ನಿರ್ಭಯಾ ಪ್ರಕರಣ, ಪ್ರತ್ಯೇಕ ನೇಣು ಜಾರಿ ಮನವಿ ಮುಂದೂಡಿದ ಸುಪ್ರೀಂ ಕೋರ್ಟ್

ನವದೆಹಲಿ, ಫೆ 13:    ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲ  ಅಪರಾಧಿಗಳನ್ನು  ಪ್ರತ್ಯೇಕವಾಗಿ ನೇಣಿಗೆ ಹಾಕುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರ ಮಾಡಿದ್ದ  ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಮುಂದೂಡಿದೆ.

ನ್ಯಾಯಮೂರ್ತಿಗಳಾದ ಆರ್.ಭನುಮತಿ, ಅಶೋಕ್ ಭೂಷಣ್ ಮತ್ತು ಎಸ್ ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ  ಮುಂದೂಡಿದೆ.

ಅಪರಾಧಿ ಪವನ್ ಗುಪ್ತಾ ಪರ ವಕೀಲ  ಅಂಜನಾ ಪ್ರಕಾಶ್ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನ್ಯಾಯಲಯ ನೇಮಕ ಮಾಡಿತು, ಈ ಹಿಂದೆ ಅವರಿಗೆ ಸಹಾಯ ಮಾಡಲು ವಕೀಲರಿಲ್ಲ ಎಂದು ಹೇಳಿಕೊಂಡಿದ್ದರು.

ತಮ್ಮ 23 ವರ್ಷದ ಮಗಳನ್ನು ಕ್ರೂರವಾಗಿ ಹಿಂಸೆ ಮಾಡಿ, ನಂತರ ಬರ್ಬರವಾಗಿ  ಕೊಲೆ ಮಾಡಿದ  ಆರೋಪಿಗಳಿಗೆ ಬೇಗನೆ  ಹೊಸ ಡೆತ್ ವಾರಂಟ್ ಹೊರಡಿಸುವಂತೆ ನಿರ್ಬಯ ಪೋಷಕರು ಬುಧವಾರ ಮನವಿ ಮಾಡಿದ್ದರು .

ಫೆಬ್ರವರಿ 12 ಕ್ಕೆ ಮೊದಲು ಕಾನೂನು ಪ್ರಕ್ರಿಯೆಯನ್ನು ಕೊನೆಗೊಳಿಸಲು ದೆಹಲಿ ಹೈಕೋರ್ಟ್ ನೀಡಿದ ಒಂದು ವಾರದ ಗಡುವನ್ನು ಪೋಷಕರ ಪರ ವಕೀಲರು ನ್ಯಾಯಾಲಯದ  ಗಮನಕ್ಕೆ ತಂದಿದ್ದಾರೆ 

ಅಪರಾಧಿಗಳಲ್ಲೊಬ್ಬರಾದ ವಿನಯ್ ಶರ್ಮಾ, ಸಲ್ಲಿಸಿದ್ದ ಕ್ಷಮಾಧಾನದ  ಮನವಿಯನ್ನು  ರಾಷ್ಟ್ರಪತಿ ತಿರಸ್ಕರಿಸಿದ್ದು, ಅದನ್ನು ಕೋರ್ಟ್ ನಲ್ಲಿ  ಪ್ರಶ್ನೆ ಮಾಡಲಾಗಿದೆ ವಿಚಾರಣೆಗೆ  ಸಮಯ ತೆಗೆದುಕೊಳ್ಳುತ್ತದೆ ಎಂದೂ ವಾದಿಸಿದ್ದರು .

ಈ ವಿಷಯದಲ್ಲಿ ಪಟಿಯಾಲ ಹೌಸ್ ಕೋರ್ಟ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ವಿನಯ್ ಶರ್ಮಾ, ಪವನ್ ಗುಪ್ತಾ, ಮುಖೇಶ್ ಸಿಂಗ್ ಮತ್ತು ಅಕ್ಷಯ್ ಸಿಂಗ್ ಅವರಿಗೆ  ಜನವರಿ 22 ಮತ್ತು ನಂತರ ಫೆಬ್ರವರಿ 1 ರಂದು ಮರಣದಂಡನೆ ವಿಧಿಸುವಂತೆ  ಎರಡು  ಬಾರಿಡೆತ್ ವಾರೆಂಟ್  ಆದೇಶ  ಮಾಡಿದ್ದರೂ ಬೇರೆ ಬೇರೆ ಕಾರಣಕ್ಕಾಗಿ ಅದೂ ಜಾರಿಯಾಗಲಿಲ್ಲ,    ಮೇಲಾಗಿ  ದೆಹಲಿ ಹೈಕೋರ್ಟ್ ಅಪರಾಧಿಗಳನ್ನು ಪ್ರತ್ಯೇಕವಾಗಿ ಮರಣದಂಡನೆಗೊಳಪಡಿಸಲು  ಸಾಧ್ಯವಿಲ್ಲ ಎಂದು ಹೇಳಿತ್ತು  ಇದನ್ನು ಪ್ರಶ್ನೆ ಮಾಡಿ  ಕೇಂದ್ರ ಉನ್ನತ ನ್ಯಾಯಾಲಯದ ಮೊರೆ ಹೋಗಿತ್ತು.