ಶಾಲೆ ಪುನರ್ ಆರಂಭಿಸುವ ಬಗ್ಗೆ ನಿರ್ಧರಿಸಿಲ್ಲ: ಎಸ್.ಸುರೇಶ್ ಕುಮಾರ್

ಕಲಬುರಗಿ, ಜೂ.7,ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲೆ ಪುನರ್ ಆರಂಭದ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದ್ದು, ಯಾವಾಗ ಶಾಲೆ ಆರಂಭಿಸಬೇಕು ಎಂಬ ಕುರಿತು ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆ ಪುನರ್ ಆರಂಭಿಸುವ ಕುರಿತು ಪೋಷಕರು ಮತ್ತು ಪಾಲುದಾರರ ಅಭಿಪ್ರಾಯ ಪಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶಿಕ್ಷಣ ತಜ್ಞರುಗಳ ಅಭಿಪ್ರಾಯ ಪಡೆದು ಕೇಂದ್ರ ಸರ್ಕಾರದ ಎಸ್.ಓ.ಪಿ. ಮಾರ್ಗಸೂಚಿಯನ್ವಯ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ಕೊರೊನಾದಿಂದ ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗುವುದರಿಂದ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಹೊರೆಯಾಗದಂತೆ ಪಠ್ಯಕ್ರಮ ಸಿದ್ದಪಡಿಸಲು ಮತ್ತು ಮುಂದಿನ ಶೈಕ್ಷಣಿಕ ಚಟುವಟಿಕೆಯ ರೂಪುರೇಷೆ ಬಗ್ಗೆ ಡಿ.ಎಸ್.ಇ.ಆರ್.ಟಿ. ಅಧ್ಯಯನ ನಡೆಸುತ್ತಿದೆ ಎಂದು ತಿಳಿಸಿದರು. ಇತ್ತೀಚೆಗೆ ಆನ್‍ಲೈನ್ ಪಾಠ ಬೋಧನೆಗೆ ಎಲ್ಲೆಡೆ ವಿರೋಧ ಕೇಳಿಬರುತ್ತಿದೆ. ಆನ್‍ಲೈನ್ ಪಾಠ ಮಕ್ಕಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತೆ, ಎಷ್ಟು ವಯಸ್ಸಿನ ಮಕ್ಕಳಿಗೆ ಆನ್‍ಲೈನ್ ಪಾಠ ಭೋಧಿಸಬಹುದು ಎಂಬ ಬಗ್ಗೆ ನಿಮ್ಹಾನ್ಸ್ ಗೆ ಪತ್ರ ಬರೆಯಲಾಗಿತ್ತು. ಇದೀಗ ಅವರಿಂದ ಉತ್ತರ ಬಂದಿದ್ದು, ಇದರ ಸಾಧಕ-ಬಾಧಕ ಚರ್ಚಿಸಿ ಆನ್‍ಲೈನ್ ಪಾಠದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಜೂ.18 ರಂದು ದ್ವಿತೀಯ ಪಿ.ಯು.ಸಿ.ಯ ಇಂಗ್ಲೀಷ್ ಪರೀಕ್ಷೆ ನಡೆಯಲಿದ್ದು, ತದನಂತರ ಪಿ.ಯು.ಸಿ.ಉಪನ್ಯಾಸಕರ ನೇಮಕಾತಿಯ ಕೌನ್ಸಿಲಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು. ಪರೀಕ್ಷೆಯ ಮೂರು ದಿನ ಮುನ್ನ ನಿಗಧಿತ ಪರೀಕ್ಷಾ ಕೇಂದ್ರ ಪ್ರದೇಶವು ಕಂಟೇನ್‍ಮೆಂಟ್ ಝೋನ್ ಎಂದು ಘೋಷಣೆಯಾದ್ದಲ್ಲಿ ಅಲ್ಲಿನ ಮಕ್ಕಳನ್ನು ಬೇರೆ ಪ್ರದೇಶದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ಸುಭಾಷ್ ಗುತ್ತೇದಾರ್, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ್, ಎಂ.ಎಲ್.ಸಿ. ಬಿ.ಜಿ.ಪಾಟೀಲ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಳೀನ್ ಅತುಲ್, ಕಲಬುರಗಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ, ಯಾದಗಿರಿ ಜಿಲ್ಲಾ ಪಂಚಯತ್ ಸಿ.ಇ.ಓ. ಶಿಲ್ಪಾ ಶರ್ಮಾ ಉಪಸ್ಥಿತರಿದ್ದರು.

ಕಲಬುರಗಿ, ಜೂ.7,ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಪ್ರಸಕ್ತ  ಶೈಕ್ಷಣಿಕ ಸಾಲಿನ ಶಾಲೆ ಪುನರ್ ಆರಂಭದ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದ್ದು, ಯಾವಾಗ ಶಾಲೆ ಆರಂಭಿಸಬೇಕು ಎಂಬ ಕುರಿತು ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ  ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆ ಪುನರ್ ಆರಂಭಿಸುವ ಕುರಿತು ಪೋಷಕರು ಮತ್ತು ಪಾಲುದಾರರ ಅಭಿಪ್ರಾಯ ಪಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶಿಕ್ಷಣ ತಜ್ಞರುಗಳ ಅಭಿಪ್ರಾಯ ಪಡೆದು ಕೇಂದ್ರ ಸರ್ಕಾರದ ಎಸ್.ಓ.ಪಿ. ಮಾರ್ಗಸೂಚಿಯನ್ವಯ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.  ಕೊರೊನಾದಿಂದ ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗುವುದರಿಂದ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಹೊರೆಯಾಗದಂತೆ ಪಠ್ಯಕ್ರಮ ಸಿದ್ದಪಡಿಸಲು ಮತ್ತು ಮುಂದಿನ ಶೈಕ್ಷಣಿಕ ಚಟುವಟಿಕೆಯ ರೂಪುರೇಷೆ ಬಗ್ಗೆ ಡಿ.ಎಸ್.ಇ.ಆರ್.ಟಿ. ಅಧ್ಯಯನ ನಡೆಸುತ್ತಿದೆ ಎಂದು  ತಿಳಿಸಿದರು. 

ಇತ್ತೀಚೆಗೆ ಆನ್‍ಲೈನ್ ಪಾಠ ಬೋಧನೆಗೆ ಎಲ್ಲೆಡೆ ವಿರೋಧ ಕೇಳಿಬರುತ್ತಿದೆ. ಆನ್‍ಲೈನ್ ಪಾಠ ಮಕ್ಕಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತೆ, ಎಷ್ಟು ವಯಸ್ಸಿನ ಮಕ್ಕಳಿಗೆ ಆನ್‍ಲೈನ್ ಪಾಠ ಭೋಧಿಸಬಹುದು ಎಂಬ ಬಗ್ಗೆ ನಿಮ್ಹಾನ್ಸ್ ಗೆ ಪತ್ರ ಬರೆಯಲಾಗಿತ್ತು. ಇದೀಗ ಅವರಿಂದ ಉತ್ತರ ಬಂದಿದ್ದು, ಇದರ ಸಾಧಕ-ಬಾಧಕ ಚರ್ಚಿಸಿ ಆನ್‍ಲೈನ್ ಪಾಠದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.    ಜೂ.18 ರಂದು ದ್ವಿತೀಯ ಪಿ.ಯು.ಸಿ.ಯ ಇಂಗ್ಲೀಷ್ ಪರೀಕ್ಷೆ ನಡೆಯಲಿದ್ದು, ತದನಂತರ ಪಿ.ಯು.ಸಿ.ಉಪನ್ಯಾಸಕರ ನೇಮಕಾತಿಯ ಕೌನ್ಸಿಲಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.  ಪರೀಕ್ಷೆಯ ಮೂರು ದಿನ ಮುನ್ನ ನಿಗಧಿತ ಪರೀಕ್ಷಾ ಕೇಂದ್ರ ಪ್ರದೇಶವು ಕಂಟೇನ್‍ಮೆಂಟ್ ಝೋನ್ ಎಂದು ಘೋಷಣೆಯಾದ್ದಲ್ಲಿ ಅಲ್ಲಿನ ಮಕ್ಕಳನ್ನು ಬೇರೆ ಪ್ರದೇಶದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು  ಹೇಳಿದರು.   ಈ ಸಂದರ್ಭದಲ್ಲಿ ಶಾಸಕರಾದ ಸುಭಾಷ್ ಗುತ್ತೇದಾರ್, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ್, ಎಂ.ಎಲ್.ಸಿ. ಬಿ.ಜಿ.ಪಾಟೀಲ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಳೀನ್ ಅತುಲ್, ಕಲಬುರಗಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ, ಯಾದಗಿರಿ ಜಿಲ್ಲಾ ಪಂಚಯತ್ ಸಿ.ಇ.ಓ. ಶಿಲ್ಪಾ ಶರ್ಮಾ ಉಪಸ್ಥಿತರಿದ್ದರು.