ಧಾರವಾಡ, ಜು.2 : ಪ್ರಾಣಿಬಲಿ ಅಪೇಕ್ಷಿಸುವುದು ರಾಕ್ಷಸ ಪರಂಪರೆಯ ದುಷ್ಟ ನಡೆಯಾಗಿದ್ದು, ಜಗಜ್ಜನನಿ ಶ್ರೀಪಾರ್ವತಿ ಮಹಾಮಾತೆಯ ಅವತಾರವಾಗಿರುವ ಯಾವ ಶಕ್ತಿದೇವಿಯೂ ಪ್ರಾಣಿ ಬಲಿಯನ್ನು ಕೇಳುವದಿಲ್ಲ ಎಂದು ನವಲಗುಂದ ಪಂಚಗೃಹ ಹಿರೇಮಠದ ಶ್ರೀಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರತಿಪಾದಿಸಿದರು.
ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಜರುಗುತ್ತಿರುವ 11 ದಿನಗಳ ಗ್ರಾಮದೇವತಾ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಸದ್ಭಾವನಾ ಧರ್ಮ ಸಮಾವೇಶದ 3ನೆಯ ದಿನದ ಸಮಾರಂಭದಲ್ಲಿ ಉಪದೇಶಾಮೃತ ನೀಡಿ ಮಾತನಾಡುತ್ತಿದ್ದರು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ವಿಭಿನ್ನ ಶಕ್ತಿದೇವಿಯರ ಹೆಸರಿನಲ್ಲಿ ಹಿಂಸೆಯನ್ನು ಪ್ರಚೋದಿಸಿ ಪ್ರಾಣಿಬಲಿಗೆ ಕಾರಣನಾಗುತ್ತಿದ್ದಾನೆ. ಕೆಲವೆಡೆ ಅನೇಕ ವಿಧದ ಪ್ರಾಣಿಬಲಿ ನಡೆಯುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಅಮ್ಮಿನಬಾವಿ ಗ್ರಾಮದಲ್ಲಿ 27 ವರುಷಗಳ ನಂತರ ನಡೆದಿರುವ ಗ್ರಾಮದೇವತೆಯರ ಜಾತ್ರೆಯು ಸಂಪೂರ್ಣ ಅಹಿಂಸಾ ತತ್ವದ ಅಡಿಯಲ್ಲಿ ನಡೆದಿರುವುದು ಎಲ್ಲರ ಪ್ರಶಂಸೆಗೆ ಪ್ರಾತ್ರವಾಗಿದೆ ಎಂದವರು ಶ್ಲ್ಯಾಘಿಸಿದರು.
ಸದ್ಭಾವನಾ ಧರ್ಮ ಸಂದೇಶ ನೀಡಿದ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಹಣದ ಶ್ರೀಮಂತಿಕೆಗಿಂತ ಗುಣ ಶ್ರೀಮಂತಿಕೆ ಬೆಳೆದರೆ ಮನುಷ್ಯನ ಬದುಕಿಗೆ ಮೆರಗು. ವಿದ್ಯೆ, ಯೌವನ, ಸಂಪತ್ತು, ಸೌಂದರ್ಯ, ಕಲೆ ಮುಂತಾದವುಗಳ ಮೂಲಕ ಗರ್ವಪಟ್ಟುಕೊಳ್ಳವ ಮಾನವನ ವಿಕಾಸ ಅಸಾಧ್ಯವಾಗುತ್ತದೆ ಎಂದರು. ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ಸಾನ್ನಿಧ್ಯವಹಿಸಿದ್ದರು.
ಗುರುರಕ್ಷೆ ಗೌರವ : ಅಮ್ಮಿನಬಾವಿ ಗ್ರಾಮದೇವತೆಯ ನೂತನ ದೇವಾಲಯದ ನಕ್ಷೆ ಸಿದ್ಧಪಡಿಸಿ ಸುಂದರ ವಿನ್ಯಾಸಕ್ಕೆ ಮಾರ್ಗದರ್ಶನ ಮಾಡಿದ ಮೈಸೂರಿನ ಸ್ಕೂಲ್ ಆಫ್ ಆಕರ್ಿಟೆಕ್ಷರ್ ಸಹಾಯಕ ಪ್ರಾಧ್ಯಾಪಕಿ ಶೃತಿ ಮುತಾಲಿಕದೇಸಾಯಿ ಅವರಿಗೆ ಗುರುರಕ್ಷೆಯ ಗೌರವ ನೀಡಿ ಆಶೀರ್ವದಿಸಲಾಯಿತು. ಶಿವಾನಂದ ತಡಕೋಡ ಸ್ವಾಗತಿಸಿದರು. ವಿನಾಯಕ ಹಿರೇಮಠ ವಂದಿಸಿದರು. ಒಂದನೇ ತರಗತಿಯ ವಿದ್ಯಾಥರ್ಿನಿಯರಾದ ಸ್ಫೂತರ್ಿ ಹೋರಿ ಹಾಗೂ ಸಂಜನಾ ಗೌರಿಪುರ ವಚನ ಸಂಗೀತ ಪ್ರಸ್ತುತಪಡಿಸಿದರು.