ಉಡುಪಿ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹೊಸ ವೈದ್ಯಕೀಯ ಕಾಲೇಜುಗಳು ಸ್ಥಾಪಿನೆ

ಉಡುಪಿ, ಡಿ 27 ಉಡುಪಿ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ  ಮೂರು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ನಿರ್ಧರಿಸಿದೆ. ಈ ಮೂರು ವೈದ್ಯಕೀಯ ಕಾಲೇಜುಗಳು  2021-22 ನೇ ಶೈಕ್ಷಣಿಕ ವರ್ಷದಿಂದ  ದಾಖಲಾತಿಗಳನ್ನು ಆರಂಭಿಸುವ  ಸಾಧ್ಯತೆಯಿದೆ ಎಂದು  ಇಲಾಖೆಯ ಮೂಲಗಳು ತಿಳಿಸಿವೆ.  ರಾಜ್ಯದಲ್ಲಿ ಈಗ  40 ವೈದ್ಯಕೀಯ ಕಾಲೇಜುಗಳಿದ್ದು, ದೇಶದಲ್ಲಿ ಅತಿಹೆಚ್ಚು   ವೈದ್ಯಕೀಯ ಕಾಲೇಜುಗಳನ್ನು  ಕರ್ನಾಟಕ ಹೊಂದಿದ್ದು, ಕೆಲವು ಜಿಲ್ಲೆಗಳು ವೈದ್ಯಕೀಯ ಕಾಲೇಜು ಹೊಂದಿಲ್ಲ.  ಉಡುಪಿ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಹೊರತುಪಡಿಸಿ  ಇತರ ಎಲ್ಲಾ ಜಿಲ್ಲೆಗಳಲ್ಲಿ   ಕನಿಷ್ಟ ಒಂದು ರಾಜ್ಯ  ಅಥವಾ ಕೇಂದ್ರ ಸರ್ಕಾರ ನಡೆಸುವ ವೈದ್ಯಕೀಯ ಕಾಲೇಜುಗಳನ್ನು ಹೊಂದಿವೆ.  ಈ ಮೂರು ಜಿಲ್ಲೆಗಳಲ್ಲಿ  ವೈದ್ಯಕೀಯ ಕಾಲೇಜುಗಳನ್ನು  ಸ್ಥಾಪಿಸುವ ಮೂಲಕ  ಸಮಸ್ಯೆ  ಪರಿಹರಿಸಲು ಮುಂದಾಗಿದೆ ಎಂದು  ವೈದ್ಯಕೀಯ ಶಿಕ್ಷಣ ಸಚಿವರೂ ಆಗಿರುವ  ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವಥ್ ನಾರಾಯಣ್  ದೃಢಪಡಿಸಿದ್ದಾರೆ  ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾವೇರಿ ಹಾಗೂ ಯಾದಗೀರ್ ಜಿಲ್ಲೆಗಳಿಗೆ  ಹಿಂದೆ ನಾಲ್ಕು ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಲಾಗಿದ್ದು 2021ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಆರಂಭಗೊಳ್ಳುವ ನಿರೀಕ್ಷೆಯಿದೆ.  ಈ ಕಾಲೇಜುಗಳ ಆರಂಭದಿಂದ  ಮುಂದಿನ ಶೈಕ್ಷಣಿಕ ವರ್ಷದಲ್ಲಿ 600 ವೈದ್ಯಕೀಯ  ಸೀಟುಗಳು  ಹೆಚ್ಚುವರಿಯಾಗಿ ಲಭ್ಯವಾಗಲಿವೆ.