ಕಂಪ್ಲಿಯಲ್ಲಿ ನೂತನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಉದ್ಘಾಟನೆ ಜನರ ಹಿತರಕ್ಷಣೆ, ಹಕ್ಕುಗಳಿಗಾಗಿ ನ್ಯಾಯಾಲಯ: ನ್ಯಾ.ಆರ್.ನಟರಾಜ
New Civil and JMFC Court inaugurated in Kampli, court for people's interests and rights: Justice R.
ಬಳ್ಳಾರಿ 26: ಜನರ ಹಿತರಕ್ಷಣೆ ಹಾಗೂ ಹಕ್ಕುಗಳನ್ನು ಒದಗಿಸಿಕೊಡುವ ಜೊತೆಗೆ ಸಕಾಲದಲ್ಲಿ ಜನತೆಗೆ ನ್ಯಾಯ ಒದಗಿಸಿಕೊಡುವುದು ನ್ಯಾಯಾಲಯದ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ ಉಚ್ಛನ್ಯಾಯಾಲಯ ಮತ್ತು ಆಡಳಿತಾತ್ಮಕ ನ್ಯಾಯಾಧೀಶರಾದ ಆರ್.ನಟರಾಜ ಅವರು ಹೇಳಿದರು. ಕಂಪ್ಲಿ ಪಟ್ಟಣದ 20ನೇ ವಾರ್ಡಿನ ಶಿಬಿರದಿನ್ನಿ (ಮಾರುತಿನಗರ)ಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೂತನ ಸಿವಿಎಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಜನರು ಕೇಸ್ ವಿಚಾರಣೆಗಾಗಿ ಕಂಪ್ಲಿಯಿಂದ ದೂರದ ಬಳ್ಳಾರಿ ಕೋರ್ಟ್ ಗೆ ಹೋಗಬೇಕಾಗಿತ್ತು.
ಕಂಪ್ಲಿಯಲ್ಲಿ ಕೋರ್ಟ್ ಆಗದಿದ್ದರೆ, ಅಪೂರ್ಣವಾಗುತ್ತಿತ್ತು. ಕೋರ್ಟ್ ಸ್ಥಾಪನೆಯೊಂದಿಗೆ ಹೂ ಅರಳಿದಂತಾಗಿದೆ ಎಂದು ತಿಳಿಸಿದರು. ಇಲ್ಲಿನ ಜನರು ಹಕ್ಕು ಭಾದಿತರಾಗಿದ್ದಾರೆ. ಇಲ್ಲಿನ ಜನತೆಗೆ ಕೋರ್ಟ್ ಅತ್ಯವಶ್ಯಕವಾಗಿದೆ. ಇಲ್ಲಿನ ಪುರಸಭೆಗೆ ಒಳಪಡುವ ಕಟ್ಟಡದಲ್ಲಿ ಕೋರ್ಟ್ ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿನ ನಗದಿತ ಸ್ಥಳದಲ್ಲಿರುವ ಕಟ್ಟಡಕ್ಕೆ ಹೊಸ ರೂಪುರೇಷೆ ನೀಡಲಾಗುತ್ತದೆ. ಸರ್ಕಾರ ಅನುಮತಿ ನೀಡಿದರೆ, ಭವ್ಯ ಕಟ್ಟಡ ಮಾಡಲಿದ್ದೇವೆ ಎಂದರು. ಉತ್ತಮ ಸ್ಥಳದಲ್ಲಿ ಕೋರ್ಟ್ ಸ್ಥಾಪಿತವಾಗಬೇಕಾಗಿತ್ತು. ಆದರೆ, ಇಲ್ಲಿನ ಇಕ್ಕಟ್ಟಿನ ಸ್ಥಳದಲ್ಲಿ ಹಾಗೂ ಜನರು ಬಾರದ ಸ್ಥಳದಲ್ಲಿ ಕೋರ್ಟ್ ಕಟ್ಟಡ ನೀಡಿರುವುದು ಅಸಮಾಧಾನವಿದೆ.
ಇಲ್ಲಿನ ಕೋರ್ಟ್ ಸಾಕಾಗಲ್ಲ. ಇಲ್ಲಿ 63 ಜನ ವಕೀಲರಿದ್ದು, ಒಂದು ಸಾವಿರ ಕೇಸ್ ಇರುತ್ತಿದ್ದವು. ಈಗ ಕಂಪ್ಲಿಯಲ್ಲೇ ನ್ಯಾಯಾಲಯ ಸ್ಥಾಪಿತವಾಗಿದೆ. ಇದರಿಂದ ಈ ಭಾಗದ ಜನರು ನ್ಯಾಯ ಪಡೆಯುವ ಜೊತೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದಾರೆ. ಜನರ ಹಿತರಕ್ಷಣೆ ಹಾಗೂ ಜನರು ತಮ್ಮ ಹಕ್ಕುಗಳನ್ನು ಪಡೆದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದರು. ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಸದಸ್ಯ ಅನೀಲ್ ಕುಮಾರ್ ಅವರು ಮಾತನಾಡಿ, ಕಂಪ್ಲಿಯಲ್ಲಿ ಈಗ ನ್ಯಾಯಾಲಯ ಸ್ಥಾಪನೆಗೊಂಡಿದೆ. ಕಂಪ್ಲಿ ಬಳಿಯಲ್ಲಿ ಮೀಸಲಿಸಿರುವ 3.12 ಎಕರೆ ಜಾಗದಲ್ಲಿ ಸುಮಾರು 25 ಕೋಟಿ ರೂ. ಅನುದಾನ ಮಂಜೂರು ಮಾಡಿಸಿ, ಭವ್ಯ ಕಟ್ಟಡ ನಿರ್ಮಿಸಿಕೊಡುವ ಭರವಸೆಯನ್ನು ಶಾಸಕ ಜೆ.ಎನ್.ಗಣೇಶ ನೀಡಿದ್ದಾರೆ.
ಸಕಾಲದಲ್ಲಿ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ವಕೀಲರು ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಜಿ.ಶಾಂತಿ, ಎಸ್.ಇಸ್ಮಾಯಿಲ್ ಜಬಿವುಲ್ಲಾ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಜೆ.ಎಂ.ಅನಿಲ್ ಕುಮಾರ, ಲೋಕೋಪಯೋಗಿ ಇಇ ಬಿ.ವಿಜಯ ಭಾಸ್ಕರ್, ವಕೀಲರಾದ ಪ್ರಭಾಕರ, ಹರೀಶ್, ರುದ್ರ್ಪ, ಶಿವಪ್ಪ, ಯಂಕಪ್ಪ, ನಟರಾಜ, ಹುಲುಗಪ್ಪ, ವೀರಣ್ಣ, ಮಾರುತಿಸಿಂಗ್, ಮೋಹನ್ ಕುಮಾರ್ ದಾನಪ್ಪ, ಮುಂಖಡರಾದ ಕೆ.ಎಂ.ಹೇಮಯ್ಯಸ್ವಾಮಿ, ಹೊಸಕೋಟೆ ಜಗದೀಶ, ಜಿ.ರಾಮಣ್ಣ, ಬಿ.ಸಿದ್ದಪ್ಪ ಸೇರಿದಂತೆ ಅನೇಕರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 