ನವದೆಹಲಿ, ಜುಲೈ 28 ಮೊಬೈಲ್ ಫೋನ್ ತಯಾರಿಕ ಚೀನಾ ಕಂಪನಿ ಹುವಾವೇ, ಪಾಪ್ ಅಪ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಹೊಸ ಸ್ಮಾರ್ಟ್ ಫೋನ್ ವೈ -9 ಪ್ರೈಮ್ ಅನ್ನು ಆಗಸ್ಟ್ 1ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಗೊಳಿಸುತ್ತಿದೆ.
ಈ ಫೋನ್ ಆನ್ಲೈನ್ ಅಮೆಜಾನ್ನಲ್ಲಿ ಮಾರುಕಟ್ಟೆ ಸೇರ್ಪಡೆಗೊಂಡಿದ್ದು, ಆಸಕ್ತ ಗ್ರಾಹಕರು ಫೋನ್ ಬಗ್ಗೆ ಮಾಹಿತಿ ತಿಳಿಯಲು ಅವಕಾಶವಿದೆ.
ಚೀನಾದಲ್ಲಿ ಮೇ ತಿಂಗಳಲ್ಲಿಯೇ ಈ ಫೋನ್ ಬಿಡುಗಡೆಗೊಂಡಿದೆ. ಇದರ ಪರದೆ 6.59 ಇಂಚುಗಳಾಗಿದೆ. ಇದರಲ್ಲಿ ಹುವಾಹೆವೈ ಕಿರಿನ್ 710 ಸಿಸ್ಟಮ್ ಆನ್ ಚಿಪ್ ಇದೆ.
ಇದು ನಾಲ್ಕು ಜಿಬಿ ರಾಮ್ ಮತ್ತು 128 ಜಿಬಿ ರಾಮ್ ಹೊಂದಿದ್ದು, ಇದನ್ನು 512 ಜಿಬಿಗೆ ಹೆಚ್ಚಿಸಬಹುದು. ಇದು ಪಾಪ್-ಅಪ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಎಲ್ಲಾ ಕ್ಯಾಮೆರಾಗಳು ಕೃತಕ ಬುದ್ಧಿಮತ್ತೆ ಆಧರಿಸಿವೆ. ಇದು 4000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ ಮತ್ತು ಇದು ಆಂಡ್ರಾಯ್ಡ್ ಪೈ ಆಪರೇಟಿಂಗ್ ಸಿಸ್ಟಮ್ ಅನ್ನು ಆಧರಿಸಿದೆ.
ಇದನ್ನು ಆಗಸ್ಟ್ 1 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಾಗಿ ಕಂಪನಿ ಪ್ರಕಟಿಸಿದೆ