ನವದೆಹಲಿ, ನವೆಂಬರ್ 14 : ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ ಸಕ್ರಿಯ ಪಾತ್ರ, ನೀಡಿದ ಕೊಡುಗೆಯನ್ನು ಮರೆಯಲಾಗುದು ಎಂದೂ ನಂತರ ಮೋದಿ ಟ್ವೀಟ್ ಮಾಡಿದ್ದಾರೆ.
ನೆಹರೂ 1889 ರ ನವೆಂಬರ್ 14 ರಂದು ಉತ್ತರ ಪ್ರದೇಶದ ಪ್ರಯಾಗ್ರಾರಾಜ್ ಜನಿಸಿ, ಮೇ 27, 1964 ರಂದು ಕೊನೆಯುಸಿರೆಳೆದರು.
ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಜನ್ಮದಿನದ ಅಂಗವಾಗಿ, ಗೌರವ ಸೂಚಕವಾಗಿ ಪ್ರತಿವರ್ಷ ನವೆಂಬರ್ 14 ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ.
ನೆಹರೂ ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯತ್ತಿದ್ದರು ಮತ್ತು ಮಕ್ಕಳಿಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ನೀಡುವ ಮಹತ್ವವನ್ನು ನೆಹರು ಅವರು ಒತ್ತಿ ಹೇಳುತ್ತಿದ್ದರು .