ದೇಶದ ಎಲ್ಲಿಯೂ ಬಡವರ ಮತದಾನ ಹಕ್ಕು ಕಸಿಯುವ ಕಾರ್ಯ ನಡೆದಿಲ್ಲ : ಸಿ ಟಿ ರವಿ

ದೇಶದ ಎಲ್ಲಿಯೂ ಬಡವರ ಮತದಾನ ಹಕ್ಕು ಕಸಿಯುವ ಕಾರ್ಯ ನಡೆದಿಲ್ಲ : ಸಿ ಟಿ ರವಿ  No attempt has been made anywhere in the country to snatch away the voting rights of the poor: C.T.

ಲೋಕದರ್ಶನ ವರದಿ 

        ಬೆಳಗಾವಿ  09: ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಬಿಜೆಪಿ ಪಕ್ಷದ ಸಂಘಟನಾತ್ಮಕ ಸಭೆಯನ್ನು ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ  ಮಾತನಾಡಿ ಎಸ್‌.ಐ.ಆರ್ ಒಂದು ಸಹಜ ಪ್ರಕ್ರಿಯೆ. ಇದುವರೆಗೂ ಸುಮಾರು ಎಂಟು ಬಾರಿ ಎಸ್‌.ಐ.ಆರ್ ಪ್ರಕ್ರಿಯೆಗಳು ದೇಶದಲ್ಲಿ ನಡೆದಿವೆ. ಎಲ್ಲಿಯೂ ಬಡವರ ಮತದಾನದ ಹಕ್ಕು ಕಸಿಯುವ ಪ್ರಕ್ರಿಯೆ (’ಕುತಂತ್ರ’) ನಡೆದಿಲ್ಲ. ಅದು ಎಸ್‌ಐಆರ್ ನೀತಿಯೂ ಅಲ್ಲ ಉದ್ದೇಶವೂ ಅಲ್ಲ.ಬಿ.ಎಲ್‌.ಓ ಗಳು ಪ್ರತಿ ಮನೆಗೆ ಹೋಗಿ ನೈಜ ಮತದಾರರಿಗೆ ಮತದಾನದ ಹಕ್ಕು ದೊರಕುವಂತೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಿದರು. ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ ರಾಜೀವ ಮಾತನಾಡಿ  ಈ ರೀತಿ ಪ್ರತಿ ಮನೆಗೆ ಹೋಗುವುದಕ್ಕೆ ಅಡ್ಡಿ ಮಾಡಿ, ಒಂದೇ ಕಡೆ ಎಲ್ಲರನ್ನು ಜಾತ್ರೆಯಂತೆ ಸೇರಿಸಿ ಬಿ.ಎಲ್‌.ಓ ಗಳ ಮೇಲೆ ಒತ್ತಡ ತರುವುದು ಒಂದು ಸಂವಿಧಾನಾತ್ಮಕವಾಗಿ ರಚಿತವಾಗಿರುವ ಸರ್ಕಾರ ಮಾಡುವ ಘನ ಕಾರ್ಯವೇ? "ನುಡಿದಂತೆ ನಡೆಯುತ್ತೇನೆ" ಎಂದು ಪದೇ ಪದೇ ಸಿಕ್ಕ ವೇದಿಕೆಗಳಲ್ಲೆಲ್ಲಾ ಘೋಷಿಸುವ  ಮುಖ್ಯಮಂತ್ರಿಗಳು ರಾಜ್ಯದಲ್ಲಿ ಹಾಲಿ ಇರುವ ಎಸ್‌.ಐ.ಆರ್ ಪ್ರಕ್ರಿಯೆ ಬಗ್ಗೆ ದ್ವಂದ್ವ ನೀತಿ ಪ್ರದರ್ಶಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.   

        ಸಂಸದರಾದ ಜಗದೀಶ್ ಶೆಟ್ಟರ ಮಾತನಾಡಿ ಗ್ರಾಮ ಪಂಚಾಯಿತಿ,ತಾ.ಪಂ,ಜಿ.ಪಂ ಈ ವರ್ಷದ ಕೊನೆಯಲ್ಲಿ ನಡೆಯುವ ಸಾಧ್ಯತೆ ಇದ್ದು ಪಕ್ಷದ ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳು ಕಾರ್ಯಪ್ರವತ್ತರಾಗಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವದು ಕಾರ್ಯಕರ್ತರ ಕೆಲಸ ಎಂದರು. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ ಕೇಂದ್ರ ಸರ್ಕಾರದ ಹಾಗೂ ಹಿಂದಿನ ಬಿಜೆಪಿ ಆಡಳಿತದ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಕರೆ ನೀಡಿದರು.ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷರಾದ ಗೀತಾ ಸುತಾರ, ಶಾಸಕರಾದ ವಿಠ್ಠಲ ಹಲಗೆಕರ, ಸಾಬಣ್ಣ ತಳವಾರ, ಮಾಜಿ ಸಂಸದರಾದ ಈರಣ್ಣ ಕಡಾಡಿ, ಮಂಗಳಾ ಅಂಗಡಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ವಿಶ್ವನಾಥ್ ಪಾಟೀಲ್, ಅನಿಲ ಬೆನಕೆ, ಜಗದೀಶ್ ಮೆಟಗುಡ್ಡ, ಮಹಾಂತೇಶ ದೊಡ್ಡಗೌಡರ ,ಅರವಿಂದ ಪಾಟೀಲ ಮುಖಂಡರಾದ ಎಂ.ಬಿ.ಜಿರಲಿ, ಧನಶ್ರೀ ದೇಸಾಯಿ, ಸಂದೀಪ ದೇಶಪಾಂಡೆ ಹಾಗೂ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.