ಲೋಕದರ್ಶನ ವರದಿ
ಸಂಬರಗಿ 07: ಗಡಿ ಭಾಗದ ಗ್ರಾಮ ಹಾಗೂ ತೋಟಪಟ್ಟಿಯ ವಸತಿಯಲ್ಲಿ ಕನ್ನಡ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅಥಣಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಮ್.ನೇಮಗೌಡ ಇವರು ಭೇಟಿ ನೀಡಿ ಮಕ್ಕಳ ಶಿಕ್ಷಣ ಸಮಸ್ಯೆ ಹಾಗೂ ಬಿಸಿ ಊಟದ ಮಾಹಿತಿ ಪಡೆದುಕೊಂಡರು. ಸಮಸ್ಯೆ ಇದ್ದ ಶಾಲೆಗಳಿಗೆ ಪರಿಹಾರಗೊಳಿಸಲಾಗುವದು ಎಂದು ಹೇಳಿದರು.
ಅರಳಿಹಟ್ಟಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಬಿಸಿ ಊಟ ಮಕ್ಕಳಿಗೆ ನೀಡುವದಕ್ಕಿಂತ ಮುಂಚಿತವಾಗಿ ಶಿಕ್ಷಕರು ಊಟವನ್ನು ಸೇವಿಸಿ ನಂತರ ಮಕ್ಕಳಿಗೆ ನೀಡಬೇಕು. ಖುದ್ದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನೇಮಗೌಡ ಇವರು ಸ್ವತಃ ಬಿಸಿ ಊಟವನ್ನು ಸೇವಿಸಿದರು. ಅದರಲ್ಲಿ ತಪ್ಪು ಕಾಣಿಸಿದರೆ ಬಿಸಿ ಊಟದ ಸಿಬ್ಬಂದಿಯವರ ಮೇಲೆ ಕ್ರಮ ಕೈಗೊಳ್ಳಲಾಗುವದೆಂದು ಅವರು ಎಚ್ಚರಿಸಿದರು.
ಖಿಳೇಗಾಂವ, ಆಜೂರ, ಸಂಬರಗಿ, ಅನಂತಪೂರ, ಸೇರಿದಂತೆ ಹಲವಾರು ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿದ ಪರಿಣಾಮ ಕೆಲ ಶಿಕ್ಷಕರು ಸತತವಾಗಿ ಶಾಲೆಗೆ ತಡವಾಗಿ ಬರುತ್ತಿದ್ದು ಅಂತಹ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲಾಗುವದು. ಮೇಲಾಧಿಕಾರಿಗಳು ಸತತವಾಗಿ ಶಾಲೆಗೆ ಭೇಟಿ ಮಾಡಿದ ಪರಿಣಾಮ ತಡವಾಗಿ ಬರುವ ಶಿಕ್ಷಕರಲ್ಲಿ ಭಯ ಉಂಟಾಗಿದೆ.