ನೀಲಕಂಠೇಶ್ವರ ದೇವಸ್ಥಾನದಲ್ಲಿ ನಿಜಗುಣಿ ಜಯಂತಿ ಕಾರ್ಯಕ್ರಮ
Nijaguni Jayanti program at Neelkantheshwara Temple
ಮಹಾಲಿಂಗಪುರ 07: ಕನ್ನಡ ನಾಡಿನಲ್ಲಿ ಅನೇಕ ಜನ ಸಾಧು ಸಂತರು, ತತ್ವಜ್ಞಾನಿಗಳು, ಸಿದ್ದರು, ಯೋಗಿಗಳು, ಅವಧುತರು, ಜ್ಞಾನಿಗಳು, ಮುಮುಕ್ಷಿಗಳು ಈ ನಾಡನ್ನು ಬೆಳಗಿದ್ದಾರೆ. ಅದರಲ್ಲಿ ನಿಜಗುಣ ಶಿವಯೋಗಿಗಳು ಒಬ್ಬರು ಅಧ್ಯಾತ್ಮ ಜಗತ್ತಿನಲ್ಲಿ ಹಲವು ಸಾಧನೆಗೆ, ಅನೇಕ ಪ್ರವಚನಗಳಿಗೆ ದಾರಿ ದೀಪವಾಗಿದ್ದಾರೆ. ಅಧ್ಯಾತ್ಮ ಕ್ಷೇತ್ರದ ಮುಳುಗದ ಸೂರ್ಯ ಎಂದು ಕೋಳೂರಿನ ಶಂಭುಲಿಂಗ ಆಶ್ರಮದ ಪ, ಪೂ, ಪ್ರಕರಣ ಪ್ರವೀಣ ಕೃಷ್ಣಗೌಡ ಪಾಟೀಲ ಹೇಳಿದರು.
ಸ್ಥಳೀಯ ನೀಲಕಂಟೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯುತ್ತಿರುವ ನಿಜಗುಣ ಶಿವಯೋಗಿಗಳ ಜಯಂತಿ ಕಾರ್ಯಕ್ರಮದ ಮುಖ್ಯ ಪ್ರವಚಣಕಾರರಾಗಿ ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಸಿ ಮಾತನಾಡಿ ನಿಜಗುಣ ಶಿವಯೋಗಿಗಳ ಕಾಲಮಾನ ಕ್ರಿ.ಶ.15 ನೇ ಶತಮಾನ ಇರಬೇಕೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇವರು ಚಾಮರಾಜನಗರ ಜಿಲ್ಲೆಯ ಚಿಲುಕವಾಡಿಯ ಸುತ್ತಲಿರುವ ಪ್ರದೇಶಕ್ಕೆ ಪಾಳೆಯಗಾರರಾಗಿದ್ದರು. ಆಧ್ಯಾತ್ಮಕ್ಕೆ ಒಲಿದ ನಿಜಗುಣ ಶಿವಯೊಗಿಗಳು ತಮ್ಮ ಪಟ್ಟವನ್ನು ತ್ಯಜಿಸಿ, ಚಿಲುಕವಾಡಿಯ ಬಳಿಯ ಶಂಭುಲಿಂಗನ ಬೆಟ್ಟದಲ್ಲಿ ಹಲವು ವರ್ಷ ತಪಸ್ಸುಗೈದರೆಂದು ಹೇಳಲಾಗುತ್ತಿದೆ.
ಕೈವಲ್ಯ ಪದ್ಧತಿ
ಹುಟ್ಟಿನಿಂದಲೇ ನಿಜಗುಣರು ಕವಿಹೃದಯವುಳ್ಳವರಾಗಿದ್ದರು. ಯೋಗಸಾಧನೆ ಮಾಡುತ್ತಿದ್ದಾಗಲೇ ಅವರು ತಮ್ಮ ಅನುಭವಗಳನ್ನು ಕವಿತೆಗಳ ರೂಪದಲ್ಲಿ ಹಾಡಿಕೊಳ್ಳುತ್ತಿದ್ದರು. ಅವರಿಗೆ ಸಂಗೀತದಲ್ಲಿಯೂ ಹೆಚ್ಚಿನ ಪಾಂಡಿತ್ಯವಿತ್ತು. ಆಧ್ಯಾತ್ಮದಂತಹ ಕಠಿಣವಿಷಯದ ಬಗ್ಗೆ ಸರಳವಾದ, ಸುಂದರವಾದ, ಕನ್ನಡದಲ್ಲಿ ಕವನಗಳನ್ನು ರಚಿಸಿದರು. ಅವುಗಳಿಗೆ ಶಾಸ್ತ್ರೀಯ ಕರ್ನಾಟಕ ಸಂಗೀತಕ್ಕೆ ಹೊಂದುವಂತೆ ರಾಗ, ತಾಳಗಳನ್ನು ಹಾಕಿದರು. ಎಲ್ಲರಿಗೂ ತಿಳಿಯುವಂತೆ ಸರಳ ಕನ್ನಡದಲ್ಲಿ ರಾಗಬದ್ಧವಾಗಿ ಬರೆದಿದ್ದರಿಂದ ಅವರ ಕವಿತೆಗಳು ಬಹು ಜನಪ್ರಿಯವಾದವು.
“ಕೈವಲ್ಯ” ಎಂದರೆ ಮುಕ್ತಿ, “ಪದ್ಧತಿ” ಎಂದರೆ ಮಾರ್ಗ ಎಂದು ಅರ್ಥವಾಗುತ್ತದೆ. ಕೈವಲ್ಯ ಪದ್ಧತಿ ಪುಸ್ತಕದಲ್ಲಿ ಮುಕ್ತಿಯನ್ನು ಪಡೆಯುವ ಮಾರ್ಗವನ್ನು ತೋರಿಸಿದ್ದಾರೆ. ಪರಮೇಶ್ವರನ, ಗುರುವಿನ ಸ್ತುತಿಯಿಂದ ಈ ಗ್ರಂಥ ಪ್ರಾರಂಭವಾಗುತ್ತದೆ.
ಶ್ರೀಗುರು ವಚನುಪದೇಶವನಾಲಿಸಿ ದಾಗಳಹುದು ನರರಿಗೆ ಮುಕುತಿ. ತಾಯಿ ಮಗುವನ್ನು ಮರಿ, ಪಾಪು, ಬಾಳಾ, ತಮ್ಮಾ ಎಂದು ಮೊದಲಾಗಿ ಬೇರೆ ಬೇರೆ ಹೆಸರಿನಿಂದ ಕರೆದು ಸಂತೋಷಪಡುತ್ತಾಳೆ. ಅದರಂತೆ ಇಲ್ಲಿ ನಿಜಗುಣರು ಶಿವಾ, ಮಹಾದೇವ, ಶಂಕರ, ಪಾರ್ವತೀಧವ, ನೀಲಕಂಠ, ನಾಗಭೂಷಣ, ಚಂದ್ರಮವಳಿ, ಫಾಲಾಕ್ಷ, ಪಶುಪತಿ ಎನ್ನುವ ನೂರು ಎಂಟು ನಾಮಾವಳಿಗಳಿಂದ ಪರಮೇಶ್ವರನನ್ನು ಸ್ತುತಿಸಿದ್ದಾರೆ. “ಉದಯ ಅಸ್ತಮಾನದೊಳು ನೂರೆಂಟು ನಾಮವನ್ನು ಪದುಳದಿಂದ ಓದಿ ಕೇಳಿದವರ್ಗೆ ಶಂಭುಲಿಂಗದ ಕರುಣದಿಂದ ಇತಿತು ಕೊರತೆಯಿಲ್ಲದೆ ಸಕಲ ಸಂಪದಗಳು ಒಂದುಗೂಡಿ ಸದಮಲ ಜ್ಞಾನ ಸದ್ಭಕ್ತಿಗಳು ಮೇಲೊದಗಿ ಕೈಸಾರುತಿಹವು ಇಹದಲ್ಲಿ ಪರದೊಳೊಂದಿದ ಗಣಪದವನೈದಿ ನಿಜಸುಖದೊಳಿಹ ಮುಕ್ತಿ ದೊರೆತುದಿದು ಸತ್ಯ.” ಎಂದು ಈ ಸ್ತೂತ್ರ ಮುಕ್ತಾಯವಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಕೋಲೂರಿನ ಶರಣರಾದ ದುಂಡಪ್ಪ ಮೆಟಗುಡ್ಡ ಮಾತನಾಡಿದರು ಮುಖಂಡರಾದ ಸುರೇಶ ಗೊಲಬಾಂವಿ, ಮಹಾದೇವಪ್ಪ ಬರಗಿ, ಶಿವಪ್ಪ ಕೊಡತಿ, ಈರ್ಪ ಚುನಮರಿ, ರವಿ ಮುಂಡಗನೂರ,ಈರ್ಪ ಹುಣಶ್ಯಾಳ, ಮಹೇಶ ಜಿಡ್ಡಿಮನಿ, ಶಿವಪ್ಪ ಮೂಡಲಗಿ,ಮಹಾದೇವಪ್ಪ ಹೊಸಕೋಟಿ, ಬಸು ಗೊಲಬಾಂವಿ,ಪತ್ರಕರ್ತ ಲಕ್ಷ್ಮಣ ಕಿಶೋರ,ಶಿವಬಸು ಹಾರುಗೊಪ್ಪ, ಮಾನಿಂಗಪ್ಪ ಯಾದವಾಡ, ಕಾರ್ಯಕ್ರಮವನ್ನು ಶಂಕರ ಯಾದವಾದ ನಿರೂಪಿಸಿ ವಂದಿಸಿದರು. ಪ್ರಸಾದ ವ್ಯವಸ್ಥೆಯನ್ನು ಹೊಳೆಪ್ಪ ಬಾಡಗಿ ಮಾಡಿಸಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 