ರಾಣಿಬೆನ್ನೂರ 14 : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪ್ರತಿ ವರ್ಷ ಕೊಡ ಮಾಡುವ ಮೂಡಣದ ನಿಧಿ ಪ್ರಶಸ್ತಿಗೆ ಈ ವರ್ಷ ಪುರಸ್ಕೃತರಾದ ಹಿರಿಯ ಪತ್ರಕರ್ತ ಎಂ .ಚಿರಂಜೀವಿ ಅವರನ್ನು ಹುಟ್ಟೂರು ತಾಲೂಕಿನ ಕೆರಿಮಲ್ಲಾಪುರದಲ್ಲಿ ಗ್ರಾಮಸ್ಥರು, ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಿರಂತರ 36 ವರ್ಷಗಳ ಕಾಲ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿ ಇಂದು ಸನ್ಮಾನಕ್ಕೆ ಪಾತ್ರರಾಗಿದ್ದು ನಿಮ್ಮೆಲ್ಲರ ಸಹಕಾರ ಹಾಗೂ ಪ್ರೋತ್ಸಾಹವೇ ಇದಕ್ಕೆ ಕಾರಣವಾಗಿದೆ, ಗ್ರಾಮಸ್ಥರ ಈ ಋಣ ಎಂದೂ ತೀರಿಸಲಾಗದು ಎಂದರು.
ಶಿಕ್ಷಕಿ ಅನುಸೂಯಾ ರಾಠೋಡ, ರಾಷ್ಟ್ತಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯ ಆರ್.ಎಸ್. ಪಾಟೀಲ, ಪ್ರಕಾಶ ಸೊಪ್ಪಿನ, ಎನ್.ವಿ. ಚಪ್ಪರದ, ಹಾಲೇಶ ಮುದ್ದಿ, ವೀರನಗೌಡ ಪಾಟೀಲ, ಮಂಜುನಾಥ್ ಚಿಕ್ಕಣ್ಣನವರ್, ಅಪ್ಪಣ್ಣ ಶಿವಲಿಂಗಣ್ಣನವರ, ಶ್ರೀನಿವಾಸ, ನಿಂಗರಾಜ ಮಡಿವಾಳರ, ಪಿಕೆ ಪರಂಗಿ, ನಿರ್ಮಲಾ ಲಮಾಣಿ, ಸಿಬಿ ಸಣ್ಣಮನಿ, ವಿಜಯಲಕ್ಷ್ಮಿ ಜೋಶಿ, ಸೇರಿದಂತೆ ಗ್ರಾಮದ ಮುಖಂಡರು ಇದ್ದರು.