ಧಾರವಾಡ 03: ರಾಷ್ಟ್ರೀಯ ಬಸವದಳ ಸಂಘಟನೆಯನ್ನು ಜಿಲ್ಲಾದ್ಯಂತ ಬಸವ ಧರ್ಮದ ಹಾದಿಯಲ್ಲಿ ಕಟ್ಟಲು ಬದ್ಧ ಎಂದು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಂಡ ಹೈಕೋರ್ಟಿನ ನ್ಯಾಯವಾದಿಗಳಾದ ಪೂಜಾ ಆರ್ ಸೌವದತ್ತಿ ಹೇಳಿದರು.
ಅವರು ಹಳಿಯಾಳ ರಸ್ತೆಯ ಅಕ್ಕಮಹಾದೇವಿ ಅನುಭವ ಪೀಠದ ಆವರಣದಲ್ಲಿ ರಾಷ್ಟ್ರೀಯ ಬಸವದಳ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದರು. ನಂತರ ಮಾತನಾಡಿದ ಅವರು 12ನೇ ಶತಮಾನದ ಬಸವಣ್ಣನವರ ಕನಸು ಕಲ್ಯಾಣ ರಾಜ್ಯವಾಗಿತ್ತು ಆ ನಿಟ್ಟಿನಲ್ಲಿ ಕಲ್ಯಾಣ ರಾಜ್ಯ ಮಾಡಲು ನಾವು ಬದ್ಧರಿದ್ದೇವೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ ಶ್ರೀ ಅಕ್ಕಮಹಾದೇವಿ ಅನುಭವ ಪೀಠ ಅಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಮಾತೇ ಜ್ಞಾನೇಶ್ವರಿ. ಅವರು ಮಾತನಾಡಿ 12ನೇ ಶತಮಾನದಲ್ಲಿ ಗುರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ಪ್ರಸಾರ ಮತ್ತು ಪ್ರಚಾರ ಕಾರ್ಯವನ್ನ ಯಶಸ್ವಿಯಾಗಿ ಮಾಡಿ ಜಾತ್ಯತೀತ ಸಮಾಜ ನಿರ್ಮಾಣ ಮಾಡಲು ಹಾಗೂ ಸರ್ವ ಸಮಾನತೆಯ ಧರ್ಮ ಎಲ್ಲರಿಗೂ ದೊರೆತು ಕಲ್ಯಾಣ ರಾಜ್ಯ ಕಟ್ಟುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಹೆಗಲು ಕೊಟ್ಟು ದುಡಿಯುವಂತಾಗಬೇಕು ಎಂದು ಹೇಳಿದರು.
ಅಜಯ್. ಖ .ಚವ್ಹಾಣ ಜಿಲ್ಲಾ ಕಾರ್ಯದರ್ಶಿಗಳು ರಾಷ್ಟ್ರೀಯ ಬಸವ ದಳ ಇವರು ಮಾತನಾಡಿ ಬಹುದಿನಗಳಿಂದ ಜಿಲ್ಲಾ ಘಟಕವನ್ನು ಸ್ಥಾಪಿಸುವ ಹಂಬಲವನ್ನ ಹೊಂದಿದ್ದೆವು ಅದು ಇಂದು ಯಶಸ್ವಿಯಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಬಸವದಳ ಜಿಲ್ಲಾ ಘಟಕದ ಗೌರವ ಅಧ್ಯಕ್ಷರಾಗಿ ಬಸವರಾಜ ಆನೆಗುಂದಿ. ಜಿಲ್ಲಾಧ್ಯಕ್ಷರಾಗಿ ಪೂಜಾ ಆರ್ ಸವದತ್ತಿ, ಜಿಲ್ಲಾ ಕಾರ್ಯದರ್ಶಿಗಳಾಗಿ ಅಜಯ್.ಖ.ಚವ್ಹಾಣ ಹಾಗು ಉಪಾಧ್ಯಕ್ಷರಾಗಿ ಪರಮೇಶ್ವರ್ ಕೆಂಗಾರ, ವೀರಣ್ಣ ಎಂ ಕುಸುಗಲ್ ಸಹ ಕಾರ್ಯದರ್ಶಿಯಾಗಿ, ಸಂತೋಷ ಭೀ ಬಡಿಗೇರ್ ಕೋಶ್ಯಾಧ್ಯಕ್ಷರಾಗಿ, ಬಸವರಾಜ್.ಉ.ಸತ್ಯಣ್ಣನರ್ ಉಪಾಧ್ಯಕ್ಷರಾಗಿ, ಸುವರ್ಣಗು ಪತ್ತಾರ್ ಸಹ ಕಾರ್ಯದರ್ಶಿಯಾಗಿ, ರೇಣುಕಾ ಪಾಟೀಲ್ ಸಹ ಕಾರ್ಯದರ್ಶಿಗಳಾಗಿ, ಪದ್ಮಾವತಿ ಕಮ್ಮಾರ್ ಸಹ ಕಾರ್ಯದರ್ಶಿಗಳಾಗಿ ಡಾ, ವಿಶಾಲಾಕ್ಷಿ ಪಾಟೀಲ್ ಸಹ ಕಾರ್ಯದರ್ಶಿಗಳಾಗಿ, ಅಶೋಕ್ ಶೆಟ್ಟರ್ ಸಂಘಟನಾ ಕಾರ್ಯದರ್ಶಿಯಾಗಿ. ರಮಾನಂದ ಕಮ್ಮಾರ್ ಸಂಘಟನಾ ಕಾರ್ಯದರ್ಶಿಗಳಾಗಿ, ಚಂದ್ರಶೇಖರ್ ಹಿರೇಮಠ ಸಂಘಟನಾ ಕಾರ್ಯದರ್ಶಿಗಳಾಗಿ, ರಾಜಶೇಖರ್ ಸಂಗಣ್ಣನವರ್ ಸಂಘಟನಾ ಕಾರ್ಯದರ್ಶಿಯಾಗಿ ಇಂದು ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಲತಾ.ಎಸ್.ಮುಳ್ಳೂರ ರಾಷ್ಟ್ರೀಯ ಅಧ್ಯಕ್ಷರು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ (ರಿ) ನವದೆಹಲಿ ಹಾಗು ಶಿಕ್ಷಕಿಯಾದ ಡಾ .ಶಾಂತಾ. ಬಿರಾದಾರ್ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪೂಜ್ಯಶ್ರೀ ಮಹಾಜಗದ್ಗುರು ಲಿಂಗಾನಂದ ಮಹಾ ಸ್ವಾಮೀಜಿ ಮತ್ತು ಪೂಜ್ಯಶ್ರೀ ಮಹಾ ಜಗದ್ಗುರು ಪ್ರಥಮ ಮಹಿಳಾ ಮಾತೆ ಮಹಾದೇವಿಯವರ ಆಶೀರ್ವಾದದೊಂದಿಗೆ ಈಗಿನ ಮಹಾ ಜಗದ್ಗುರುಗಳು ಹಾಗೂ ದ್ವಿತೀಯ ಮಹಿಳಾ ಜಗದ್ಗುರುಗಳಾದ ಮಾತೇ ಗಂಗಾದೇವಿಯವರ ಆಶೀರ್ವಾದ ಅನುಗ್ರಹದೊಂದಿಗೆ ಪದಗ್ರಹಣ ಸಮಾರಂಭ ಮತ್ತು ಸತ್ಕಾರ ಸಮಾರಂಭ ಜರಗಿತು ಸಾನಿಧ್ಯವನ್ನ ಶ್ರೀ ಅಕ್ಕಮಹಾದೇವಿ ಅನುಭವ ಪೀಠ ಅಧ್ಯಕ್ಷರಾದ ಪೂಜ್ಯಶ್ರೀ ಜಗದ್ಗುರು ಮಾತೇ ಜ್ಞಾನೇಶ್ವರಿ. ಜಗದ್ಗುರು ಅಲ್ಲಮ ಪ್ರಭು ಮಹಾ ಪೀಠ ಅಳತೆ ಅಲ್ಲಮಗಿರಿ ಮಹಾರಾಷ್ಟ್ರದ ಪೂಜ್ಯಶ್ರೀ ಜಗದ್ಗುರು ಬಸವ ಕುಮಾರಸ್ವಾಮಿ ಜಿ, ಪೂಜ್ಯಶ್ರೀ ಗಂಗೋತ್ರಿ ಅಕ್ಕ ನಾಗಲಾಂಬಿಕ ಪೀಠದ ಉಳಿವಿ ಪೂಜ್ಯಶ್ರೀ ಜಗದ್ಗುರು ಬಸವ ಪ್ರಕಾಶ ಸ್ವಾಮೀಜಿ ಹಾಗೂ ಪೂಜ್ಯಶ್ರೀ ಜಗದ್ಗುರು ಶ್ರೀ ಚನ್ನ ಬಸವರಾಜ ಸ್ವಾಮೀಜಿಯವರು ಇದ್ದರು.
ಶಾಂತಾ ಬಿರಾದಾರ್ ಸಭಾ ನಿರ್ವಹಣೆ ಮಾಡಿದರು. ಶರಣ ಶ್ರೀಧರ್ ಭಜಂತ್ರಿ ಶರಣು ಸುಗಣ್ಣಾ ಟೀಚರ್ ಸ್ವಾಗತಿಸಿದರು.