ಲೋಕದರ್ಶನ ವರದಿ
ರಾಮದುರ್ಗ: ಡ್ಯಾಂಗೆ ಬರುವ ಹಿನ್ನೀರು ಗಮನಿಸಿ ನದಿಗೆ ಹಂತ ಹಂತವಾಗಿ ಗೇಟ್ ಮೂಲಕ ನೀರು ಹರಿಸಬೇಕಿತ್ತು. ಗೇಟ್ಗಳ ಸಮರ್ಪಕ ನಿರ್ವಹಣೆ 2-3 ದಿನಗಳ ವರೆಗೆ ಅವು ತೆರೆಯದೆ ಇರುವುದರಿಂದ ತಡವಾಗಿ ನಂತರ ಗೇಟ್ ಧ್ವಂಸ ಮಾಡಿ ನೀರು ಬಿಟ್ಟಿದ್ದಾರೆ. ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದ ತಪ್ಪಿತಸ್ಥರ ಅಧಿಕಾರಿಗಳ ಮೇಲೆ ಸರಕಾರ ಶಿಸ್ತು ಕ್ರಮ ತೆಗೆದುಕೊಳ್ಳಬೇಕೇಂದು ರೈತ ಸೇನಾ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವೀಲುತೀರ್ಥ ಡ್ಯಾಂನ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಮಲಪ್ರಭಾ ನದಿಗೆ ಒಮ್ಮೆಲೇ ಬಿಡುಗಡೆಗೊಂಡ ನೀರಿನಿಂದ ನದಿ ಪಾತ್ರದ ಜನತೆ ಕಣ್ಣೀರಿನಲ್ಲಿ ಕೈ ತೊಳೆಯುವಂತಾಯಿತು. ಅದರ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಗೇಟ್ಗಳಿಗೆ 12 ಬ್ಯಾರಲ್ ಐಯಲ್ ಸುರಿದು ನಂತರ ಅವುಗಳನ್ನು ಧ್ವಂಸಗೊಳಿಸಿ 2-3 ದಿನ ಸಮಯದ ನಂತರ ನೀರು ಬಿಡಲಾಗಿದೆ. ಮಲಪ್ರಭಾ ನದಿ ಪ್ರವಾಹಕ್ಕೆ ಅಧಿಕಾರಿಗಳೇ ನೇರ ಹೊನೆ. ಅಧಿಕಾರಿಗಳ ತಪ್ಪು ಇಲ್ಲವೆಂದು ಸಾಭೀತಾದಲ್ಲಿ ನಾನು ರಾಜ್ಯವನ್ನೇ ತೊರೆಯುತ್ತೇನೆಂದು ವಿರೇಶ ಸೊಬರದಮಠ ಸವಾಲು ಹಾಕಿದರು.
ಬೆಳೆ ಪರಿಹಾರವಾಗಿ ಸರಕಾರ ಘೋಷಣೆ ಮಾಡಿದ ಹಣದಿಂದ ಯಾವುದೇ ಪ್ರಯೋಜನವಾಗದು. ಪ್ರತಿ ಹೆಕ್ಟರ್ ಪ್ರದೇಶಕ್ಕೆ ಕನಿಷ್ಠ 2 ಲಕ್ಷ ರೂ ಪರಿಹಾರ ನೀಡಿ, ರೈತರ ನೆರವಿಗೆ ಸರಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಸಂತ್ರಸ್ಥರ ಕೇಂದ್ರಗಳಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲ:
ಸಂತ್ರಸ್ಥರನ್ನು ಸುರಕ್ಷಿತ ಸ್ಥಳಗಳಲ್ಲಿ ಸ್ಥಳಾಂತರ ಮಾಡಲಾಗಿದೆ. ಆದರೆ ಅಲ್ಲಿ ಕುಡಿಯಲು ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದಲ್ಲ. ಪ್ರವಾಹ ಉಂಟಾಗಿ ತಿಂಗಳು ಕಳೆದರೂ ಶೆಡ್ ನಿರ್ಮಾಣ ಮಾಡಿಲ್ಲ. ಸರಕಾರ ಸಂತ್ರಸ್ಥರಿಗೆ ಶೀಘ್ರ ಶೆಡ್ ನಿರ್ಮಾಣ ಮಾಡಿ, ನಂತರ ಪ್ರವಾಹಪೀಡಿತ ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ಸೊಬರದಮಠ ಒತ್ತಾಯಿಸಿದರು.
ತಾರತಮ್ಯ ಬೇಡ: ಹಿಂದೆ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕೊಡಗಿನಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕೆ 10 ಲಕ್ಷ ಪರಿಹಾರ ನೀಡಿದ್ದಾರೆ. ಆದರೆ ರಾಜ್ಯ ಸರಕಾರ ಉತ್ತರ ಕನರ್ಾಟಕದಲ್ಲಿ ಪ್ರವಾಹಕ್ಕೆ ತುತ್ತಾಗಿ ಮನೆ ಕಳೆದುಕೊಂಡವರಿಗೆ ಮನೆ ನಿಮರ್ಾಣಕ್ಕೆ ಕೇವಲ 5 ಲಕ್ಷ ಘೋಷಣೆ ಮಾಡಿದೆ. ಉತ್ತರ ಕರ್ನಾಟಕ ಪ್ರದೇಶದಲ್ಲಿ ಮನೆ ನಿರ್ಮಾಣ ಕ್ಕೆ ಬುನಾದಿ ಸರಿಯಾಗಿಲ್ಲ. ಮನೆ ಚೆನ್ನಾಗಿ ನಿರ್ಮಾಣವಾಗಲು ಕನಿಷ್ಠ ರೂ. 15 ಲಕ್ಷ ಬೇಕಾಗುತ್ತದೆ. ಸರಕಾರ ಕೂಡಲೇ ಸಂತ್ರಸ್ಥರನ್ನು ಬೇರೆಡೆ ಸ್ಥಳಾಂತರಕ್ಕೆ ಕ್ರಮ ತೆಗೆದುಕೊಳ್ಳಬೇಕು. ಸ್ಥಳಾಂತರಕ್ಕೆ ಆಗ್ರಹಿಸಿದ ಜನತೆಗೆ ನೀವೇ ಜಮೀನು ನೀಡಿದಲ್ಲಿ ಮಾತ್ರ ಸ್ಥಳಾಂತರ ಸಾಧ್ಯ. ಗ್ರಾಮ ಸಭೆಯ ನಂತರ ಕ್ರಮ ತೆಗೆದುಕೊಳ್ಳುತ್ತೇವೆಂದು ಅಧಿಕಾರಿಗಳು ಹೇಳುವುದು ಸರಿಯಲ್ಲ ಎಂದು ಅಧಿಕಾರಿಗಳ ಕ್ರಮಕ್ಕೆ ಸೊಬರದಮಠ ವಿಷಾದ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರಾದಿ ಫಲಹಾರೇಶ್ವರ ಮಠದ ಶಿವಮೂತರ್ಿ ಸ್ವಾಮೀಜಿ, ರಾಮದುರ್ಗ ಶಿವಮೂತರ್ೇಶ್ವರ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಮಹದಾಯಿ ಹೋರಾಟ ಸಮನ್ವಯ ಸಿತಿಯ ತಾಲೂಕಾಧ್ಯಕ್ಷ ವೆಂಕಟೇಶ ಹಿರೇರಡ್ಡಿ, ರೈತ ಸೇನಾ ತಾಲೂಕಾಧ್ಯಕ್ಷ ಗಿರಿಯಪ್ಪ ಹಂಜಿ, ಪ್ರಧಾನ ಕಾರ್ಯದಶರ್ಿ ಹಣಮಂತ ಮಡಿವಾಳರ ಸೇರಿದಂತೆ ಇತರರಿದ್ದರು.