ರಾಣೆಬೆನ್ನೂರಲ್ಲಿ ನೂತನ ಬಸವೇಶ್ವರ ರಕ್ತ ಕೇಂದ್ರ ಆರಂಭ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ - ಪ್ರಕಾಶಾನಂದಿಜಿ.
ರಾಣೇಬೆನ್ನೂರು 20 : ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತವನ್ನು ಮನುಷ್ಯನ ದಾನದಿಂದ ಮಾತ್ರ ಪಡೆಯಬಹುದಾಗಿದ್ದು, ಆರೋಗ್ಯವಂತ ಯುವ ಸಮೂಹ ಹೆಚ್ಚು ಹೆಚ್ಚು ರಕ್ತದಾನ ಮಾಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷ ಪ್ರಕಾಶಾನಂದ ಸ್ವಾಮೀಜಿ ಹೇಳಿದರು. ಅವರು ಗುರುವಾರ ಇಲ್ಲಿನ ಮೃತ್ಯುಂಜಯ ನಗರದ 1ನೇ ಮಹಡಿ ಗೌಡಪ್ಪ ಗೌಡರ ಕಟ್ಟಡದಲ್ಲಿ ನಡೆದ ಶ್ರೀ ಬಸವೇಶ್ವರ ರಕ್ತ ಕೇಂದ್ರ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಕ್ತದಾನದಿಂದ ರಕ್ತದೊತ್ತಡ. ಮಧುಮೇಹ ದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜೊತೆಗೆ ಆತ್ಮತೃಪ್ತಿ ಲಭಿಸುತ್ತದೆ ಎಂದರು. ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ಮಾತನಾಡಿ. ರಕ್ತಕ್ಕೆ ಯಾವುದೇ ಜಾತಿ. ಧರ್ಮ ಭೇದಗಳಿಲ್ಲ.ಅಪಘಾತಕ್ಕೀಡಾದಾಗ, ಅನಾರೋಗ್ಯ ಪೀಡಿತರಾದಾಗ ಅಥವಾ ತೀವ್ರ ತರನಾದ ಅನಾರೋಗ್ಯಕ್ಕೆ ಒಳಗಾದಾಗ ರಕ್ತದ ಅಗತ್ಯ ಬೀಳುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಕಂಡುಬರುತ್ತದೆ. ಹೀಗಿರುವಾಗ, ಜನರಲ್ಲಿ “ರಕ್ತದಾನ” ದ ಅರಿವು ಮೂಡಿಸುವ ಗುರುತರವಾದ ಜವಾಬ್ದಾರಿ ನಮ್ಮದಾಗಬೇಕು ಎಂದರು. ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ವಚನಾನಂದ ಮಹಾಸ್ವಾಮಿಗಳು. ಹಿರೇಹಡಗಲಿ ಹಾಲಸ್ವಾಮಿಜಿ ಮಹಾಸಂಸ್ಥಾನ ಮಠ ಸದ್ಗುರು ಶಿವಯೋಗಿ ಹಾಲಸ್ವಾಮಿಗಳು. ಅಭಿನವ ಹಾಲಸ್ವಾಮಿಗಳು. ಐರಣಿ ಐರಾವತ ಕ್ಷೇತ್ರ ಮನಿಮಠ ಗಜದಂಡ ಮಹಾಸ್ವಾಮಿಗಳು. ಜಗಳೂರು ಮಾಜಿ ಶಾಸಕ ಗುರು ಸಿದ್ದನಗೌಡ. ಪುಷ್ಪಾ ಬಾದಾಮಿ. ಭಾರತಿ ಜಂಬಗಿ. ಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ. ಸೇರಿದಂತೆ ಮತ್ತಿತರ ಗಣ್ಯರು, ವೈದ್ಯಕೀಯ ಕ್ಷೇತ್ರದ ಮುಖ್ಯಸ್ಥರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ, ಪ್ರಾರಂಭೋತ್ಸವಕ್ಕೆ ಎಲ್ಲ ರೀತಿಯ ಸಹಾಯ ಸಹಕಾರ ಒದಗಿಸಿದ ನೂರಾರು ಗಣ್ಯರನ್ನು ಉತ್ತಾನ ಗ್ರಾಮೀಣ ವಿಕಾಸ ಸೊಸೈಟಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಕೆ. ಸಿ.ರವಿ ಸ್ವಾಗತಿಸಿದರು. ಮುಖ್ಯ ವ್ಯವಸ್ಥಾಪಕ ಪ್ರಶಾಂತ್ ಎ. ಜೆ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ್ ಶಿವಾನಂದ್ ನಿರೂಪಿಸಿ, ವಂದಿಸಿದರು.