ಕೊಪ್ಪಳದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ

Netaji Subhash Chandra Bose birthday celebration in Koppal

ಕೊಪ್ಪಳದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ

ಕೊಪ್ಪಳ 24: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಐಡಿವೈಓ ನೇತೃತ್ವದಲ್ಲಿ 128ನೇ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆಯನ್ನು ಆಚರಣೆ ಮಾಡಲಾಯಿತು. ನೇತಾಜಿ ಎಂದರೆ ನಾಯಕ, ಜನ ಸಾಮನ್ಯರಿಂದ ನಾಯಕನ ಬಿರದನ್ನು ಪಡೆದು ಸಂಧಾನ ತೀತದ ಪಂಥದ ಅಗ್ರಗಣ್ಯ ನಾಯಕರಾಗಿ ಭಾರತದ ಸ್ವಾತಂತ್ರ ಹೋರಾಟದಲ್ಲಿ ಹೋರಾಡಿದ ಮಹಾನ್ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್‌.  ನೇತಾಜಿ ಅವರ ಹೋರಾಟವು, ತಾವು ವಿದ್ಯಾಭ್ಯಾಸದಿಂದ ಪಡೆದ ಆಗಿನ ಇಂಡಿಯನ್ ಸಿವಿಲ್ ಸರ್ವಿಸ್ ನಾಲ್ಕನೇ ರಾಂಕ್ ಅನ್ನು ಧಿಕ್ಕರಿಸಿರುವುದನ್ನು ನೋಡಿದರೆ ಇಂದಿನ ಯುವಕರ ಪದವಿ ಮತ್ತು ಅಂಕ ಗಳಿಸುವ ಉದ್ದೇಶಕ್ಕೆ ವ್ಯತಿರಿಕ್ತವಾಗಿ ಕಾಣುತ್ತಾರೆ. ಬ್ರಿಟಿಷ್ ಸೈನ್ಯದ ವಿರುದ್ಧ ಐಎನ್‌ಎ ಸೈನ್ಯವನ್ನು ಕಟ್ಟಿ ಭಾರತ ದೇಶವನ್ನು ಸ್ವತಂತ್ರಗೊಳಿಸುವದಲ್ಲದೆ ಭಾರತವನ್ನು ಶೋಷಣೆ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ಕನಸನ್ನು ಕಂಡಿದ್ದರು. ಎಂದು ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ವಿವರಿಸಿದರು.  

ಈ ಕಾರ್ಯಕ್ರಮದಲ್ಲಿ ಪ್ರಭಾರಿ  ಪ್ರಾಚಾರ್ಯರಾದ ನಂದಿನಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡರು,  ಉಪನ್ಯಾಸಕರಾದ ಹನುಮಂತಪ್ಪ, ಅನುಪಮ, ಸುರೇಶ್, ಡಿ ವೈ ಓ ಸಮಿತಿ ಸದಸ್ಯರಾದ ದೇವರಾಜ್ ಹೊಸಮನಿ ಉಪಸ್ಥಿತರಿದ್ದರು. 300ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.