನವಾಗಿ ಬದುಕುವ ಹಕ್ಕು ಕಾನೂನಿನಲ್ಲಿದೆ.  ಯಾವುದೇ ಖಾಯಿಲೆ ಬಂದರು ಸಾರ್ವಜನಿಕರು ಪ್ರತಿಯೊಬ್ಬರನ್ನು ಸಮಾನವಾಗಿ ಕಾಣಬೇಕು.  ಇನ್ನೋರ್ವ ಉಧ್ಘಾಟಕರಾದ ಏಕಸಂಗಾತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಿರ್ಭಯವಾಗಿ ಜೀವನ ನಡೆಸಬಹುದು.  ಅಗ್ಗದ ದರದಲ್ಲಿ ದೊರೆಯುವ ಇಂಟರ್ನೆಟ್ ಅನ್ನು ಒಳ್ಳೆಯ ಉದ್ದೇಶಕ್ಕೆ ಬಳಸಬೇಕು.  2018ರ ನಿಮ್ಮ ಹೆಚ್.ಐ.ವಿ. ಸ್ಥಿತಿಯನ್ನು ತಿಳಿಯಿರಿ ಘೋಷವಾಕ್ಯದಂತೆ ಎಲ್ಲರೂ ತಮ್ಮ ತಮ್ಮ ಹೆಚ್.ಐ.ವಿ. ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.  ಅತಿಹೆಚ್ಚು ಗಭರ್ಿಣಿ ಸೋಂಕಿತರ ಹೆರಿಗೆ ಮಾಡಿರುವುದಕ್ಕೆ ಕೊಪ್ಪಳ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಟಿ. ಶ್ರೀನಿವಾಸ್ ಅವರು ಹೇಳಿದರು. 

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಬಿ. ಜಂಬಯ್ಯ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯ ಹೆಚ್.ಐ.ವಿ./ ಏಡ್ಸ್ ಪ್ರತಿವರ್ಷವು ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ.  ಜಿಲ್ಲೆಯಲ್ಲಿ 14 ಐಸಿಟಿಸಿ ಪರೀಕ್ಷಾ ಕೇಂದ್ರಗಳು, 2 ಎ.ಆರ್.ಟಿ. ಕೇಂದ್ರಗಳು, 2 ಡಿ.ಎಸ್.ಆರ್.ಸಿ., 2 ಬ್ಲಡ್ಬ್ಯಾಂಕ್ ಹಾಗೂ 4 ಸ್ವಯಂಸೇವಾ ಸಂಸ್ಥೆಗಳು ಉತ್ತಮವಾಗಿ ಸೇವೆಯನ್ನು ಮಾಡುತ್ತಿವೆ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ವಿ.ಸ್ನಾತ್ತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಡಾ. ಮನೋಜ್ ಡೊಳ್ಳಿ ಅವರು ವಹಿಸಿದ್ದರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿರೂಪಾಕ್ಷರೆಡ್ಡಿ ಮಾದಿನೂರು, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಎಸ್.ಕೆ.ದೇಸಾಯಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ, ಸ.ಪ್ರ.ದ. ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಶೋಭಾ ಸೇರಿದಂತೆ ಅನೇಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.  

ಹೆಚ್.ಐ.ವಿ./ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಐಸಿಟಿಸಿ-ಕನಕಗಿರಿ, ಎ.ಆರ್.ಟಿ.-ಕೊಪ್ಪಳ, ಡಿ.ಎಸ್.ಆರ್.ಸಿ.-ಗಂಗಾವತಿ, ಬ್ಲಡ್ಬ್ಯಾಂಕ್-ಕೊಪ್ಪಳ, ಸಿ.ಎಸ್.ಸಿ. (ಸಂರಕ್ಷ)-ಕೊಪ್ಪಳ ಹಾಗೂ ಎನ್.ಎಸ್.ವಿ. ಮೋಟಿವೇಟರ್ ಆದಂತಹ ನೇತಾಜಿ, ಪ್ರ.ಶಾ.ತಂತ್ರಜ್ಞರು, ಸಾ.ಆ.ಮುನಿರಾಬಾದ್ ಇವರೆಲ್ಲರಿಗೂ ಸನ್ಮಾನವನ್ನು ಮಾಡಲಾಯಿತು.  ಆಪ್ತಸಮಾಲೋಚಕ ಅಮರೇಶ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.  ಜಿಲ್ಲಾ ಮೇಲ್ವಿಚಾರಕ ಚಿದಾನಂದ ಹೆಚ್.ಇಂಡಿ ಸರ್ವರನ್ನು ಸ್ವಾಗತಿಸಿದರು.  ಎ.ಆರ್.ಟಿ. ಯ ಶ್ರೀಕಾಂತ್ ಕೊನೆಯಲ್ಲಿ ವಂದಿಸಿದರು.