ಧಾರವಾಡ 27: 2014ರ ಕೆಎಎಸ್ ಅಧಿಕಾರಿ ಸಂತೋಷಕುಮಾರ ಬಿರಾದಾರ ಅವರು ಧಾರವಾಡ ತಾಲೂಕಿನ ನೂತನ ತಹಶೀಲ್ದಾರರಾಗಿ ನವೆಂಬರ 25ರಂದು ಹಿಂದಿನ ತಹಶಿಲ್ದಾರ ಪ್ರಕಾಶ ಕುದರಿ ಅವರಿಂದ ಅಧಿಕಾರ ಸ್ವೀಕರಿಸಿದರು.
ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೆವಾಡಿ ತಾಲೂಕಿನ ಅಂಗಡಗೇರಿ ಗ್ರಾಮದ ಸಂತೋಷಕುಮಾರ ಅವರು ಪಶುವೈದ್ಯಕೀಯ ಪದವಿಧರರಾಗಿದ್ದಾರೆ. ಆಡಳಿತ ಸೇವೆಗೆ ಸೇರುವ ಮೂದಲು 2008ರಿಂದ 2014ರವರೆಗೆ ಬೆಳಗಾವಿ, ಬಾಲಕೋಟದಲ್ಲಿ ಪಶುವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
2014ರಲ್ಲಿ ಕನರ್ಾಟಕ ಆಡಳಿತ ಸೇವೆಗೆ ಸೇರಿದ ಇವರು ಬಾಗಲಕೋಟ ಜಿಲ್ಲಾಧಿಕಾರಿಗಳ ಕಚೇರಿ, ತಹಶೀಲ್ದಾರ ಕಚೇರಿಯಲ್ಲಿ ಪ್ರೋಬೆಷನರಿ ಸೇವಾ ಅವಧಿ ಪೂರೈಸಿದ್ದಾರೆ. ನಂತರ ಬಾಗಲಕೋಟ, ಚಿಕ್ಕೊಡಿ ತಹಶೀಲ್ದಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಕರ್ಾರದ ವಗರ್ಾವಣೆ ಆದೇಶದ ಹಿನ್ನೆಲೆಯಲ್ಲಿ ಪ್ರಕಾಶ ಕುದರಿ ಅವರಿಂದ ತೆರವಾದ ಸ್ಥಾನಕ್ಕೆ ಧಾರವಾಡ ತಹಶೀಲ್ದಾರರಾಗಿ ಈಗ ನೇಮಕಗೊಂಡು ನವೆಂಬರ್ 25, 2019ರಿಂದ ಪ್ರಭಾರ ವಹಿಸಿಕೊಂಡಿದ್ದಾರೆ