ನೆಹರು ಅಧುನಿಕ ಭಾರತ ನಿಮರ್ಾಣದಶಿಲ್ಪಿ: ಹುವಣ್ಣವರ

ಲೋಕದರ್ಶನ ವರದಿ

ಮೋಳೆ:  ದಿವಂಗತ ಪ್ರಧಾನಿ ಜವಹರಲಾಲ್ ನೆಹರೂರವರು ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಗಾಂಧೀಜಿಯವರ ಜೊತೆ ಹೋರಾಟಿದವರಲ್ಲಿ ಮಿಂಚೂಣಿಯಲ್ಲಿರುವ ನಾಯಕರು. ಇವರು ಅಧುನಿಕ ಭಾರತ ನಿಮರ್ಾಣಕ್ಕೆ ಒತ್ತು ಕೊಟ್ಟಿದ್ದರು ಎಂದು ಮುಖ್ಯೋಪಾಧ್ಯಾಯ ಬಿ.ಎಸ್ ಹುವಣ್ಣವರ  ಹೇಳಿದರು.

ಅವರು ನರೆ.14 ರಂದು  ಐನಾಪುರ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ.ಪ್ರಧಾನಿ ಜವಹರಲಾಲ್ ನೆಹರೂರವರ ಜಯಂತಿ ಅಂಗವಾಗಿ ನೆಹರೂರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿ ಮಾತನಾಡಿದರು.

ನೆಹರೂರವರು ಭರತದ ಪ್ರಥಮ ಸರ್ವಶ್ರೇಷ್ಠ ಪ್ರಧಾನಿಯಾಗಿದ್ದರು.ಅವರಿಗೆ ಮಕ್ಕಳೆಂದರೆ ಪಂಚಪ್ರಾಣ. ಎಡಬಿಡದೆ ಕೆಲಸಗಳ ಮದ್ಯದಲ್ಲೂ ಮಕ್ಕಳೊಂದಿಗೆ ಆಟವಾಡುವುದು ಅವರಿಗೆ ಬಹಳ ಪ್ರೀತಿ.ಹೀಗಾಗಿಯೇ ಅವರನ್ನು ಚಾಚಾ ನೆರರು ಎಂದು ಮಕ್ಕಳು ಪ್ರೀತಿಯಿಂದ ಕರೆಯುತ್ತಿದ್ದರು ಎಂದರು.

ಅವರ ಅನೇಕ ಅಭಿಮಾನಿಗಳು ಅವರ ಜನ್ಮ ದಿನಾಚರಣೆಯನ್ನು ಅತ್ಯಂತ ವೈಭವದಿಂದ ಆಚರಿಸಲು ಮುಂದಾದಾಗ ಅದನ್ನು ವಿಯದಿಂದಲೇ ತಮ್ಮ ಜನ್ಮ ದಿನವನ್ನು ಮೀಸಲಿಡಬೇಕೆಂದು ವಿನಂತಿಸಿದಾಗ ರಾಷ್ಟ್ರಾದ್ಯಂತ ನವ್ಹೆಂಬರ 14 ಮಕ್ಕಳ ದಿನವೆಂದು ಆಚರಿಸುವ ಪರಂಪರೆ  ಪ್ರಾರಂಭವಾಯಿತೆಂದರು. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಪಂಡಿಯ ಜವಹರಲಾಲ್ ನೆಹರು ಅವರು ಸ್ವಾತಂತ್ಯ್ರ ಹೋರಾಟದಲ್ಲಿ ಪಾಲ್ಗೊಂಡು ಶೆರೆಮನೆವಾಸ  ಅನುಭವಿಸಿದ್ದಾರೆ. ಅಲ್ಲಿಯೂ ಸಹ ಸತತ ಅಧ್ಯಯನ ಹಾಗೂ ಗ್ರಂಥವನ್ನು ರಚಿಸಿ ನಮ್ಮದೇಶದ ಐತಿಹಾಸಿಕ ,ಸಾಂಸ್ಕೃತಿಕ ಹಾಗೂ ಸಾಮಾಜಿಕ ಹಿನ್ನೆಲೆಯನ್ನು ಗ್ರಾಂಥದಲ್ಲಿ ಮುದ್ರಿಸಿದ್ದಾರೆ. ಇಂದಿರಾ ಗಾಧಿಯವರ ಪ್ರೀತಿಯ ತಂದೆಯಾಗಿದ್ದ ನೆಹರು ಅವರು ಜೈಲಿನಲ್ಲಿದ್ದರೂ ಸಹ ಮಗಳಿಗೆ ಮಹಾನ್ ವ್ಯಕ್ತಿಯಾಗಲು ಪ್ರೇರಣೆಯಾಗುವ ಪತ್ರಗಳನ್ನು  ಬರೆಯುತ್ತಿದ್ದರು  ಬಿ.ಎಸ್.ಹುವಣ್ಣವರ ಹೇಳಿದರು.  

ಈ ಕಾರ್ಯಕ್ರದಲ್ಲಿ ಬಿ.ಎಸ್.ಜುಗೂಳ, ಯು.ಎಸ್.ಕಾಳೆ, ಆರ್.ಎಂ.ತೆವರಟ್ಟಿ,ಜಿ.ಎಲ್.ಅಗಸಿಮನಿ, ಆರ್.ಎಸ್.ಭಜಂತ್ರಿ, ಎಸ್.ಜಿ.ಕುರಣೆ, ಎಸ್.ಡಿ,ನಾಯಿಕ, ಎ.ಎಂ.ಭರಮವಡಿಯರ, ಎ.ಎಸ್,ಯರಗಟ್ಟಿ, ಎಸ್.ಡಿ,ಕುಂಬಾರ, ಎಸ್,ಬಿ, ಚಂದಗಡೆ, ಎಸ್.ಎ.ಸಂಗಣ್ಣವರ ಉಪಸ್ಥಿತರಿದ್ದರು.