ನಿಖಿಲ್ ಕುಮಾರಸ್ವಾಮಿ ಹ್ಯಾಟ್ರಿಕ್ ಸೋಲು: ಸುಮಲತಾ ಅಂಬರೀಶ್ ಪ್ರತಿಕ್ರಿಯೆ

ಸುಮಲತಾ ಅಂಬರೀಶ್

ಬೆಂಗಳೂರು 25: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿಪಿ ಯೋಗೀಶ್ವರ್ ಗೆದ್ದು ವಿರುದ್ಧ ನಿಖಿಲ್  ಮೂರನೇ ಬಾರಿಗೂ ಸೋಲು ಕಂಡಿರುವ ಕುರಿತು ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.

ಉಪಚುನಾವಣೆ ಅಂತ ಬಂದಾಗ ರೂಲಿಂಗ್ ಪಾರ್ಟಿ ಗೆಲ್ಲೋದು ಸರ್ವೇ ಸಾಮಾನ್ಯ. ಇದನ್ನು ನೋಡುತ್ತಾ ಕೂಡ ಬಂದಿದ್ದೇವೆ. ಯಾವುದೇ ಪಾರ್ಟಿ ಇರಲಿ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದಾನೇ ಹೋರಾಡುತ್ತಾರೆ. ನಿಖಿಲ್ ಸೋಲಿನ ಬಗ್ಗೆ ನಾನೇನು ರಿಯಾಕ್ಷನ್ ಕೊಡಲು ಇಷ್ಟಪಡುವುದಿಲ್ಲ. ನಿಖಿಲ್ ಇನ್ನೂ ಯುವಕ, ಒಳ್ಳೆಯ ಭವಿಷ್ಯವಿದೆ. ಒಳ್ಳೆಯದಾಗಲಿ ಎಂದು ಹಾರೈಸಿ ಸುಮ್ಮನಾಗಿದ್ದಾರೆ.