ಲೋಕದರ್ಶನ
ವರದಿ
ವಿಜಯಪುರ 17:
ನಗರದ ಕನಕದಾಸ ಬಡಾವಣೆಯ ನೂತನವಾಗಿ ನಿಮರ್ಿಸಲಾದ ಅಂಬಾಭವಾನಿ ದೇವಸ್ಥಾನದಲ್ಲಿ 5ನೇ ದಿನದ ರಾತ್ರಿ
ನಗೆಹಬ್ಬ ಮನರಂಜನಾ ಕಾರ್ಯಕ್ರಮ ಜರುಗಿತು. ನ್ಯಾಯವಾದಿ ಹಾಗೂ ಸಮಾಜ ಸೇವಕಿ
ಸಂಯುಕ್ತಾ ಶಿವಾನಂದ ಪಾಟೀಲ ನಗೆಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಾಸ್ಯಕ್ಕೆ ಮನಸ್ಸನ್ನು ಮುದಗೊಳಿಸುವ ಶಕ್ತಿಯಿದೆ. ನಮ್ಮೆಲ್ಲರ ಬೇಸರ ಮತ್ತು ನೋವವನ್ನು
ಮರೆಯಿಸಿ ಹೊಸ ಜೀವನಕ್ಕೆ ಕೊಂಡಯ್ಯುತ್ತದೆ.
ಎಲ್ಲ ವಯೋಮಾನದವರು ಹಾಸ್ಯವನ್ನು ಸ್ವಾದಿಸುತ್ತಾರೆ.
ಹಾಸ್ಯ ನಮ್ಮೆಲ್ಲರ ಆಯುಷ್ಯವನ್ನು ವೃದ್ದಿಗೊಳಿಸುತ್ತದೆ. ಹಾಸ್ಯ ಕಲಾವಿದರು ತಮ್ಮ ಅದ್ಭುತ ಪ್ರತಿಭೆಯಿಂದ
ಜನಸಾಮಾನ್ಯರಿಗೆ ಮನರಂಜನೆ ನೀಡಿ ರಂಜಿಸುತ್ತಾರೆ. ನಿತ್ಯ
ಜೀವನದ ಸಂಗತಿಗಳನ್ನು ಪ್ರಸ್ತಾಪಿಸಿ ಬದುಕಿನ ಮೌಲ್ಯಗಳನ್ನು ತಿಳಿಸುತ್ತದೆ. ನಾವೆಲ್ಲರೂ ಸಮಾಜಮುಖಿಯಾಗಿ ನ್ಯಾಯ, ಅನ್ಯಾಯ ಕುರಿತು ಹಾಸ್ಯದ ಮೂಲಕ ಅರಿವು ಮೂರಿಸುತ್ತಾರೆ. ಬಬಲೇಶ್ವರದ
ಶಾಂತವೀರ ಪ.ಪೂ. ಕಾಲೇಜಿನ
ಉಪನ್ಯಾಸಕ ಮಹಾದೇವ ರೆಬಿನಾಳ ಮಾತನಾಡಿ ಸಾಂಸ್ಕೃತಿಕ ಜೀವನ ನಮ್ಮ ಬದುಕಿಗೆ
ಅವಶ್ಯ. ನಗೆಹಬ್ಬ ನಮಗೆ ಪ್ರೋತ್ಸಾಹ ಮತ್ತು
ಪ್ರೇರಣೆ ನೀಡುತ್ತದೆ. ಸಮಸ್ಯೆಗಳನ್ನು ಎದುರಿಸುವ ಶಕ್ತಿ ಹಾಸ್ಯಕ್ಕಿದೆ. ನಗರ ಮತ್ತು ಗ್ರಾಮೀಣ
ಜನರು ನಗೆಹಬ್ಬ ಕಾರ್ಯಕ್ರಮಗಳನ್ನು ಇಚ್ಚಿಸುತ್ತಾರೆ. ಜೀವನದ ಸತ್ಯ ಸಂಗತಿಗಳನ್ನು ತಿಳಿಸುವುದರ
ಜೊತೆಗೆ ನಮ್ಮನ್ನು ಹಾಸ್ಯದ ಕಡೆಗೆ ಕೊಂಡಯ್ಯುವ ಶಕ್ತಿ ಹಾಸ್ಯ ಕಲಾವಿದರಲ್ಲಿದೆ ಎಂದರು. ಖ್ಯಾತ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಒಂದು ಘಂಟೆ ಕಾಲ
ನಗೆಹಬ್ಬ ಕಾರ್ಯಕ್ರಮ ನಡೆಸಿಕೊಟ್ಟರು. ಮಾನವ
ಹಕ್ಕುಗಳ ಕಲ್ಯಾಣ ಮಂಡಳಿಯ ಅಧ್ಯಕ್ಷ ವಾಲಿಕಾರ,
ಪ್ರವಚನಕಾರ ಮೌನೇಶ್ವರ ಮೇಟಿ, ಅಪ್ಪು ಸಾವಳಗಿ, ಮಲ್ಲನಗೌಡ ಬಿರಾದಾರ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ಸಾಹೇಬಗೌಡ ಬಿರಾದಾರ, ಈರಣ್ಣ ಮೋಟಗಿ, ಚಿದಾನಂದ ಎಚ್. ಸಂತೋಷ ಹಳ್ಳಿಕೇರಿ,
ನಾಯಕ ಹತ್ತಿ, ಬಸವರಾಜ ಮುರಗೋಡ, ಅಶೋಕ ಗೊಟ್ಯಾಳ, ನವೀನಕುಮಾರ
ಕುಂಬಾರ, ನಾಗರಾಜ ನಿಂಬಾಳ, ಮಜರಖಾನ ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು.