ಲೋಕದರ್ಶನ ವರದಿ
ಸಿದ್ದಾಪುರ 20: ಯುವಕರು ಇಂದು ತಮ್ಮಲ್ಲಿಯ ಕೌಶಲ್ಯ ಶಕ್ತಿಯನ್ನು ಬಳಸಿಕೊಂಡು ಯಾವುದೇ ಉತ್ತಮ ಸ್ವಉದ್ಯೋಗ ಕೈಗೊಳ್ಳುವುದಾದರೂ ಅದಕ್ಕೆ ಸರಕಾರದಿಂದ ಸಾಕಷ್ಟು ಪ್ರೋತ್ಸಾಹವಿದೆ. ಅಂತಜರ್ಾಲದ ಮೂಲಕ ಜಗತ್ತಿನ ಯಾವುದೇ ಭಾಗಗಳಿಂದ ಆ ಕುರಿತು ಹೆಚ್ಚಿನ ಮಾಹಿತಿ ಪಡೆಯುವ ಸೌಲಭ್ಯವಿದೆ ಎಂದು ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ ಹೇಳಿದ್ದಾರೆ. ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಹಾಗೂ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಕಾರವಾರ ಹಾಗೂ ನಿವೇದಿತಾ ಮಹಿಳಾ ಮಂಡಳ(ರಿ) ಸಿದ್ದಾಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಿವೇದಿತಾ ಮಹಿಳಾಮಂಡಳದಲ್ಲಿ ಸಂಘಟಿಸಿದ್ದ "ನೆರೆಹೊರೆ ಯುವ ಸಂಸದ್" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸ್ಥಳೀಯವಾಗಿ ದೊರೆಯುವ ಕಚ್ಚಾ ಸಾಮಗ್ರಿಗಳನ್ನು ಬಳಸಿಕೊಂಡು ವಿವಿಧ ರೀತಿಯ ಆಹಾರೋದ್ಯಮವನ್ನು, ಕರಕುಶಲ ಕಲಾ ಸಾಮಗ್ರಿಗಳನ್ನು ಹುಟ್ಟುಹಾಕಲು ಸಾಕಷ್ಟು ಅವಕಾಶವಿದೆ. ಸರಕಾರಿ ನೌಕರಿಯೊಂದನ್ನೇ ನೆಚ್ಚಿಕೊಳ್ಳದೇ ಸ್ವ ಉದ್ಯೋಗದ ಮೂಲಕ ತಾವು ಬೆಳೆಯುವ ಜತೆ ಸಾಕಷ್ಟು ಜನರಿಗೆ ಉದ್ಯೋಗಾವಕಾಶ ಕಲ್ಪಿಸಬಹುದಾಗಿದೆ ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪ.ಪಂ.ಸದಸ್ಯ ಗುರುರಾಜ ಶಾನಭಾಗ "ಯುವ ಸಂಘಟನೆ ಏಕೆ ಹೇಗೆ? ಧ್ಯೇಯೋದ್ದೇಶಗಳು" ಕುರಿತು ಉಪನ್ಯಾಸ ನೀಡಿ ಸಮಾಜ ಯುವಜನತೆಯಿಂದ ಸಾಕಷ್ಟು ಉತ್ತಮ ಕಾರ್ಯವನ್ನು ನಿರೀಕ್ಷಿಸುತ್ತದೆ.
ವಿದ್ಯಾಥರ್ಿದೆಸೆಯಲ್ಲಿ, ಹದಿಹರೆಯದಲ್ಲಿ ಆಫೀಮು, ಗಾಂಜಾ, ಗುಟಕಾದಂತಹ ಚಟಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಿದ್ದು ಚಟಗಳಿಂದ ದೂರ ಉಳಿದು ಯುವ ಶಕ್ತಿಯ ಸದುಪಯೋಗದಿಂದ ದೇಶ ಕಟ್ಟುವ ಕೆಲಸ ಆಗಬೇಕಾಗಿದೆ ಎಂದರು. ಎಸ್.ಬಿ.ಆಯ್.ನ ಅಧಿಕಾರಿ ಶ್ರೀಮತಿ ಸೌಮ್ಯ ನಾಯಕ "ಕೇಂದ್ರ ಪುರಸ್ಕೃತ ಯೋಜನೆ, ನಗದು ರಹಿತ ವ್ಯವಹಾರ" ಕುರಿತು, ಸಿಡಿಪಿಒ ಕಚೇರಿಯ ಜಯಶ್ರೀ ನಾಯ್ಕ "ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ" ಕುರಿತು, ಧನ್ವಂತರಿ ಆಯುವರ್ೇದ ಮಹಾವಿದ್ಯಾಲಯದ ಪ್ರಾಚಾಯರ್ೆ ಡಾ.ರೂಪಾ ಭಟ್ಟ "ದೈನಂದಿನ ಜೀವನದಲ್ಲಿ ಯೋಗ ಮತ್ತು ಅದರ ಉಪಯುಕ್ತತೆ" ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ನೆಹರು ಯುವಕೇಂದ್ರದ ಮೀರಾ ನಾಯ್ಕ ಪಾಲ್ಗೊಂಡಿದ್ದರು. ಸಭೆಯ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸುಮನಾ ಕಾಮತ ವಹಿಸಿ ಮಾತನಾಡಿದರು. ಉಷಾ ಉಲ್ಲಾಸ ಕಿಣಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನಿವೇದಿತಾ ಮಹಿಳಾ ಮಂಡಳದ ಅಧ್ಯಕ್ಷೆ ಗಾಯತ್ರಿ ವಿ.ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಹಿಳಾ ಮಂಡಳದ ಪ್ರಧಾನ ಕಾರ್ಯದಶರ್ಿ ಸುರೇಖಾ ಅಂಬೇಕರ್ ನಿರ್ವಹಿಸಿದರು. ಉಪಾಧ್ಯಕ್ಷೆ ಸುವಣರ್ಾ ಆರ್.ಹೆಗಡೆ ವಂದಿಸಿದರು.