ನೂತನ ಡಿವೈಎಸ್ಪಿ ವೆಂಕಟಪ್ಪ ನಾಯಕ ಅಧಿಕಾರ ಸ್ವೀಕಾರ

ಲೋಕದರ್ಶನ ವರದಿ

ಕೊಪ್ಪಳ 18:  ಕೊಪ್ಪಳ ಉಪವಿಭಾಗಕ್ಕೆ ನೂತನ ಡಿವೈಎಸ್ಪಿಯಾಗಿ ವೆಂಕಟಪ್ಪ ನಾಯಕ್ ಅವರು ಗುರುವಾರದಂದು ಅಧಿಕಾರ ಸ್ವೀಕಾರ ಮಾಡಿದರು.

ಡಿವೈಎಸ್ಪಿ ವೆಂಕಟಪ್ಪ ನಾಯಕ್ ಅವರು ಮೂಲತಃ ಕೊಪ್ಪಳ ತಾಲೂಕಿನ ಡಂಬ್ರಳ್ಳಿ ಗ್ರಾಮದವರು ಕಡುಬಡತನದಲ್ಲಿ ಬೆಳೆದು ಡಂಬ್ರಳ್ಳಿ, ಹಿರೇಸಿಂದೋಗಿ, ಮುಂಡರಗಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ನಂತರ 1998ರಲ್ಲಿ ಪೊಲೀಸ್ ಇಲಾಖೆಯಲ್ಲಿ ಪಿಎಸ್ಐಯಾಗಿ ನೇಮಕ ಹೊಂದಿದರು.ನಂತರ 2008ರಲ್ಲಿ ಸಿಪಿಐಯಾಗಿ ಬಡ್ತಿ ಹೊಂದಿ 2011ರಿಂದ 2013ರವರೆಗೆ ಕೊಪ್ಪಳ ಗ್ರಾಮೀಣ ವೃತ್ತದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರು.

ಇವರ ಕಾರ್ಯ ದಕ್ಷತೆ ಉತ್ತಮ ಕಾರ್ಯನಿರ್ವಹಣೆಗಾಗಿ ಕರ್ನಾಟಕ ಸರಕಾರ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಪುರಸ್ಕರಿಸಿದೆ, ನಂತರ 2017ರಲ್ಲಿ ಡಿವೈಎಸ್ಪಿಯಾಗಿ ಬಡ್ತಿ ಹೊಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕೊಪ್ಪಳ ವಿಭಾಗದಲ್ಲಿ  ಕೊಪ್ಪಳ, ಯಲಬುಗರ್ಾ ತಾಲೂಕಾಗಳ 8 ಪೊಲೀಸ್ ಠಾಣೆಗಳು ಬರುತ್ತವೆ ಅದರ ಮೇಲಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದಾರೆ. ಕೊಪ್ಪಳ ಉಪವಿಭಾಗಕ್ಕೆ  ಆಗಮಿಸಿದ ನೂತನ ಡಿವೈಎಸ್ಪಿ ವೆಂಕಟಪ್ಪ ನಾಯಕ್ ಅವರನ್ನು ಕಚೇರಿಗೆ ಕೊಪ್ಪಳ ನಗರದ ಗಣ್ಯರು, ರಾಜಕೀಯ ಮುಖಂಡರು, ಸಾರ್ವಜನಿಕರು ಆಗಮಿಸಿ ಶುಭ ಕೋರಿದರು.