ರೈತರ ಬದುಕಿಗೆ ಹೊಸ ಚೈತನ್ಯ: ಬ್ಯಾರೇಜ್ ನೀಡಿದ ಜೀವಜಲ

ರೈತರ ಬದುಕಿಗೆ ಹೊಸ ಚೈತನ್ಯ: ಬ್ಯಾರೇಜ್ ನೀಡಿದ ಜೀವಜಲ New vitality for farmers' lives: The lifeblood provided by the barrage

ಚಿಕ್ಕೋಡಿ 17 : ದಶಕಗಳಿಂದ ನೀರಿಗಾಗಿ ಕಣ್ಣೀರಿಟ್ಟಿದ್ದ ರೈತರಿಗೆ ಈಗ ಜೀವದ ಬೆಳಕು ಕಾಣಿಸಿಕೊಂಡಿದೆ.  ಬ್ರಿಡ್ಜ್‌ ಕಂ ಬ್ಯಾರೇಜ್ ನಿರ್ಮಾಣದೊಂದಿಗೆ ಈ ಭಾಗದ ಹತ್ತಾರು ಹಳ್ಳಿಗಳ ಬದುಕಿಗೆ ಹೊಸ ಚೈತನ್ಯ ಬಂದಿದೆ.ಒಣಗುತ್ತಿದ್ದ ಭೂಮಿ, ಕುಡಿಯುವ ನೀರಿಲ್ಲದೆ ತತ್ತರಿಸುತ್ತಿದ್ದ - ಜನ-ಜಾನುವಾರುಗಳಿಗೆ ಅನುಕೂಲವಾಗಿದೆ.ಹೌದು ಚಿಕ್ಕೋಡಿ ತಾಲೂಕಿನ ಗ್ರಾಮಗಳ ಮಧ್ಯ ಹರಿದಿರುವ ಗಡಿ ಭಾಗದ ಜನರ ಜೀವನಾಡಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಜ್ ಕಂ ಬ್ಯಾರೇಜ ನಿರ್ಮಾಣದಿಂದ ಗಡಿ ಭಾಗದ ರೈತರಿಗೆ ಅನುಕೂಲ ಕಲ್ಪಿಸಿದೆ.

ನೆತ್ತಿ ಸುಡುವ ಬಿಸಿಲಿನ ಬೇಗೆಯಲ್ಲಿ ನದಿ ಬತ್ತುವ ನಡುವೆಯೂ ಬ್ಯಾರೇಜ್ ನಿರ್ಮಾಣದಿಂದ ನದಿಯಲ್ಲಿ ನೀರು ನಿಂತುಕೊಂಡಿದೆ. ಮಹಾರಾಷ್ಟ್ರ ಕಾಳಮ್ಮವಾಡಿ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿದಿರುವ ಪರಿಣಾಮ  ಕಲ್ಲೋಳ. ಯಡೂರ.ಸದಲಗಾ, ಮಲಿಕವಾಡ ಹಾಗೂ ಯಕ್ಸಂಬಾ ಬ್ಯಾರೇಜ್ಗಳು ತುಂಬಿ ಹರಿಯುತ್ತಿವೆ. ನದಿ ತುಂಬಿ ಹರಿಯುತ್ತಿರುವ ದೃಶ್ಯ ರೈತರ ಮುಖದಲ್ಲಿ ಸಂತಸದ ನಗು ಮೂಡಿಸಿದೆ.14 ವರ್ಷದ ಹೋರಾಟಕ್ಕೆ ಜಯಕಳೆದ 14 ವರ್ಷಗಳಿಂದ ಸೇತುವೆ ಶಿಥಿಲಗೊಂಡು ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಸ್ಥಳೀಯ ಜನರು ಅಪಾರ ಸಂಕಷ್ಟ ಅನುಭವಿಸಿದ್ದರು. ಹನಿ ನೀರಿಗೂ ಪರದಾಡುತ್ತಿದ್ದ ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿದ ವಿಪ ಸದಸ್ಯ ಪ್ರಕಾಶ್ ಹುಕ್ಕೇರಿ ಅವರು ಸರ್ಕಾರದ ಮಟ್ಟದಲ್ಲಿ ನಿರಂತರ ಹೋರಾಟ ನಡೆಸಿ, ?32 ಕೋಟಿ ವೆಚ್ಚದ ಬ್ರಿಡ್ಜ್‌ ಕಂ ಬ್ಯಾರೇಜ್ ಯೋಜನೆಯನ್ನು ಮಂಜೂರು ಮಾಡಿಸಿದರು.ಈ ಬ್ಯಾರೇಜ್ನಲ್ಲಿ ಸುಮಾರು 2 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದ್ದು, ಸುತ್ತಮುತ್ತಲ ಪ್ರದೇಶಗಳ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಒಣಗಿದ್ದ ಬೆಳೆಗಳಿಗೆ ಹಸಿರು ಮರಳಿದ್ದು, ಜನ-ಜಾನುವಾರುಗಳ ನೀರಿನ ಸಮಸ್ಯೆ ನಿವಾರಣೆಯಾಗಿದೆ.ಇದರೊಂದಿಗೆ 14 ವರ್ಷಗಳಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರವೂ ಮರುಪ್ರಾರಂಭಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬಹಳ ಅನುಕೂಲವಾಗಿದೆ.ಗಣೇಶ ಹುಕ್ಕೇರಿ ಅವರ ಪಾತ್ರ ಗಮನಾರ್ಹಈ ಮಹತ್ವದ ಯೋಜನೆಯನ್ನು ಅತ್ಯಾಧುನಿಕ ಗೇಟ್ ವ್ಯವಸ್ಥೆಯೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ಶಾಸಕರಾದ ಗಣೇಶ ಹುಕ್ಕೇರಿ ಅವರ ನಿರಂತರ ಮೇಲ್ವಿಚಾರಣೆ ಪ್ರಮುಖವಾಗಿದೆ. ತಂದೆ ಪ್ರಕಾಶ ಹುಕ್ಕೇರಿ ಯ ಆಶಯಕ್ಕೆ ಬೆಂಬಲವಾಗಿ ನಿಂತು ರೈತರ ಸಂಕಷ್ಟ ಪರಿಹಾರದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.

ಸೇತುವೆ ಸಮಸ್ಯೆ ಕೇವಲ ರಸ್ತೆ ಸಮಸ್ಯೆಯಾಗಿರಲಿಲ್ಲ; ಅದು ಜನರ ದಶಕಗಳ ನೋವಿನ ಕಥೆಯಾಗಿತ್ತು. ನಮ್ಮ ನಿರಂತರ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ. ಇದು ಕೇವಲ ಸಂಪರ್ಕವಲ್ಲ, ರೈತರ ಬದುಕಿಗೆ ಸಂಜೀವಿನಿಯಾಗಿದೆ. ಬೇಸಿಗೆಯಲ್ಲಿ ನದಿ ನೀರು ಖಾಲಿಯಾಗಿದ್ದು ಗೊತ್ತೆಯಾಗಿಲ್ಲ.ಬ್ಯಾರೇಜ್ ನಿರ್ಮಾಣದಿಂದ ರೈತರಿಗೆ ಅನುಕೂಲ.ಶ್ರಿ ಪ್ರಕಾಶ್ ಹುಕ್ಕೇರಿ ವಿಪ ಸದಸ್ಯರು.