ನವದೆಹಲಿ, ಆ 5 ಶ್ರೀಲಂಕಾ ವಿರುದ್ಧ ಆಗಸ್ಟ್ 14 ರಿಂದ ಆರಂಭವಾಗುವ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಜೆರ್ಸಿ ಸಂಖ್ಯೆಗಳನ್ನು ಘೋಷಣೆ ಮಾಡಲಾಗಿದೆ. ಕೇನ್ ವಿಲಿಯಮ್ಸನ್(22), ಆ್ಯಸ್ಟ್ಲೆ(60), ಬ್ಲಂಡೆಲ್(66), ಬೌಲ್ಟ್(18), ಡಿ ಗ್ರಾಂಡ್ಹೋಮ್(77), ಲಥಾಮ್(48), ನಿಕೋಲ್ಸ್(86), ಪಟೇಲ್(24), ರಾವಲ್(1), ಸೋಮರ್ವಿಲ್ಲಿ(28), ಸ್ಯಾಂಟ್ನರ್(74), ಸೌಥೆ (38), ಟೇಲರ್(3), ವಾಗ್ನೆರ್(35) ವ್ಯಾಟ್ಲಿಂಗ್(47) ಅವರ ಜೆರ್ಸಿ ನಂಬರ್ ಅನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಟ್ವಿಟ್ ಮಾಡಿದೆ. ನ್ಯೂಜಿಲೆಂಡ್ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಆರಂಭಿಕ ಸರಣಿ ಶ್ರೀಲಂಕಾ ವಿರುದ್ಧ ಆಡುತ್ತಿದೆ. ಮೊದಲ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಕಾದಾಟ ಆ. 14 ರಿಂದ 26ರವರೆಗೆ ನಡೆಯಲಿದೆ. ಕಿವಿಸ್ ಆಟಗಾರರು ಇದೇ ಮೊದಲ ಬಾರಿ ಸಂಖ್ಯೆಯುಳ್ಳ ಟೆಸ್ಟ್ ಜೆರ್ಸಿ ಧರಿಸುತ್ತಿದ್ದಾರೆ. ಕಳೆದ ವರ್ಷವೇ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಘೋಷಣೆ ಮಾಡಿತ್ತು. ನ್ಯೂಜಿಲೆಂಡ್ ಜತೆಗೆ, ಶ್ರೀಲಂಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ತಂಡಗಳು ಚಾಂಪಿಯನ್ಶಿಪ್ನಲ್ಲಿ ಮುಖಾಮುಖಿಯಾಗಲಿವೆ. ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ಎರಡು ತಂಡಗಳು 2021ರಂದು ಲಂಡನ್ನ ದಿ ಲಾಡ್ರ್ಸ ಅಂಗಳದಲ್ಲಿ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಟೆಸ್ಟ್ ಸರಣಿ ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್(ನಾಯಕ), ಟಾಡ್ ಆ್ಯಸ್ಟ್ಲೆ, ಟಾಮ್ ಬ್ಲಂಡೆಲ್, ವ್ಯಾಟ್ಲಿಂಗ್(ವಿ.ಕೀ), ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರಾಂಡ್ಹೋಮ್, ಟಾಮ್ ಲಥಾಮ್, ಹೆನ್ರಿ ನಿಕೋಲ್ಸ್, ಅಜಾದ್ ಪಟೇಲ್, ಜೀತ್ ರಾವಲ್, ವಿಲ್ ಸೋಮರ್ವಿಲ್ಲೆ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥೆ, ರಾಸ್ ಟೇಲರ್, ನೀಲ್ ವ್ಯಾಗ್ನರ್