ಔರಂಗಾಬಾದ್ ಶಿಕ್ಷಣದ ಹೊಸ ಕೇಂದ್ರ :ಶರದ್ ಪವಾರ್ ಔರಂಗಾಬಾದ್‍,

(ಮಹಾರಾಷ್ಟ್ರ)ಡಿ 21 ಒಂದು ಕಾಲದಲ್ಲಿ ಪುಣೆಯನ್ನು ಗುಣಮಟ್ಟದ ಶಿಕ್ಷಣದ ಕೇಂದ್ರವೆಂದು ಪರಿಗಣಿಸಲಾಗಿತ್ತು ಆದರೆ ಇದೀಗ ಮರಾಠವಾಡ ಪ್ರದೇಶಗಳ ಔರಂಗಾಬಾದ್ ಈಗ ಈ ಮೆಚ್ಚುಗೆಯನ್ನು ಗಳಿಸಿದೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.  ಇತ್ತೀಚೆಗೆ ಮಹಾತ್ಮ ಗಾಂಧಿ ಮಿಷನ್ (ಎಂಜಿಎಂ) ಕ್ಯಾಂಪಸ್‍ನ 37 ನೇ ಸಂಸ್ಥಾಪನಾ  ದಿನದಂದು  ಪವಾರ್ ಮಾತನಾಡುತ್ತಿದ್ದರು.   ಮಾಜಿ ರಾಜ್ಯ ವಿಧಾನಸಭಾ ಸ್ಪೀಕರ್ ದಿಲೀಪ್ ವಾಲ್ಸೆ ಪಾಟೀಲ್, ವಿಶ್ವವಿದ್ಯಾಲಯದ ಕುಲಪತಿ ಅಂಕುಶ್ ರಾವ್ ಕದಮ್, ಎಂಎಲ್ಸಿ ಸತೀಶ್ ಚವಾಣ್, ಶಾಸಕ ರಾಜೇಶ್ ತೋಪೆ, ಮಾಜಿ ಸಚಿವ ಫೌಜಿಯಾ ಖಾನ್ ಮತ್ತು ಎನ್ ಡಿ ಮಹಾನೋರ್ ಉಪಸ್ಥಿತರಿದ್ದರು.    ಹೊಸ ಶಿಕ್ಷಣ ನೀತಿಯ ಪ್ರಕಾರ ಪ್ರತಿ ವಿಶ್ವವಿದ್ಯಾಲಯವು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದೆ ಎಂದ ಪವಾರ್, ಸರ್ಕಾರದ ನೆರವು ಪಡೆಯದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಈಗ ಸಾಧ್ಯವಿದೆ. ಎಂಜಿಎಂ ಸಂಸ್ಥೆ ಇತ್ತೀಚೆಗೆ ಡೀಮ್ಡ್ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿದೆ. ತರುವಾಯ, ಅದು ಈ ದಿಕ್ಕಿನಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ಕಳೆದ 37 ವರ್ಷಗಳಲ್ಲಿ, 50 ಸಾವಿರ ಎಂಜಿನಿಯರ್‌ಗಳು ಮತ್ತು 10ಸಾವಿರ ವೈದ್ಯರು ಈ ಸಂಸ್ಥೆಯಿಂದ ಹೊರಬಂದಿದ್ದಾರೆ. ಹೊಸ ಎಂಜಿಎಂ ವಿಶ್ವವಿದ್ಯಾಲಯವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಯನ್ನು ಪಡೆಯಲಿದೆ ಎಂದು ಶರದ್ ಪವಾರ್ ಆಶಿಸಿದ್ದಾರೆ.