ನಿರ್ಭಯಾ ಪ್ರಕರಣ ನ್ಯಾಯಾಲಯದ ತೀರ್ಪು ಆದಷ್ಟು ಶೀಘ್ರ ಜಾರಿಗೊಳ್ಳಬೇಕು; ವೆಂಕಯ್ಯನಾಯ್ಡು

ನವದೆಹಲಿ, ಫೆ 4,  ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ  ವಿಧಿಸಿರುವ ಗಲ್ಲು ಶಿಕ್ಷೆ  ಜಾರಿ  ವಿಳಂಬಗೊಳ್ಳುತ್ತಿರುವುದಕ್ಕೆ      ಸಭಾಪತಿ  ಎಂ. ವೆಂಕಯ್ಯ ನಾಯ್ಡು  ಮಂಗಳವಾರ      ರಾಜ್ಯ ಸಭೆಯಲ್ಲಿ  ಕಳವಳ ವ್ಯಕ್ತಪಡಿಸಿ,  ನಿರ್ಭಯಾ ಪ್ರಕರಣದಲ್ಲಿ  ನ್ಯಾಯಾಲಯದ  ತೀರ್ಪನ್ನು  ಆದಷ್ಟು ಬೇಗ  ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.ಶೂನ್ಯ ವೇಳೆಯಲ್ಲಿ  ಆಮ್ ಆದ್ಮಿ ಪಕ್ಷದ  ಸಂಜಯ್ ಸಿಂಗ್  ಪ್ರಸ್ತಾಪಿಸಿದ      ವಿಷಯದ ಬಗ್ಗೆ  ಮಾತನಾಡಿದ ಸಭಾಪತಿಗಳು,      ಈ ದೇಶದಲ್ಲಿ ಈ ರೀತಿಯ  ಬೆಳವಣಿಗೆಗಳನ್ನು  ಮುಂದುವರಿಸಲು ನಾವು  ಅವಕಾಶ ನೀಡಬಾರದು.  ಎಲ್ಲಾ ಕಾನೂನಾತ್ಮಕ  ಪರಿಹಾರ  ಮುಗಿದ ನಂತರವೂ       ಒಂದಾದ ಮೇಲೊಂದರಂತೆ  ಪ್ರಕ್ರಿಯೆಗಳು ನಡೆಯುತ್ತಿವೆ.  ಅಪರಾಧಿಗಳಿಗೆ  ಶಿಕ್ಷೆ  ವಿಧಿಸುವುದು ವಿಳಂಬವಾಗುತ್ತಿದೆ.  ನ್ಯಾಯಾಲಯದ      ತೀರ್ಪನ್ನು ಶೀಘ್ರ ಜಾರಿಗೆಗೊಳಿಸಲಾಗುವುದು ಎಂದು ಸಂಬಂಧಪಟ್ಟವರೆಲ್ಲರೂ ತಿಳಿದಿರಬೇಕು  ಎಂದರು. 

ದೇಶದ ಜನರಲ್ಲಿ  ತೀವ್ರ  ಕೋಪ,      ಅಸಮಧಾನದ   ಭಾವನೆ ಮೂಡಿದೆ        ಎಂದು ಎಚ್ಚರಿಸಿದ  ಸಭಾಪತಿ  ವೆಂಕಯ್ಯ ನಾಯ್ಡು,  '' ಸದಸ್ಯರು ಪ್ರಸ್ತಾಪಿಸಿರುವ      ವಿಷಯ ಅತ್ಯಂತ ಸೂಕ್ಷ್ಮ ಮತ್ತು ಮಹತ್ವದ್ದಾಗಿದೆ. ಇಡೀ ದೇಶವು  ಈ ವಿಷಯದ  ಬಗ್ಗೆ ಮಾತನಾಡುತ್ತಿದೆ, ಜನರು ಆಕ್ರೋಶಗೊಂಡಿದ್ದಾರೆ. ಯಾವುದೇ ಕಾರಣವಿರಲಿ, ನಾನು ಯಾರ      ಹೆಸರುಗಳನ್ನು  ಉಲ್ಲೇಖಿಸಲು  ಬಯಸುವುದಿಲ್ಲ, ಆದರೆ  ಇದು  ಅತ್ಯಂತ  ವಿಳಂಬ ಎಂಬುದು ಸ್ಪಷ್ಟ.      ವ್ಯವಸ್ಥೆಯಲ್ಲಿರುವವರು  ತಮ್ಮ ಕರ್ತವ್ಯ  ಅರಿತುಕೊಂಡು ತಕ್ಷಣವೇ ಕಾರ್ಯನಿರ್ವಹಿಸಬೇಕು  ಎಂದು ಹೇಳಿದರು.

ಶೂನ್ಯ ವೇಳೆಯಲ್ಲಿ      ವಿಷಯ ಪ್ರಸ್ತಾಪಿಸಿದ  ಸಂಜಯ್ ಸಿಂಗ್,  ತಪ್ಪಿತಸ್ಥರಿಗೆ  ಶಿಕ್ಷೆ ವಿಧಿಸುವಲ್ಲಿ ವಿಳಂಬವಾಗುತ್ತಿದೆ. ಹಾಗಾಗಿ  ದೇಶದ  ಅತ್ಯನ್ನತ  ಅಧಿಕಾರ ಹೊಂದಿರುವವರು  ಈ ವಿಷಯದಲ್ಲಿ  ಮಧ್ಯಪ್ರವೇಶಿಸಬೇಕು ಎಂದು  ಮನವಿ ಮಾಡಿದರು.ನಿರ್ಭಯಾ ಪ್ರಕರಣದಲ್ಲಿ  ನಡೆದಿರುವ ಬೆಳವಣಿಗೆ  ಅತ್ಯಂತ  ಕೆಟ್ಟದಾಗಿದೆ.      ತ್ವರಿತಗತಿ  ನ್ಯಾಯಾಲಯ  ಸ್ಥಾಪಿಸಲಾಯಿತು, ಶಿಕ್ಷೆಯನ್ನೂ ವಿಧಿಸಲಾಯಿತು.  ನಂತರ ಏನೂ ಆಗಲಿಲ್ಲ. ಈ ಅಸಾಮಾನ್ಯ ವಿಳಂಬ ಉಂಟಾಗಿದೆ.      ತಪ್ಪಿತಸ್ಥರನ್ನು  ಆದಷ್ಟು ಬೇಗ ಗಲ್ಲಿಗೇರಿಸ ಬೇಕು      ನಾನು  ಮನವಿ ಮಾಡುತ್ತೇನೆ. ಮಧ್ಯಪ್ರವೇಶಿಸಿ  ಶಿಕ್ಷೆಯನ್ನು  ಖಾತರಿಪಡಿಸಬೇಕೆಂದು  ಸಿಂಗ್  ಆಗ್ರಹಿಸಿದರು.