ನೂತನ ಅಧ್ಯಕ್ಷರಿಗೆ ಸನ್ಮಾನ

ಕೊಪ್ಪಳ 07: ನಗರದ ಬಹದ್ದೂರಬಂಡಿ ರಸ್ತೆ ನಿಮರ್ಿತಿ ಕೇಂದ್ರದ ಹತ್ತಿರ ಹಜರತ್ ಬೋರೆಶಾವಲಿ ದರ್ಗಾದ ಬಳಿ ಇರುವ ಮಿಲ್ಲತ್ ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆಯ ಮಿಲ್ಲತ್ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಶುಕ್ರವಾರದಂದು ಸಂಸ್ಥೆಯ ನೂತನ ಅಧ್ಯಕ್ಷ ಎಂ.ಡಿ.ಜಹೀರ್ ಅಲಿಗೆ ಶಾಲೆಯ ಸಿಬ್ಬಂದಿ ವರ್ಗದ ಪರವಾಗಿ ಸನ್ಮಾನ ಸಮಾರಂಭವು ಯಶಸ್ವಿಯಾಗಿ ಜರುಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಸಲಹೆಗಾರ ಎಂ. ಸಾದಿಕ್ ಅಲಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಅಬ್ದುಲ್ ಅಜೀಜ್ ಮಾನ್ವಿಕರ್, ಶಾಲೆಯ ಮುಖ್ಯ ಶಿಕ್ಷಕ ಮೊಹ್ಮದ್ ಅಜೀಜ್ ರೇವಡಿ, ನರಸಿಂಹ ದೇಸಾಯಿ, ಶಂಶಾದ್ ಬೇಗಂ ಖಾಜಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.