ಬಾಗಲಕೋಟೆ: ಜಿಲ್ಲೆಯಲ್ಲಿ ನೆರೆ ಹಾವಳಿಗೆ ತುತ್ತಾದ ಗ್ರಾಮಗಳ ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಹೊರ ಜಿಲ್ಲೆಯ ಕೆಲ ಸಂಘ-ಸಂಸ್ಥೆಗಳು ಏಕಾಏಕಿ ಸಮೀಕ್ಷೆಯ ನೆಪದಲ್ಲಿ ಸಾರ್ವಜನಿಕರಲ್ಲಿ ತಪ್ಪು ಮಾಹಿತಿಗಳನ್ನು ಬಿತ್ತರಿಸುತ್ತಿದ್ದಾರೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಬಿರಾದಾರ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಕಚೇರಿ ಹಾಗೂ ಆಯಾ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಯಾವುದೇ ರೀತಿಯ ಸೂಕ್ತ ಮಾಹಿತಿ ಪಡೆಯದೇ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ತಮ್ಮನ್ನು ಸಹ ಸಂಪಕರ್ಿಸದೇ ಸಮೀಕ್ಷೆಯ ನೆಪದಲ್ಲಿ ನೆರೆ ಹಾವಳಿಯ ಮಕ್ಕಳ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಕೆಲ ಸಂಘ-ಸಂಸ್ಥೆಗಳು ಬಿತ್ತರಿಸುತ್ತಿವೆಯೆಂದು ಬಿರಾದಾರ ತಿಳಿಸಿದ್ದಾರೆ.
ನೆರೆ ಹಾವಳಿಗೆ ತುತ್ತಾದ 113 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 316 ಕೋಣೆಗಳ ರಿಪೇರಿ ಕಾರ್ಯಗಳು ಭರದಿಂದ ಸಾಗಿದ್ದು, ಇದಕ್ಕೆ 2.69 ಕೋಟಿ ರೂ. ಬಿಡುಗಡೆಯಾಗಿದೆ. ಈಗಾಗಲೇ ಆಯಾ ಎಸ್.ಡಿ.ಎಂ.ಸಿ ಖಾತೆಗೆ ನೇರವಾಗಿ ಹಣ ಜಮೆಯಾಗಿದೆಯೆಂದು ಬಿರಾದಾರ ತಿಳಿಸಿದ್ದಾರೆ. ಸಂಪೂರ್ಣ ಹಾಳಾಗಿ ಬಿದ್ದು ಹೋದ ಶಾಲಾ ಕೊಠಡಿಗಳ ಬದಲಾಗಿ ಮಕ್ಕಳಿಗೆ ಶೈಕ್ಷಣಿಕ ತೊಂದರೆಯಾಗಬಾರದೆನ್ನುವ ದೃಷ್ಟಿಯಿಂದ 94 ತಾತ್ಕಾಲಿಕ ಶೆಡ್ಗಳನ್ನು ನಿಮರ್ಿಸಿ ತರಗತಿಗಳನ್ನು ನಡೆಸಲಾಗುತ್ತಿದೆ. ಇಂಥ 100 ಕೋಟಣೆಗಳ ಪುನರ್ನಿಮರ್ಾಣಕ್ಕಾಗಿ 11.21 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಹ ಸರಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಂಟಗೋಡಿ, ಬುದ್ನಿ ಬಿ.ಕೆಯಲ್ಲಿ ಪಿಇಎಸ್ ಸಂಸ್ಥೆಯು ಮಾದರಿ ಶಾಲೆಗಳನ್ನು ನಿಮರ್ಿಸುತ್ತಿದೆ. ಮಣ್ಣೇರಿ, ಬೀರನೂರ, ತಳಕವಾಡಿ, ಢವಳೇಶ್ವರ ಗ್ರಾಮಗಳಲ್ಲಿ ವಿಪ್ರೋ ಸಂಸ್ಥೆಯವರು ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಹೊಸ ಶಾಲೆಗಳನ್ನು ನಿಮರ್ಿಸಲಾಗುತ್ತಿದೆ ಎಂದು ಉಪನಿದರ್ೇಶಕ ಬಿರಾದಾರ ತಿಳಿಸಿದ್ದಾರೆ.
ನೆರೆ ಹಾವಳಿಗೆ ತುತ್ತಾದ ಎಲ್ಲ ಗ್ರಾಮಗಳ ಶಾಲಾ ಮಕ್ಕಳಿಗೆ ಒಟ್ಟು 2.39 ಲಕ್ಷ ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಬಾದಾಮಿ ತಾಲೂಕಿಗೆ 34 ಸಾವಿರ, ಹುನಗುಂದ ತಾಲೂಕಿಗೆ 75 ಸಾವಿರ, ಜಮಖಂಡಿ ತಾಲೂಕಿಗೆ 82 ಸಾವಿರ ಹಾಗೂ ಮುಧೋಳಕ್ಕೆ 48 ಸಾವಿರ ಹೊಸ ಪಠ್ಯ ಪುಸ್ತಕಗಳನ್ನು ನೀಡಲಾಗಿದೆ ಎಂದು ಬಿರಾದಾರ ತಿಳಿಸಿದ್ದಾರೆ.
ಅಲ್ಲದೇ ಒಟ್ಟು 1445 ಶಾಲೆಗಳಿಗೆ ಶೂ ಹಾಗೂ ಸಾಕ್ಸ್ಗಳನ್ನು ಸಹ ಖರೀದಿಸಿ ವಿತರಿಸಲಾಗಿದೆ. ನೆರೆ ಹಾವಳಿಯಿಂದಾದ ಅಘಾತದಿಂದ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಶೈಕ್ಷಣಿಕ ಸಹಾಯ ಸೌಲಭ್ಯಗಳಿಗಾಗಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಎಲ್ಲ ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು, ಶಿಕ್ಷಣ ತಜ್ಞರನ್ನು ಕರೆಯಿಸಿ ಮಕ್ಕಳಲ್ಲಿ ಪ್ರೇರಣಾತ್ಮಕ ತರಬೇತಿಗಳನ್ನು ನೀಡಲಾಗಿದೆಯೆಂದು ಬಿರಾದಾರ ತಿಳಿಸಿದರು.