ನೆಹರು ಜನ್ಮದಿನ: ಸೋನಿಯಾ, ಪ್ರಣಬ್ , ಮನಮೋಹನ್ ಸಿಂಗ್ ಗೌರವ ನಮನ

ನವದೆಹಲಿ, ನವೆಂಬರ್ 14 :      ದೇಶದ  ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮ ದಿನಾಚರಣೆಯಂದು   ಮಾಜಿ ರಾಷ್ಟ್ರಪತಿ  ಪ್ರಣಬ್ ಮುಖರ್ಜಿ, ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ನೆಹರೂ ಅವರಿಗೆ ಗೌರವ  ನಮನ ಸಲ್ಲಿಸಿದರು.  

ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಲ್ಲಿನ ಶಾಂತಿ ವನಕ್ಕೆ ತೆರಳಿ  ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಸಮಾಧಿಗೆ  ಪುಷ್ಪ ನಮನ ಸಲ್ಲಿಸಿದರು. 

ಶಾಂತಿ ವನದಲ್ಲಿ   ಪಂಡಿತ್ ನೆಹರೂ ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥ ನಡೆದ  ಕಾರ್ಯಕ್ರಮದಲ್ಲಿ ಡಾ.ಮುಖರ್ಜಿ, ಅವರಲ್ಲದೆ ಮಾಜಿ  ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಭಾಗವಹಿಸಿದ್ದರು. 

ರಾಜಕಾರಣಿ ಮತ್ತು ದೂರದೃಷ್ಟಿಯ ಪಂಡಿತ್ ನೆಹರೂ ಅವರಿಗೆ ಮಕ್ಕಳ ಬಗ್ಗೆ ತುಂಬಾ ಒಲವು ಇತ್ತು ಹೀಗಾಗಿ ಅವರ ಜನ್ಮದಿನವನ್ನು ದೇಶದಲ್ಲಿ ಮಕ್ಕಳ ದಿನವನ್ನಾಗಿಯೂ  ಆಚರಿಸಲಾಗುತ್ತಿದೆ.