ಬೆಂಗಳೂರಿನಲ್ಲಿ ಮತ್ತೆ ಲಾಕ್ಡೌನ್ ಜಾರಿಯಿಲ್ಲ : ಸಿಎಂ

ಬೆಂಗಳೂರು, ಜೂನ್ 26,ಬೆಂಗಳೂರಿನಲ್ಲಿ ಮತ್ತೆ ಲಾಕ್ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.ಸರ್ವ ಪಕ್ಷ ಸಬೆಗೂ ಮುನ್ನ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು, ರಾಜ್ಯದ ಆರ್ಥಿಕ ಸುಧಾರಣೆಯು ಬಹಳ   ಮುಖ್ಯವಾಗಿದೆ. ಕೊವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನ   ಸರ್ವ ಪಕ್ಷ ಶಾಸಕರ ಸಭೆ ಕರೆಯಲಾಗಿದೆ  ಅವರವರ ವಿಧಾನಸಭಾ ಕ್ಷೇತ್ರಗಳಲ್ಲಿ ಅವರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ವಿಪಕ್ಷಗಳ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ   ಕೊರೊನಾ ನಿಯಂತ್ರಣದಲ್ಲಿ ದೇಶದಲ್ಲೇ ಬೆಂಗಳೂರು ಮಾದರಿಯಾಗಿದೆ. ನಾವು ಯಶಸ್ವಿಯಾಗಿದ್ದೆವೆ  ಆದರೆ ಕೆಲವು ದಿನಗಳಿಂದ ಸೋಂಕು ಹೆಚ್ಚಳವಾಗುತ್ತಿದೆ.

ಪ್ರತಿಯೊಬ್ಬ ಶಾಸಕರು, ಸಚಿವರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳ ಕಡೆಗೆ ಗಮನ ನೀಡಬೇಕು ಸಭೆಯಲ್ಲಿ ವಿವರವಾಗಿ ಸಮಾಲೋಚನೆ ಮಾಡುವುದಾಗಿ  ಸಿಎಂ ಹೇಳಿದರು.ರಾಜ್ಯದ ಆರ್ಥಿಕತೆಯೂ ಮುಖ್ಯವಾಗಿರುವ ಕಾರಣ ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಮತ್ತೆ ಲಾಕ್ಡೌನ್ ಮಾಡುವ ಪ್ರಶ್ನೆಯೇ ಇಲ್ಲ, ಕೆಲವು ಪ್ರದೇಶಗಳನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಉಳಿದ ಪ್ರದೇಶಗಳಲ್ಲಿ ಸಂಚಾರ ಎಂದಿನಂತೆಯೇ ಸಾಗಲಿದೆ  ಇದಕ್ಕೆ ಶಾಸಕರು, ಸಚಿವರು ಎಲ್ಲರ ಸಹಕಾರ  ಬಹಳ ಅಗತ್ಯ ಎಂದು ಯುಡಿಯೂರಪ್ಪ ಹೇಳಿದರು.