ಬೆಳಗಾವಿ 25: ಭರತೇಶ ಶಿಕ್ಷಣ ಸಂಸ್ಥೆಯ ಬಸವನಕುಡಚಿಯ ಟೆಕ್ನಿಕಲ್ ಕ್ಯಾಂಪಸ್ನ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ನಲ್ಲಿ "ವ್ಹಿಜನರಿ ಲರ್ನಿಂಗ್ ಕಮ್ಯೂನಿಟಿ" ಬೆಳಗಾವಿ ಚಾಪ್ಟರ್ ಸಹಯೋಗದೊಂದಿಗೆ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ನ ಉಪನ್ಯಾಸಕರಿಗೆ ಆಯೋಜಿಸಿದ ಒಂದು ವಾರದ ಅಲಾವ್ಪಧಿಯ ತರಬೇತಿ ಕಾರ್ಯಗಾರವನ್ನು "ನೆಕ್ಸ್ಟ ಜನರೇಶನ ಮ್ಯಾನುಫಾಕ್ಟ್ಚರಿಂಗ್ ಲಿಡರ್ಸ್" ಎಂಬ ವಿಷಯ ಕುರಿತು ಆಯೋಜಿಸಲಾಗಿದ್ದು ಕಾರ್ಯಕ್ರಮವನ್ನು ಬೆಳಗಾವಿಯ ಪ್ರಖ್ಯಾತ ಕ್ರೈಂಟರ್ಸ್ ಪ್ರೈವೇಟ್ ಲಿಮಿಟೆಡ್ನ ಪ್ರೋಪರೈಟ್ರ್ ಆದ ತರುಣ ಉದ್ಯಮಿ ನಿಲೇಶ ಚೌಗುಲೆ ಇವರು ಉದ್ಘಾಟಿಸಿದರು. ಭವಿಷ್ಯದಲ್ಲಿ ಎಲ್ಲ ಉದ್ಯಮಗಳಲ್ಲಿ ರೊಬೊಟಿಕ್ಸ್, ಮೆಕ್ಯಾಟ್ರಾನಿಕ್ಸ್,ಇಂಟರನೆಟ್ ಅಫ್ ಥಿಂಗ್ಸ್ ಮುಂತಾದ ಉನ್ನತ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಾಗುತ್ತದೆ. ಅದ್ದರಿಂದ ತಾಂತ್ರಿಕ ಶಿಕ್ಷಣವನ್ನು ಬೋಧಿಸುತ್ತಿರುವ ಉಪನ್ಯಾಸಕರು ಇವುಗಳನ್ನು ಅಭ್ಯಸಿಸಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಶ್ರೀ ಸುರೇಶ ತುಳಸಿಗೇರಿಯವರು ಈ ಕಾಯರ್ಾಗಾರವನ್ನು ನಡೆಸಲು "ವ್ಹಿಜನರಿ ಲರ್ನಿಂಗ್ ಕಮ್ಯೂನಿಟಿ" ಬೆಳಗಾವಿ ಚಾಪ್ಟರ್ನ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳನ್ನು ಹೇಳುತ್ತ ಈ ಕಾಯರ್ಾಗಾರದಿಂದ ಪಡೆದ ಉಪಯುಕ್ತ್ಕತೆಯನ್ನು ಎಲ್ಲ ವಿದ್ಯಾಥರ್ಿಗಳಲ್ಲಿ ಹಂಚಿಕೋಳ್ಳಲು ಮತ್ತು ಪಾಲಿಟೆಕ್ನಿಕ್ ಹಂತದಲ್ಲಿ ಈ ವಿಷಯದ ಮಹತ್ವವನ್ನು ತಿಳಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಹೇಳಿದರು. ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಅನುಮೋದನೆಗೊಂಡ ಈ ಕಾಯರ್ಾಗಾರವನ್ನು ಸಂಸ್ಥೆಯ ನಿರಂತರ ತಾಂತ್ರಿಕ ಶಿಕ್ಷಣ ಕಲಿಕಾ ಉಪಕೇಂದ್ರದ ಅಡಿಯಲ್ಲಿ ಆಯೋಜಿಸಲಾಗಿದ್ದು ಸುಮಾರು 22 ಉಪನ್ಯಾಸಕರು ಭಾಗವಹಿಸಿದ್ದರು.