ನವದೆಹಲಿ, ಜನವರಿ 29, ದೇಶವನ್ನೇ ನಡುಗಿಸಿದ್ದ ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ ಮುಖೇಶ್ ಸಿಂಗ್ ಕ್ಷಮಾಧಾನ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಆರ್ ಭಾನುಮತಿ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಅಪರಾಧಿ ಮುಖೇಶ್ ಕುಮಾರ್ ಸಿಂಗ್, ರಾಷ್ಟ್ರಪತಿ ರಾಂನಾಥ್ ಕೋವಿಂದ್ ಅವರು ಕ್ಷಮಾಧಾನ ಮನವಿ ತಿರಸ್ಕರಿಸಿದ ಕ್ರಮ ಪ್ರಶ್ನಿಸಿ ಅಪರಾಧಿ ಸಿಂಗ್ ಸಲ್ಲಿಸಿದ್ದ ಮನವಿ ವಜಾ ಮಾಡಿ ಬುಧವಾರ ತೀರ್ಪು ಪ್ರಕಟಿಸಿದೆ. ಈ ಹಿಂದೆ ನಾಲ್ವರು ಅಪರಾಧಿಗಳಾದ ಅಕ್ಷಯ್ ಮತ್ತು ಮುಖೇಶ್ ಸಿಂಗ್ , ವಿನಯ್ ಶರ್ಮಾ (26) ಮತ್ತು ಪವನ್ ಗುಪ್ತಾ (26) ಅವರುಗಳನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಫೆ.1ರಂದು ಬೆಳಗ್ಗೆ 6 ಗಂಟೆಗೆ ಗಲ್ಲಿಗೇರಿಸುವ ಬಗ್ಗೆ ಸಮಯ ನಿಗದಿಯಾಗಿತ್ತು. ಈಗ ಇದರ ಬಗ್ಗೆ ಇದ್ದ ಎಲ್ಲ ಅಡೆ ತಡೆಗಳು, ಕಾನೂನು ಸಮಸ್ಯೆಗಳು ನಿವಾರಣೆಯಾಗಿವೆ. ಅಪರಾಧಿಗಳು ನೇಣಿಗೆ ಕೊರಳುಕೊಡುವ ಸಮಯವೂ ಹತ್ತಿರವಾಗುತ್ತಿದೆ.