ನನಗಾದ ಅನ್ಯಾಯ ಯಾರಿಗೂ ಆಗಬಾರದು : ದೇವೇಂದ್ರ

ಲೋಕದರ್ಶನ ವರದಿ

ಬೆಳಗಾವಿ 27: ಕೃಷಿಯಲ್ಲಿ ನಿರತನಾದ ನನ್ನನ್ನು ವಿವಿಧ ಆಸೆೆ ತೋರಿ ಸುವರ್ಣ ವಾಹಿನಿ ರಿಯಾಲಿಟಿ ಶೋನಲ್ಲಿ ಆಯ್ಕೆಮಾಡಿಕೊಂಡರು 22 ದಿನ ಸ್ಪಧರ್ಾಳು ಆಗಿ ಭಾಗವಹಿಸಿದ್ದ ನನಗೆ ಬರಬೇಕಾದ 90 ಸಾವಿರ ಬಹುಮಾನ ಮೊತ್ತ ನೀಡದೇ ಮಾನಸಿಕ, ಶಾರೀರಿಕವಾಗಿ ನನಗೆ ಹಿಂಸೆ ನೀಡಿ ಹೊರ ಹಾಕಿದ್ದಾರೆ. ನನಗೆ ಆದ ಅನ್ಯಾಯ ಯಾರಿಗೂ ಬರಬಾರದು ಎಂದು ಕಿತ್ತೂರ ಸಮೀಪದ ಗಿರಿಯಾಲ ಗ್ರಾಮದ ದೇವೇಂದ್ರ ಶಿವಪ್ಪ ದೊಡ್ಡನಾಯ್ಕರ ತಮ್ಮ ಅಹವಾಲು ತೋಡಿಕೊಂಡರು. 

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಗಿರಿಯಾಲ ಗ್ರಾಮದಲ್ಲಿ ಕೃಷಿ ಕಾಯಕ ಜೊತೆಗೆ ಕುಸ್ತಿ ಆಡುವದು ಮಾಡುತ್ತಿದ್ದೆ ಸುವರ್ಣ ವಾಹಿನಿಯವರು ಒಮ್ಮೆ ಬಂದು 3 ಜನರಲ್ಲಿ ನನ್ನನ್ನು ಆಯ್ಕೆ ಮಾಡಿಕೊಂಡರು ರಿಯಾಲಿಟಿ ಶೋನಲ್ಲಿ 22 ದಿನ ಪ್ರವೇಶ ಪಡೆದ ನನಗೆ ಅವರಿಂದ ಸಾಕಷ್ಟು ಹಿಂಸೆಯಾಯಿತು. 2 ಸ್ಪಧರ್ೆಗಳಲ್ಲಿ ನಾನು 90 ಸಾವಿರ ರೂ ಗೆದ್ದಿದೆ. ಈ ಹಣದ ಕುರಿತು ಕೇಳಿದಾಗ ನಾನು ಊರಲ್ಲಿ ಗರಡಿ ಮನೆ ನಿಮರ್ಿಸುವ ಕುರಿತು ಹೇಳಿದ್ದೆ ಆದರೆ ಅವರ ಅತೀ ಒತ್ತಡ ಹಿಂಸೆಯಿಂದ ಇದ್ದಾಗಲೇ ಅವರು ನನ್ನನ್ನು ಊರಿಗೆ ಕಳುಹಿಸಿ ಯಾರ ಜೊತೆಗೂ ಬೇರೆಯಬೇಡ ಎಂದು ತಾಕೀತು ಮಾಡಿದ್ದರು 24 ಗಂಟೆ ಅವಧಿಯಲ್ಲಿ 2ತಾಸು ಮಾತ್ರ ನಿದ್ರೆಗೆ ಅವಕಾಶ ಮಾಡಿ ಕೊಡುತ್ತಿದ್ದರು ಹಣದಿಂದ ಏನಾದರೂ ಮಾಡಿಕೊಳ್ಳ್ಳುವ ಆಸೆಯಿಂದ ಎಲ್ಲವನ್ನು ಸಹಿಸಿಕೊಂಡಿದ್ದೇ ಕೊನೆಗೆ ನನಗೆ ಹಣ ನೀಡದೇ ಮಾನಸಿಕ, ದೈಹಿಕ ಹಿಂಸೆ ನೀಡಿ ನನಗೆ ಕೈ ಬಿಟ್ಟಿದ್ದಾರೆ ಸದ್ಯ 20 ಕೆ ಜಿ ಸೊರಗಿ ಹೋಗಿದ್ದಾರೆ ಈಗ ನನಗೆ ಮಾನಸಿಕ ಹಿಂಸೆ ಆಗಿದೆ ಈಗ ನನಗೆ ನ್ಯಾಯವಾಗಿ ಬರಬೇಕಾಗಿದೆ. 90 ಸಾವಿರ ರೂ ಬರಬೇಕೆಂದು ನಾನು ಕೋರುತ್ತೇನೆ ಎಂದರು. ನ್ಯಾಯವಾದಿ ಸಲಹಾ ತಜ್ಞ ಎಫ್. ಎಸ್. ಪಾಟೀಲ ಅವರು ಮಾತನಾಡಿ ಸಂಸೃತಿ, ತತ್ವ ನಾಗರಿಕತೆ ಇಲ್ಲದ ರೀತಿಯಲ್ಲಿ ಹಾಗೂ ಹಳ್ಳಿಯವರಿಗೆ ಅವಮಾನ ಆಗುವ ರೀತಿಯಲ್ಲಿ ರಿಯಾಲಿಟಿ ಶೋನಲ್ಲಿ ವಾಹಿನಿಯವರು ನಡೆಸಿ ಕೊಳ್ಳುತ್ತಾರೆ. ಪ್ರಸಾರ ಭಾರತಿ ಆ್ಯಕ್ಟ ಅಡಿಯಲ್ಲಿ ಈ ಕುರಿತು ಬದಲಾವಣೆ ಆಗಬೇಕು ಟಿ.ಆರ್.ಪಿ ಜಾಹಿರಾತು ಹೆಚ್ಚಿಸಿಕೊಳ್ಳುವ ಸಲುವಾಗಿ ಕೆಳ ಹಂತಕ್ಕೆ ಇಳಿಯುವುದನ್ನು ತಪ್ಪಿಸುವ ಕಾನೂನು ತಿದ್ದುಪಡಿಯಾಗಬೇಕು. 

ದೇವೇಂದ್ರನಿಗೆ ಆದ ಅನ್ಯಾಯ ಕುರಿತು ಚ್ಯಾನೆಲ್ರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದೇನೆ. ಅದರ ಉತ್ತರ ಬಂದ ಮೇಲೆ ಮುಂದೆ ತೆಗೆದುಕೊಳ್ಳಬಹುದಾದ ಕಾನೂನು ಕ್ರಮಗಳ ಕುರಿತು ಚಚರ್ಿಸುವುದಾಗಿ ನ್ಯಾಯವಾದಿ ಪಾಟೀಲ ವಿವರಿಸಿದರು.