ಧಾರವಾಡ : ಸಾರ್ವಜನಿಕ ಸಂಪರ್ಕವು ಪತ್ರಿಕೋದ್ಯಮದ ಭಾಗವಾಗಿದ್ದು, ಆಧುನಿಕ ಜಗತ್ತಿನಲ್ಲಿ ವ್ಯವಹಾರ ವೃದ್ಧಿಗೆ ಅನಿವಾರ್ಯವಾಗಿದೆ ಎಂದು ಕನರ್ಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ಉಲ್ಲಾಸ ಗುನಗಾ ಮಾತನಾಡಿದರು.
ಕನರ್ಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ ಆಯೋಜಿಸಿದ 'ಸಂವಹನ ಕೂಟ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಕಾಪರ್ೊರೇಟ್ ಜಗತ್ತು ಅನೇಕ ಉದ್ಯೋಗ ಸೃಷ್ಠಿ ಮಾಡಿದೆ.ಬ್ಯಾಂಕ್ಗಳ ವ್ಯವಹಾರ, ಕಾರ್ಯ ಯೋಜನೆಗಳು ಜನರನ್ನು ತಲುಪಲು ಸಾರ್ವಜನಿಕ ಸಂಪರ್ಕ ವಿಭಾಗ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.
ಇಂದಿನ ದಿನಗಳಲ್ಲಿ ಮಾಧ್ಯಮಗಳ ಪರಿಸ್ಥಿತಿ ಬದಲಾಗುತ್ತಿದೆ. ಭಾಷೆಯಲ್ಲಿ ಸರಳತೆ ಅವಶ್ಯಕ. ಸಾರ್ವಜನಿಕ ಸಂಪಕರ್ಾಧಿಕಾರಿ ಮೊದಲು ತನ್ನ ಸಂಸ್ಥೆಯ ವರ್ಚಸ್ಸನ್ನು ಪ್ರಚಾರಗೊಳಿಸಬೇಕು. ಬ್ಯಾಂಕ್ಗಳ ರಾಷ್ಟ್ರೀಕರಣ, ವಿಲೀನಗಳಿಂದ ಹೊಸ ಉದ್ಯೋಗಗಳನ್ನು ಸೃಷ್ಟಿಯಾಗುತ್ತಿದೆ ಅವುಗಳನ್ನು ಪಡೆದುಕೊಳ್ಳಲು ಪತ್ರಿಕೋದ್ಯಮ ವಿದ್ಯಾಥರ್ಿಗಳು ಅರ್ಹತೆ ಬೆಳೆಸಿಕೊಳ್ಳಬೇಕು, ಪ್ರತಿಯೊಬ್ಬರು ಮಾಹಿತಿಯ ಕಣಜವಾಗಬೇಕು ಎಂದು ಹೇಳಿದರು.
ಸಾರ್ವಜನಿಕ ಸಂಪಕರ್ಾಧಿಕಾರಿ, ತನ್ನ ಸಂಸ್ಥೆಯ ಉದ್ಯೋಗಿಗಳನ್ನು ಹಾಗೂ ಸಾರ್ವಜನಿಕರನ್ನು ನಿಭಾಯಿಸಬೇಕು. ಸಾರ್ವಜನಿಕರಿಗೆ ಡಿಜಿಟಲ್ ಬ್ಯಾಂಕಿಂಗ್ ಸಾಕ್ಷರತೆ ಮೂಡಿಸಬೇಕು, ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸಬೇಕು. ಸಂಸ್ಥೆಯ ಪ್ರಚಾರದ ಜೊತೆಗೆ, ಸಾಮಾಜಿಕ ಕಳಕಳಿಯುಳ್ಳ ಕಾರ್ಯಗಳನ್ನು ಸಹ ಕೈಗೊಳ್ಳಬೇಕು. ಪ್ರಸ್ತುತ ಡಿಜಿಟಲ್ಯುಗಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು. ನಂತರ ವಿದ್ಯಾಥರ್ಿಗಳೊಂದಿಗೆ ಸಂವಾದ ಮಾಡಿದರು,
ವಿಭಾಗದ ಮುಖ್ಯಸ್ಥ ಪ್ರೊ. ಜೆ.ಎಮ್. ಚಂದುನವರ ಮಾತನಾಡಿ,ಪತ್ರಿಕೋದ್ಯಮ ಆಕಾಂಕ್ಷಿಗಳು ಸಕಲ ವಿಷಯಗಳಲ್ಲಿ ಜ್ಞಾನ ಪಡೆದರಿಬೇಕು. ಪ್ರಸ್ತುತ ವಿದ್ಯಮಾನದಲ್ಲಿ ಆಥರ್ಿಕ ಪತ್ರಿಕೋದ್ಯಮಕ್ಕೆ ಹೆಚ್ಚಿನ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಕೌಶಲ್ಯ ಬೇಳೆಸಿಕೊಳ್ಳಬೇಕು ಎಂದು ಹೇಳಿದರು.
ವಿಭಾಗದ ಅತಿಥಿ ಉಪನ್ಯಾಸಕ ಡಾ. ಮಂಜುನಾಥ ಅಡಿಗಲ್, ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು. ನಿತೀಶ ಡಂಬಳ ಸ್ವಾಗತಿಸಿ, ನಿರೂಪಿಸಿದರು.