ಲೋಕದರ್ಶನ ವರದಿ
ಮುದ್ದೇಬಿಹಾಳ 03: ಕನರ್ಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಕಚೇರಿ ಉದ್ಘಾಟನೆ ಪಟ್ಟಣದ ಹೆಸ್ಕಾಂ ಎದುರಿಗೆ ಇರುವ ಮೋಮೀನ್ ಕಾಂಪ್ಲೆಕ್ಸ್ನಲ್ಲಿ ದಿ.1ರಂದು ನಡೆಯಿತು. ಹೆಸ್ಕಾಂನ ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ರಾಜಶೇಖರ ಹಾದಿಮನಿ ರಿಬ್ಬನ್ ಕತ್ತರಿಸುವ ಮೂಲಕ ನೂತನ ಕಚೇರಿ ಉದ್ಘಾಟಿಸಿದರು. ಹೆಸ್ಕಾಂನ ಸೆಕ್ಷನ್ ಅಧಿಕಾರಿಗಳಾದ ಎಸ್.ಎಸ್.ಪಾಟೀಲ, ಎಸ್.ಐ.ವಾಂಗಿ, ಎಂ.ಎಸ್.ತೆಗ್ಗಿನಮಠ, ಎಸ್.ಎಂ.ಕಂದಗಲ್ಲ, ಆರ್.ಬಿ.ಹಿರೇಮಠ, ಬಿ.ಎಸ್.ಯಲಗೋಡ, ತಾಂತ್ರಿಕ ಸಹಾಯಕ ಡಿ.ಎಸ್.ಸಿರಸಂಗಿ, ವರ್ಕ ಯುನಿಟ್ ಎಇ ಶಾಂತವೀರ ಹಾವರಗಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ನೂತನ ಪದಾಧಿಕಾರಿಗಳು:
ಇದೇ ಸಂದರ್ಭ ಸಂಘದ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪಟ್ಟಿ ಬಿಡುಗಡೆಗೊಳಿಸಲಾಯಿತು. ಅಧ್ಯಕ್ಷರಾಗಿ ಮುದ್ದೇಬಿಹಾಳದ ಅಸ್ಪಾಕ್ ಗುಡ್ನಾಳ, ಉಪಾಧ್ಯಕ್ಷರಾಗಿ ನಾಲತವಾಡದ ರಾಯಪ್ಪ ಮಲಗಲದಿನ್ನಿ, ಗೌರವಾಧ್ಯಕ್ಷರಾಗಿ ಮಲ್ಲಣ್ಣ ಮಡಿಕೇಶ್ವರ, ಕಾರ್ಯದಶರ್ಿಯಾಗಿ ಶ್ರೀಶೈಲ ಶಿವಯೋಗಿಮಠ, ಖಜಾಂಚಿಯಾಗಿ ರಾಮಚಂದ್ರ ಕುಲಕಣರ್ಿ ಮತ್ತು ಸದಸ್ಯರಾಗಿ ಕುಂಟೋಜಿಯ ಸಂತೋಷ ಬಿರಾದಾರ, ನಾಲತವಾಡದ ಅಶೋಕ ಬಿರಾದಾರ, ಮಹಾಂತಯ್ಯ ಮೆನದಾಳಮಠ, ಇನಾಯತ್ಉಲ್ಲಾ ಮೇತ್ರಿ, ಸಂಗಮೇಶ ಗಂಗನಗೌಡರ, ಮುದ್ದೇಬಿಹಾಳದ ಸಂತೋಷ ಶಿವಯೋಗಿಮಠ, ಯಲಗೂರೇಶ ಪಾಟೀಲ, ಆಶೀಫ್ ನಾಯ್ಕೋಡಿ, ಕಾದರ ಹಿರೇಮನಿ, ಕೋಳೂರನ ಪರಶುರಾಮ ತಂಗಡಗಿ, ಬಿದರಕುಂದಿಯ ಮನೋಹರ ಬಿದರಕುಂದಿ ಆಯ್ಕೆ ಆಗಿದ್ದಾರೆ.