ನೌಕರರ ತುಟ್ಟಿಭತ್ಯೆ ಹೆಚ್ಚಳ ಆದೇಶ ತಡೆ ಹಿಡಿದ ದೆಹಲಿ ಸರ್ಕಾರ

ನವದೆಹಲಿ, ಏ 30,  ಕೊರೊನಾ  ಮತ್ತು ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಆರ್ಥಿಕತೆ ಸರಿದೂಗಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರವು 2021 ರ ಜುಲೈ ಅಂತ್ಯದ  ರವರೆಗೆ ನೌಕರರ ತುಟ್ಟಿಭತ್ಯೆ ಹೆಚ್ಚಳ ತಡೆ ಹಿಡಿಯಲು ತೀರ್ಮಾನಿಸಿದೆ.ತುಟ್ಟಿಭತ್ಯೆ ತಡೆಹಿಡಿಯುವ ವಿಚಾರದಲ್ಲಿ ಕೇಂದ್ರದ ಆದೇಶವನ್ನು ದೆಹಲಿ ಸರ್ಕಾರವು ಅನುಮೋದಿಸಿದೆ. ಇದು ದೆಹಲಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಅನ್ವಯಿಸಲಿದೆ ಎಂದು ದೆಹಲಿ ಹಣಕಾಸು ಇಲಾಖೆ ಸ್ಪಷ್ಪಪಡಿಸಿದೆ.ದೆಹಲಿ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸುಮಾರು 2.2 ಲಕ್ಷ ನೌಕರರು ಮತ್ತು ಪಿಂಚಣಿದಾರರಿಗೆ ಇದು ಅನ್ವಯವಾಗಲಿದೆ. ಈ ನಿರ್ಧಾರದ ಮೂಲಕ ಕೇಂದ್ರ ಸರ್ಕಾರದ ನಡೆಯನ್ನೇ ಅನುಸರಿಸಲು ದೆಹಲಿ ಸರ್ಕಾರ ಮುಂದಾಗಿದೆ. ನಿನ್ನೆಯಷ್ಟೆ ಕೇರಳ  ಸರ್ಕಾರ ನೌಕರರ ವೇತನ ಕಡಿತ  ಮಾಡುವ ತೀರ್ಮಾನ  ತೆಗೆದುಕೊಂಡಿತ್ತು.