ಗದಗ 27: ಸಾರ್ವಭೌಮತ್ವ, ಪ್ರಜಾಸತ್ತಾತ್ಮಕ, ಸಮಾಜವಾದಿ, ಜಾತ್ಯಾತೀತ, ಗಣರಾಜ್ಯ ಎಂಬ ಪಂಚತತ್ವದ ನಮ್ಮ ಸಂವಿಧಾನವು ಜಾರಿಗೆ ಬಂದ ಜನೇವರಿ 26ರ ದಿನವೇ ಗಣರಾಜ್ಯೋತ್ಸವ, ಅದು ರಾಷ್ಟ್ರದ ಜನರೆಲ್ಲರ ಅಭಿಮಾನ ಹಾಗೂ ವಿಶ್ವಾಸ ಮೂಡಿಸುವ ದಿನವಾಗಿದೆ ಎಂದು ರಾಜ್ಯದ ಮಾನ್ಯ ಗಣಿ, ಭೂ ವಿಜ್ಞಾನ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ನುಡಿದರು.
ಗದಗ ಜಿಲ್ಲಾಡಳಿತವು ಗದಗ ಬೆಟಗೇರಿಯ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ, ವಿವಿಧ ರಕ್ಷಣಾ, ಸ್ವಯಂಸೇವಾ, ವಿದ್ಯಾಥರ್ಿಗಳ ದಳಗಳನ್ನು ವೀಕ್ಷಿಸಿ, ಅವುಗಳ ಪಥಸಂಚಲನದಲ್ಲಿ ಗೌರವರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು. ಭಾರತದಲ್ಲಿ ಸಂವಿಧಾನವೇ ಸರ್ಮೋಚ್ಛವಾದುದು. ನಮ್ಮ ಸಂವಿಧಾನದ ಮೂಲಭೂತ ತತ್ವಗಳು, ಆಶಯಗಳು ಮತ್ತು ಸಿದ್ಧಾಂತಗಳನ್ನು ಸಾರಾಂಶ ರೂಪದಲ್ಲಿ ತಿಳಿಸುವ ಭಾರತದ ಪ್ರಜೆಗಳಾದ ನಾವು ಎಂದು ಆರಂಭಗೊಳ್ಳುವ ಪೀಠಿಕೆಯನ್ನು ಸಂವಿಧಾನದ ಪ್ರಸ್ತಾವನೆ ಎಂದು ಕರೆಯಲಾಗಿದೆ. ದೇಶದ ಜನಗಳ ಧರ್ಮ, ಭಾಷೆ, ಸಂಸ್ಕೃತಿ, ಪಂಗಡ, ಸಂಪ್ರದಾಯ ಮತ್ತು ಪರಂಪರೆಗಳಿಗೆ ಧಕ್ಕೆ ಬಾರದಂತೆ ಸಮಸ್ತರನ್ನು ಐಕ್ಯತೆ ಮತ್ತು ಸಹಿಷ್ಣುತೆಯಲ್ಲಿ ಬೆಸೆಯುವಂತೆ ಸಂವಿಧಾನದ ಕರಡನ್ನು ಸಿದ್ಧಪಡಿಸಿದ ಕೀತರ್ಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಸಮಿತಿ ಸದಸ್ಯರುಗಳಿಗೆ ಸಲ್ಲುತ್ತದೆ. ಗಣರಾಜ್ಯೋತ್ಸವದ ಈ ಸಂಭ್ರಮದ ದಿನದಂದು ಜಿಲ್ಲೆಯ ಜನತೆಯ ಪರವಾಗಿ ಅವರೆಲ್ಲರನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುತ್ತೇನೆ. ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
ಜಿಲ್ಲೆಯಲ್ಲಿ ಉಂಟಾಗಿದ್ದ ಭೀಕರ ನೆರೆಹಾವಳಿಯ ಪುನರ್ವಸತಿ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹಕ್ಕೆ ಒಳಗಾಗಿದ್ದ ಗದಗ ಜಿಲ್ಲೆಯ ನರಗುಂದ ರೋಣ ತಾಲೂಕಿನ ಸಂತ್ರಸ್ತ ಪ್ರದೇಶಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಮಂಜೂರಾದ 660 ಕಾಮಗಾರಿಗಳ ಪೈಕಿ ಈಗಾಗಲೇ 303 ಕಾಮಗಾರಿಗಳು ಮುಕ್ತಾಯವಾಗಿದ್ದು, 22 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು. ನೆರೆಹಾವಳಿಯಲ್ಲಿ ಹಾನಿಗೊಳಗಾದ ಎ ಕೆಟಗೆರಿಯಲ್ಲಿ 404, ಬಿ. ಕೆಟಗೆರಿಯಲ್ಲಿ 880 ಮತ್ತು ಸಿ ಕೆಟಗೆರಿಯಲ್ಲಿ 1603 ಮನೆಗಳ ನಿಮರ್ಾಣ ಮತ್ತು ದುರಸ್ತಿಗಾಗ ಈಗಾಗಲೇ ಸಂತ್ರಸ್ತರ ಖಾತೆಗೆ ನೇರವಾಗಿ ರಾಜೀವಗಾಂಧಿ ವಸತಿ ನಿಗಮದಿಂದ 20 ಕೋಟಿ ರೂ. ಜಮಾ ಮಾಡಲಾಗಿದೆ. ಜಿಲ್ಲೆಯ ಒಟ್ಟು 281 ಶಾಲೆಗಳ 770 ಕೊಠಡಿಗಳ ನಿಮರ್ಾಣ ಮತ್ತು ದುರಸ್ತಿಗಾಗಿ ರೂ.16.57 ಕೋಟಿ ರೂ. ಬಿಡುಗಡೆಯಾಗಿದ್ದು, ದುರಸ್ಥಿ ಕಾರ್ಯ ನಡೆಯುತ್ತಿದೆ. ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಮ್ಮ ಸರಕಾರ ನೆರೆಹಾವಳಿಗೆ ಸಂಬಂಧಪಟ್ಟಂತೆ ಮೂಲಭೂತ ಸೌಕರ್ಯಗಳ ಪುನರ್ನಿಮರ್ಾಣಕ್ಕೆ ದಾಖಲೆಯ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಸಚಿವರು ನುಡಿದರು.
ಜಿಲ್ಲೆಯ ಅಭಿವೃದ್ಧಿ ಕುರಿತು ಮಾತನಾಡಿದ ಸಚಿವರು ಬಡಜನರ ಬಹುದಿನಗಳ ಬೇಡಿಕೆಯಾದ ಉಚಿತ ಎಮ್.ಆರ್.ಐ. ಸ್ಕ್ಯಾನ ಆರಂಭಿಸಿ, ಬಡಜನರ ಹೆಚ್ಚಿನ ಆರೋಗ್ಯ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು. ರಾಜ್ಯ ಸರಕಾರ ಕಪ್ಪತ್ತು ಗುಡ್ಡವನ್ನು ವನ್ಯ ಜೀವಿ ಧಾಮ ಎಂದು ಘೋಷಿಸಿದ್ದು ಅರಣ್ಯ ಹಾಗೂ ಪರಿಸರ ರಕ್ಷಣೆಗೆ ಸರಕಾರ ಬದ್ದವಾಗಿದೆ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಜಿಲ್ಲೆಯಾದ್ಯಂತ ಒಟ್ಟು 15752 ಫಲಾನುಭವಿಗಳಿಗೆ 6.16 ಕೋಟಿ ರೂ. ಗಳನ್ನು ಅಂಶಿಕ ಪರಿಹಾರ ರೂಪದಲ್ಲಿ ನೀಡಲಾಗಿದೆ. ಭಾಗ್ಯಲಕ್ಷ್ಮೀ ಯೋಜನೆಯಡಿ 2006 ರಿಂದ ಡಿಸೆಂಬರ್-2019 ಅಂತ್ಯದವರೆಗೆ 69,701 ಫಲಾನುಭವಿಗಳಿಗೆ ಮಂಜೂರಾತಿ ನೀಡಿದ್ದು, ಇದರಲ್ಲಿ 67,025 ಫಲಾನುಭವಿಗಳಿಗೆ ಬಾಂಡ್ಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ 2018-19 ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮುಗಳಲ್ಲಿ ಬೆಳೆವಿಮೆ ನೋಂದಾಯಿಸಿದ ಸುಮಾರು 88,676 ರೈತರುಗಳಿಗೆ ಮುಂಗಾರಿನಲ್ಲಿ ರೂ. 224.00 ಕೋಟಿ ಹಾಗೂ ಹಿಂಗಾರಿನಲ್ಲಿ ರೂ.323.00 ಕೋಟಿ ಬೆಳೆ ವಿಮೆ ಮಂಜೂರಾಗಿದ್ದು ಗದಗ ಜಿಲ್ಲೆ ರಾಜ್ಯದಲ್ಲೇ ಮೊದಲನೆ ಸ್ಥಾನದಲ್ಲಿದೆ ಎಂದ ಸಚಿವ ಸಿ.ಸಿ.ಪಾಟೀಲ ರಾಜ್ಯದ ಹಾಗೂ ಗದಗ ಜಿಲ್ಲೆಯ ಅಭಿವೃದ್ಧಿಗೆ ಮಹಾಜನತೆಯ ಸಹಾಯ, ಸಹಕಾರ ಕೋರಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಬೆಟಗೇರಿಯ ಮಂಜು ಪ್ರೌಢಶಾಲೆ, ಹಚ್.ಸಿ.ಇ.ಎಸ್ ಪ್ರೌಢಶಾಲೆ, ಲೋಯಲಾ ಪ್ರೌಢಶಾಲೆ,, ಗದಗನ ಎಸ್.ಎಂ.ಕೆ.ನಗರದ ಸರ್ಕಾರಿ ಪ್ರೌಢ ಶಾಲೆ ವಿದ್ಯಾಥರ್ಿಗಳು ಪ್ರಸ್ತುಪಡಿಸಿದ ರಾಷ್ಟ್ರೀಯ ಭಾವೈಕ್ಯತೆ ಸಾರುವ ಹಾಗೂ ದೇಶ ಭಕ್ತಿ ಗೀತೆಗಳ ನೃತ್ಯ ರೂಪಕಗಳನ್ನು ಪ್ರಸ್ತುತಪಡಿಸಿದರು. ಗದಗ ಪೋಲಿಸ ಪಡೆಯಿಂದ ನಟರಂಗ ಸಂಘದ ಸಹಯೋಗದಲ್ಲಿ ಮುಂಬಯಿ ಮೇಲೆ ಉಗ್ರರ ದಾಳಿ ಸಂದರ್ಭದಲ್ಲಿ ಹುತಾತ್ಮರಾದ ತುಕಾರಾಮ ಅವರ ಬಲಿದಾನ ಕುರಿತ ರೂಪಕವು ಹೃದಯಸ್ಪರ್ಶಿಯಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಚ್.ಕೆ.ಪಾಟೀಲ ಅವರು ವಹಿಸಿದ್ದರು. ಜಿ.ಪಂ. ಅಧ್ಯಕ್ಷ ಕುಮಾರ ಸಿದ್ಧಲಿಂಗೇಶ್ವರ ಎಚ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿ.ಪಂ. ಉಪಾಧ್ಯಕ್ಷ ಮಲ್ಲವ್ವ ಬಿಚ್ಚೂರ , ಗದಗ ತಾ.ಪಂ. ಅಧ್ಯಕ್ಷ ಎಸ್.ಎಸ್. ಪಾಟೀಲ, ಗದಗ ಜಿಲ್ಲಾ ಪಂಚಾಯತ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಜಿ.ಪಂ., ಸದಸ್ಯರು, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಷಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ, ಜನಪ್ರತಿನಿಧಿಗಳು, ಗಣ್ಯರಾದ ಅನೀಲ ಮೆಣಸಿನಕಾಯಿ, ಸಂಗಮೇಶ ದಂದೂರ, ರಾಜು ಕುರಡಗಿ, ಕಾಂತಿಲಾಲ ಬನ್ಸಾಲಿ, ಎಮ್.ಎನ್.ಹಿರೇಮಠ, ವಸಂತ ಮೇಟಿ, ಪ್ರಸನ್ನ ನಾಯ್ಕರ, ಅಶೋಕ ಮಂದಾಲಿ, ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು, ವಿವಿಧ ಶಾಲಾ ಕಾಲೇಜುಗಳ ಶಿಕ್ಷಕವೃಂದ, ಅಪಾರ ಸಂಖ್ಯೆಯ ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದತ್ತಪ್ರಸನ್ನ ಪಾಟೀಲ ಹಾಗೂ ಡಾ.ಲಕ್ಷ್ಮೀದೇವಿ ಗವಾಯಿ ಕಾರ್ಯಕ್ರಮ ನಿರೂಪಿಸಿದರು.