ಇಂದಿನಿಂದಲೇ ಜಿಲ್ಲೆಯಲ್ಲಿ ನೂತನ ಸಂಚಾರ ನಿಯಮ ಜಾರಿ: ಕೆ.ಜೆ.ದೇವರಾಜ

ಹಾವೇರಿ: ನೂತನ ಸಂಚಾರಿ ನಿಯಮ ಇಂದಿನಿಂದಲೇ ಜಿಲ್ಲೆಯಾದ್ಯಂತ ಜಾರಿಗೊಳಿಸಲಾಗುವುದು. ಹೊಸ ಸಾರಿಗೆ ನಿಯಮ ಕುರಿತಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಗೂ ಹೊಸ ನಿಯಮ ಪಾಲನೆ ಮಾಡದ ವಾಹನ ಚಾಲಕರಿಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜೆ.ದೇವರಾಜ ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮಾಧ್ಯಮಗೋಷ್ಠಿ ನಡೆಸಿದ ಅವರು ಸುಗಮ ಸಂಚಾರಕ್ಕಾಗಿ ಸರ್ಕಾರ  ಜಾರಿಗೊಳಿಸಿರುವ ನಿಯಮಾವಳಿಗಳನ್ನು ಎಲ್ಲರೂ ತಪ್ಪದೇ ಪಾಲಿಸುವಂತೆ ಈ ಸಂದರ್ಭದಲ್ಲಿ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು.

ವಾಹನ ಚಾಲನೆ ಸಂದರ್ಭದಲ್ಲಿ ರಸ್ತೆ ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ವಾಹನ ಚಾಲಕರು ಕಡ್ಡಾಯವಾಗಿ ವಾಹನ ಪರವಾನಿಗೆ ಹೊಂದಿರಬೇಕು. ವಾಹನ ಚಾಲನಾ ಸಂದರ್ಭದಲ್ಲಿ ಜೊತೆಯಲ್ಲಿ ಪರವಾನಿಗೆಯನ್ನು ತೆಗೆದುಕೊಂಡು ಹೋಗಿರಬೇಕು.

       ಚಾಲನಾ ಸಂದರ್ಭದಲ್ಲಿ ಕಡ್ಡಾಯವಾಗಿ ಎಲ್ಲ ಚಾಲಕರು ವಾಹನ ಪರವಾನಿಗೆ ಹಾಗೂ ವಿಮೆ ಸೇರಿದಂತೆ ವಾಹನ ನೋಂದಣಿ ದಾಖಲಗಳನ್ನು ಜೊತೆಯಲ್ಲಿ ಕಡ್ಡಾಯವಾಗಿ ಹೊಂದಿರಬೇಕು. ಯಾವುದೇ ಪೊಲೀಸ್ ಅಧಿಕಾರಿಗಳು ಕೇಳಿದಾಗ ತೋರಿಸಬೇಕು. 

       ಅದು ಕಾಗದ ರೂಪದಲ್ಲಿಗಾಲಿ ಅಥವಾ ಕನಿಷ್ಠ ಡಿಜಿಟಲ್ ರೂಪದಲ್ಲಾಗಲಿ ತೋರಿಸಬೇಕು. ಇಲ್ಲವಾದರೆ ಹೊಸ ನಿಯಮದ ಪ್ರಕಾರ ದಂಡ ಹಾಕಲಾಗುವುದು ಎಂದು ಹೇಳಿದರು.

ಭಾನುವಾರದಿಂದ ಮೊದಲ ಹಂತದಲ್ಲಿ ಜಿಲ್ಲೆಯ ಎಲ್ಲ ತಾಲೂಕಾ ಕೇಂದ್ರ, ಪಟ್ಟಣ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ, ವಾಹನ ಚಾಲಕರ ಸಂಘಗಳಿಗೆ ಹಾಗೂ ಕಾಲೇಜುಗಳಲ್ಲಿ ಪೊಲೀಸ್ ಅಧಿಕಾರಿಗಳು ಹೊಸ ಸಂಚಾರಿ ನಿಯಮದ ಅರಿವು ಮೂಡಿಸಲಿದ್ದಾರೆ ಎಂದು ತಿಳಿಸಿದರು.

ಸಾರಿಗೆ ನಿಯಮಗಳನ್ನು ಉಲ್ಲಂಘಿಷಿಸದರೆ ವಿಧಿಸುವ ದಂಡವನ್ನು ಸ್ಥಳದಲ್ಲಿ ಕಟ್ಟಲು ಹಣವಿಲ್ಲದಿದ್ದರೆ ಚಾಲಕರಿಗೆ ನೋಟೀಸ್ ಜಾರಿಮಾಡಲಾಗುವುದು. ನಿಯಮಾನುಸಾರ ನ್ಯಾಯಾಲಯಕ್ಕೆ ಹಾಜರಾಗಿ ದಂಡದ ಹಣವನ್ನು ಪಾವತಿಸಬೇಕಾಗುತ್ತದೆ.

  ಸಾರಿಗೆ ನಿಯಮ ಎಲ್ಲರೂ ಅನುಸರಿಸಬೇಕು. ಪೊಲೀಸರೂ ಇದರಿಂದ ಹೊರತಲ್ಲ. ಪೊಲೀಸ್ರು ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಓಡಿಸಿದರೆ ಸಾರಿಗೆ ನಿಯಮ ಉಲ್ಲಂಘಿಷಿಸದರೆ ಇತರರಂತೆ ಅವರಿಗೂ ದಂಡ ವಿಧಿಸಲಾಗುವುದ. ಕಡ್ಡಾಯವಾಗಿ ದ್ವಿಚಕ್ರವಾಹನ ಚಾಲಕರು ಹೆಲ್ಮೇಟ್ ಧರಿಸಬೇಕು. ಕಾರು ಚಾಲಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಬೇಕು. 

      ಅತೀಯಾದ ವೇಗ, ನಿಶಬ್ದವಲಯದಲ್ಲಿ ಹಾರ್ನಮಾಡುವುದು, ಎಲ್ಲೆಂದರಲ್ಲಿ ವಾಹನ ನಿಲುಗಡೆ ಹಾಗೂ ಏಕಮುಖ ಸಂಚಾರದಲ್ಲಿ  ನಿಯಮ ಉಲ್ಲಂಘಿಸಿ ವಾಹನ ಚಾಲನೆ ಎಚ್ಚರದಿಂದ ಇರಬೇಕು ಎಂದು ಹೇಳಿದರು.

    ದಂಡದ ವಿವರ: ಅತಿಯಾದ ವೇಗದ ಚಾಲನೆ ಎರಡು ಸಾವಿರ ರೂ., ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಬಳಕೆ ಸೇರಿದಂತೆ ಅಪಾಯಕಾರಿ ವಾಹನ ಚಾಲನೆ ಮಾಡಿದರೆ ಮೊದಲ ಬಾರಿಗೆ ಐದುಸಾವಿರ ರೂ., ಎರಡನೇ ಬಾರಿ ಅಥವಾ ಅದಕ್ಕಿಂತ ಹೆಚ್ಚುಬಾರಿ ತಪ್ಪು ಮಾಡುತ್ತಾ ಹೋದರೆ ಪ್ರತಿ ಸಂದರ್ಭದಲ್ಲಿ ಹತ್ತು ಸಾವಿರ ರೂ., ಲೈಸನ್ಸ್ ಇಲ್ಲದೆ ವಾಹನ ಓಡಿಸದರೆ ಅಥವಾ ವಾಹನ ಓಡಿಸುವ ಸಂದರ್ಭದಲ್ಲಿ ಜೊತೆಯಲ್ಲಿ ವಾಹನ ಪರವಾಗಿ ಪತ್ರ ಕೊಂಡಯ್ಯದಿದ್ದರೆ ಐದು ಸಾವಿರ ರೂ., ಅಧಿಕೃತ ವಾಹನ ಚಾಲನಾ ಪತ್ರ ಹೊಂದಿರದ ವ್ಯಕ್ತಿಗೆ ವಾಹನ ಚಾಲನೆ ಮಾಡಲು ನೀಡಿದರೆ ಐದು ಸಾವಿರ ರೂ., ಅಧಿಕೃತ ವಾಹನ ಚಾಲನೆ ಪತ್ರ ಅಮಾನತ್ತಿನಲ್ಲಿರುವಾಗ ವಾಹನ ಚಾಲನೆ ಮಾಡಿದತೆ ಹತ್ತು ಸಾವಿರ ರೂ.,  ಸುರಕ್ಷಿತವಲ್ಲದ ವಾಹನ ಚಾಲನೆಗೆ ಹತ್ತು ಸಾವಿರ ರೂ., ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದರೆ ಒಂದು ಸಾವಿರ ರೂ., ನಿಶಬ್ದ ವಲಯಗಳಲ್ಲಿ ಹಾರ್ನ ಮಾಡಿದರೆ ಒಂದುಸಾವಿರದಿಂದ ಎರಡು ಸಾವಿರ ರೂ., ವಿಮೆ ಇಲ್ಲದೆ  ವಾಹನ ಚಾಲನೆ ಮಾಡಿದರೆ ಎರಡು ಸಾವಿರದಿಂದ ನಾಲ್ಕು ಸಾವಿರ ರೂ., ತುತರ್ು ವಾಹನಗಳಿಗೆ ದಾರಿಬೀಡದೆ ವಾಹನ ಚಾಲನೆ ಮಾಡಿದರೆ ಹತ್ತು ಸಾವಿರ ರೂ., ನೋಂದಣಿ ಮಾಡದೇ ವಾಹನ ಚಾಲನೆ ಮಾಡಿದರೆ ಹತ್ತು ಸಾವಿರ ರೂ. ದಂಡ ಹಾಕಲಾಗುವುದು.

ಬಸ್ಗಳಲ್ಲಿ ಟಿಕೇಟ್ ಇಲ್ಲದೆ ಸಂಚಾರ್, ಅಧಿಕೃತ ಪಾಸ್ಗಳಿಲ್ಲದೆ ಪ್ರಯಾಣ, ಸಾಗಾಣಿಕೆಗೆ ಅಧಿಕೃತ ಒಪ್ಪಂದವಿಲ್ಲದೆ ಪ್ರಯಾಣಕ್ಕೆ ಐದು ನೂರು ರೂ., ಅಧಿಕೃತ ಆದೇಶ ಪಾಲನೆ ಮಾಡದೆ ಮಾಹಿತಿ ನೀಡಲು ನಿರಾಕರಿಸಿದರೆ ಎರಡು ಸಾವಿರ ರೂ.ದಂಡ, ಮೋಟರ್ ವಾಹನಗಳ ವಿನ್ಯಾಸ, ಬದಲಾವಣೆ, ನಿರ್ವಹಣೆ ಮಾಡಿದರೆ, ಮಾರಾಟ ಮಾಡಿದರೆ ಐದು ಸಾವಿರದಿಂದ ಒಂದು ಲಕ್ಷರೂ.ವರೆಗೆ ದಂಡ, ಮಾನಸಿಕ ಅಥವಾ ದೈಹಿಕ ಸದೃಢತೆ ಇಲ್ಲದ ವ್ಯಕ್ತಿಗಳು ವಾಹನ ಚಾಲನೆ ಮಾಡಿದರೆ ಒಂದು ಸಾವಿರದಿಂದ ಎರಡು ಸಾವಿರ ರೂ., ವಾಹನ ಸ್ಪಧರ್ೆಗೆ ಬಿಡಲು ಪರೀಕ್ಷಿಸಲು ಐದು ಸಾವಿರದಿಂದ ಹತ್ತು ಸಾವಿರ ರೂ., ವಾಹನ ಸಾಮಥ್ರ್ಯಕ್ಕಿಂತ ಹೆಚ್ಚಿನ ಭಾರ ಹೆರಿದರೆ ಎರಡು ಸಾವಿರದಿಂದ ಇಪ್ಪತ್ತು ಸಾವಿರ ರೂ ಹಾಗೂ ಸೀಟ್ ಬೆಲ್ಟ್ ಹಾಕದೇ ವಾಹನ ಓಡಿಸಿದರೆ ಒಂದು ಸಾವಿರ ರೂ, ವಾಹನಗಳ ಬಿಡಿಭಾಗಗಳನ್ನು ಅನಧಿಕೃತವಾಗಿ ಬದಲಾವಣೆ ಮಾಡಿದರೆ ಒಂದು ಸಾವಿರ ರೂ. ಹಾಗೂ ಇನ್ನಿತರ ಸಾಮಾನ್ಯ ಅಪರಾಧಗಳಿಗೆ ಐನೂರರಿಂದ ಒಂದು ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ವೃತ್ತ ನಿರೀಕ್ಷಕರಾದ ಗೌಡಪ್ಪಗೌಡ್ರ ಹಾಗೂ ಮೇಘಣ್ಣನವರ ಉಪಸ್ಥಿತರಿದ್ದರು.