ವೆಲ್ಲಿಂಗ್ಟನ್, ಜ ೩೧, ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ನಾಲ್ಕನೇ ಟಿ-೨೦ ಪಂದ್ಯದಲ್ಲಿ ಟಾಸ್ ಗೆದ್ದ ಟಿಮ್ ಸೌಥ್ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಬಳಿಕ ಮಾತನಾಡಿದ ಸೌಥ್, " ಮೊದಲು ನಾವು ಬೌಲಿಂಗ್ ಮಾಡುತ್ತೇವೆ. ಪಿಚ್ ಮೇಲಿನ ಹುಲ್ಲಿನ ಹೊದಿಕೆ ಚೆನ್ನಾಗಿದೆ. ತಡವಾಗಿ ಚೆಂಡು ಜಾರುವ ಸಾಧ್ಯತೆ ಇದೆ. ಭುಜದ ಗಾಯಕ್ಕೆ ತುತ್ತಾಗಿರುವ ಕೇನ್ ವಿಲಯಮ್ಸನ್ ಈ ಪಂದ್ಯದಿಂದ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಅವರ ಗಾಯ ಅಷ್ಟೊಂದು ಗಂಭೀರವಲ್ಲ ಎಂದು ಭಾವಿಸಿದ್ದೇನೆ. ಮುಂದಿನ ಕೆಲ ದಿನಗಳಲ್ಲಿ ಅವರು ಚೇತರಿಸಿಕೊಳ್ಳಲಿದ್ದಾರೆ. ಟಾಮ್ ಬ್ರೂಸ್ ಅವರು ಕಾಲಿನ್ ಡಿ ಗ್ರಾಂಡ್ಹೋಮ್ ಬದಲು ಹಾಗೂ ಕೇನ್ ಬದಲು ಡೆರ್ಲಿ ಮಿಚೆಲ್ ಆಡುತ್ತಿದ್ದಾರೆ,'' ಎಂದರು.
ಬಳಿಕ ವಿರಾಟ್ ಕೊಹ್ಲಿ ಮಾತನಾಡಿ,"ನಾವು ಬಹುಶಃ ಮೊದಲು ಬೌಲಿಂಗ್ ಮಾಡುತ್ತಿದ್ದೆವು. ಈ ಭಾಗ ಬಹಳ ಚಿಕ್ಕದಾಗಿದೆ. ಟಿಮ್ ಹೇಳಿದಂತೆ ಉತ್ತಮ ಟ್ರ್ಯಾಕ್‌ನಂತೆ ತೋರುತ್ತಿದೆ, ಉದ್ದಕ್ಕೂ ಉತ್ತಮವಾಗಿರಬೇಕು. ಆದರೆ, ನೀವು ಪರಿಗಣಿಸಬಹುದಾದ ಏಕೈಕ ಅಂಶವೆಂದರೆ ಗಾಳಿ. ಇದು ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವ ವಿಷಯವಾಗಿದೆ. ಇದರ ಬಗ್ಗೆ ಟೀಮ್ ಮೀಟಿಂಗ್ ನಲ್ಉಲಿ ಚರ್ಚಿಸಿದ್ದೇವೆ. ತಂಡವು ತುಂಬಾ ಅದ್ಭುತವಾಗಿ ಆಡುತ್ತಿದೆ. ನಾವು ರೋಹಿತ್, ಶಮಿ ಮತ್ತು ಜಡೇಜಾಗೆ ವಿಶ್ರಾಂತಿ ನೀಡಿದ್ದೇವೆ. ಸಂಜು ಸ್ಯಾಮ್ಸನ್ ಕೆಎಲ್ ರಾಹುಲ್ ಅವರೊಂದಿಗೆ ಇನ್ನಿಂಗ್ಸ್ ತೆರೆಯಲಿದ್ದಾರೆ. ವಾಷಿಂಗ್ಟನ್ ಸುಂದರ್ ಮತ್ತು ಸೈನಿ ತಂಡದಲ್ಲಿದ್ದಾರೆ. ತಂಡಕ್ಕೆ ಮೂರು ಉತ್ತೇಜಕ ಸೇರ್ಪಡೆಗಳು, ಅವರು ಹೇಗೆ ಆಡಲಿದ್ದಾರೆ ಎಂಬುದು ಉತ್ಸುಕತೆ ಕೆರಳಿಸಿದೆ,'' ಎಂದರು.
ಅಂತಿಮ ೧೧
ಭಾರತ: ಸಂಜು ಸ್ಯಾಮ್ಸನ್, ಲೋಕೇಶ್ ರಾಹುಲ್ (ವಿ.ಕೀ), ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ
ನ್ಯೂಜಿಲೆಂಡ್: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮುನ್ರೊ, ಟಾಮ್ ಬ್ರೂಸ್, ರಾಸ್ ಟೇಲರ್, ಟಿಮ್ ಸೀಫರ್ಟ್ (ವಿ.ಕೀ), ಡೆರ್ಲಿ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಸ್ಕಾಟ್ ಕುಗ್ಗೆಜಿನ್, ಟಿಮ್ ಸೌಥಿ (ನಾಯಕ), ಇಶ್ ಸೋಧಿ, ಹಮೀಶ್ ಬೆನೆಟ್