ಚಿಂಚಲಿ ಪಟ್ಟಣ ಪಂಚಾಯತ ಅಧಿಕಾರಿಗಳ ನಿರ್ಲಕ್ಷ್ಯ

ಲೋಕದರ್ಶನ ವರದಿ

ಚಿಂಚಲಿ 16: ಕಳೆದ ಏಳು ತಿಂಗಳ ಹಿಂದೆ ಬಾರಿ ಪ್ರಮಾಣದ ನೆರೆ ಬಂದು ರೈತರ ಹಾಗೂ ವ್ಯಾಪಾರಸ್ಥರು ಬದುಕು ಬೀದಿಗೆ ಬಂದು ನಿಂತಿತ್ತು ಈಗ ಯಾವುದೇ ಮಳೆಯಿಲ್ಲ ನೆರೆಲ್ಲ ಮಹಾಪೂರವಿಲ್ಲ ಆದರು ಈ ಪಟ್ಟಣದಲ್ಲಿ ನೀರಿನ ಹಾವಳಿ ಮಾತ್ರ ಇನ್ನೂವರೆಗೆ ಕಡಿಮೇವಾಗಿಲ್ಲ. ಇದರಿಂದ್ದಾಗಿ ತರಕಾರಿ ವ್ಯಾಪಾರಸ್ಥರು ಮತ್ತೆ ಕಂಗಾಲಾಗಿ ಹೋಗಿದ್ದಾರೆ.

ಹೌದು ದಕ್ಷಿಣ ಭಾರತದ ಅತೀ ದೊಡ್ಡ ಜಾತ್ರೆಯಲ್ಲಿ ಚಿಂಚಲಿ ಮಾಯಾಕ್ಕಾ ದೇವಿಯ ಜಾತ್ರೆ ಈ ಜಾತ್ರೆಯಗೆ ಈ ಜಾತ್ರೆಯಲ್ಲಿ ರಸ್ತೆಯ ವ್ಯಾಪಾರಸ್ತರ ಹೊಟ್ಟೆಯ ಮೇಲೆ ನೀರು ಹಾಕುವ ಕೆಲಸ ಪಟ್ಟಣ ಪಂಚಾಯತ ಅಧಿಕಾರಿಗಳು ಮಾಡಿರುವುದರಿಂದ ವ್ಯಾಪಾರಸ್ಥರಿಗೆ ಸಾವಿರಾರು ರೂಪಾಯಿಗಳಷ್ಟು ನಷ್ಟವಾಗಿ ತರಕಾರಿಯು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.

  ಚಿಂಚಲಿ ಮಾಯಾಕ್ಕಾ ದೇವಿಯ ಜಾತ್ರೆಗೆ ಬರುವ ಭಕ್ತರಿಗಾಗಿ ತರಕಾರಿ ವ್ಯಾಪಾರಸ್ಥರು ಮತ್ತು ಹೊಟೇಲಗಳ ಪಟ್ಟಣ ಪಂಚಾಯತ ಚಂರಡಿ ನೀರು ಹೋಕ್ಕಿ ರಸ್ತೆ ವ್ಯಾಪಾರಸ್ತೆ ತರಕಾರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಮತ್ತು ಇದೆ ನೀರು ಜಾತ್ರೆಯ ಹತ್ತಾರು ಹೊಟೇಲಗಳಲ್ಲಿ ಹೋಗಿ ಅವುರಗಳ ವ್ಯಾಪಾರ ವೈವಾಟ್ಗಳು ಸಂಪೂರ್ಣವಾಗಿ ನಾಲ್ಕು ದಿನಗಳಿಂದ ಬಂದಾಗಿ ಚರಂಡಿ ನೀರಿನಲ್ಲಿಯೇ ಕಾಲ ಕಳೆಯುವಂತ್ತಾಗಿದೆ ಹೀಗಾಗಿ ಈ ಹೊಟೇಲಗಳು ಗಬೆದ್ದು ನಾರುತ್ತಿವೆ ಇದರಿಂದ ಗ್ರಾಹಕರು ಬಾರದಂತ್ತೆ ದುರವಾಸನೆ ಹಿಡದಿದೆ. ಮತ್ತು ತರಕಾರಿಗಳು ಚರಂಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ತರಕಾರಿ ವ್ಯಾಪಾರಸ್ಥರು ಜಾತ್ರೆಯಲ್ಲಿ ಹಗಲು ರಾತ್ರಿ ಕಣ್ಣಿರು ಹಾಕುತ್ತಿದ್ದಾರೆ.

ವ್ಯಾಪಾರಸ್ಥರು: ನಾವುಗಳು ಪಟ್ಟಣ ಪಂಚಾಯತಿಗೆ ಜಾತ್ರೆಯ ಸಂದರ್ಭದಲ್ಲಿ ಎರಡರಷ್ಟು ತೆರೆಗೆಯನ್ನು ಕಟ್ಟುತೇವೆ ಮತ್ತು ಖಾಸಗಿ ವ್ಯೆಕ್ತಿಗಳಿಗೆ ಜಾಗದ ಬಾಡಿಗೇಯೂ ಕೊಡಬೇಕು ಆದರು ಕಳೆದ ನಾಲ್ಕು ದಿನಗಳಿಂದ ಚರಂಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದರಿಂದ ನಮ್ಮ ವ್ಯಾಪಾರಗಳು ವೈವಾಟಗಳ ನಡೆದಿಲ್ಲ ಆದರೂ ಸಹ ಪಂಚಾಯತ ಅಧಿಕಾರಿಗಳು ತೆರಿಗೆ ಹಣ ಮಾತ್ರ ಪಡೆದುಕೊಂಡು ಹೋದರು ಸಹ ಚರಂಡಿ ನೀರು ಮಾತ್ರ ರಸ್ತೆಯ ಮೇಲೆ ಹಾಗೂ ಅಂಗಡಿಗಳಿಗೆ ನುಗ್ಗಿರುವುದರಿಂದ ಲಕ್ಷಾಂತರ ವ್ಯಾಪಾರ ವೈವಾಟವಾಗಿಲ್ಲ. 

ಈ ಚರಂಡಿ ನೀರು ಅಂಗಡಿ ಹಾಗೂ ರಸ್ತೆಯ ವ್ಯಾಪಾರಸ್ಥರಿಗೆ ಹಾನಿವಾಗಿರುವ ಬಗ್ಗೆ ಸಾಕಷ್ಟು ಬಾರಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಗಮನಕ್ಕೆ ತಂದರು ಸಹ ಯಾವುದೇ ಪ್ರಯೋಜನೆವಾಗಿಲ್ಲವೆಂದ್ದು ಕಣ್ಣಿರು ಹಾಕಿ ಮಾಧ್ಯಮದವರ ಮುಂದೆ ಅಳಲವನ್ನು ತೊರಿಕೊಂಡರು.

ಚಿಂಚಲಿ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಅಧಿಕಾರಿಗಳಿಗೆ ಹೇಳೊವರು ಇಲ್ಲ ಕೇಳೋವರು ಇಲ್ಲ ಅನುವ ಮಾತುಗಳು ಕೇಳಿ ಬರುತ್ತಿವೆ ಹೀಗಾಗಿ ಪಟ್ಟಣ ಪಂಚಾಯತ ಕಾರ್ಯಲಯದಲ್ಲಿ ಮುಖ್ಯಾಧಿಕಾರಿಗಳು ಇಲಾಖೆಯ ನೇಮಾನುಸಾರವಾಗಿ ಸ್ಥಾನಿಕವಾಗಿ ಇರಬೇಕು. 

ಆದರೆ ಚಿಂಚಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಅವರು 11 ಗಂಟೆಗೆ ಬಂದು ಸಾಯಂಕಾಲ 4 ಗಂಟೆಗೆ ರೈಲು ಹತ್ತಿ ಮನೆಗೆ ತೆರಳುತ್ತಾರೆ ಮುಖ್ಯಾಧಿಕಾರಿ ಸ್ಥಾನಿಕವಾಗಿ ಇಲ್ಲದೇ ಇರುವುದರಿಂದ  ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಸರಿಯಾಗಿ ಪಟ್ಟಣವನ್ನು ಸ್ವಚ್ಛತೆ ಮಾಡದೇ ಮುಖ್ಯ ಕಾರಣ ಮತ್ತು ಸಿಬ್ಬಂದಿಗಳು ಕಾರ್ಯಾಲಯದಲ್ಲಿ ಸರಿಯಾಗಿ ಸಾಮಾನ್ಯ ಜನರಿಗೆ ಇಲಾಖೆಯ ಮಾಹಿತಿ ನೀಡದೇ ಪಟ್ಟಣ ಪಂಚಾಯತಿಯಲ್ಲಿ ಕಾಲಹರಣ ಮಾಡುತ್ತಾರೆ. ಇನ್ನಾದರು ಮೇಲಾಧಿಕಾರಿಗಳು ಚಿಂಚಲಿ ಪಟ್ಟಣ ಪಂಚಾಯತ ಕಡೆಗೆ ಹೆಚ್ಚಿನ ಗಮನ ಹರಿಸಿ ಪಟ್ಟಣ ಸ್ವಚ್ಛತೆ ಕಾಪಾಡಿಕೊಳ್ಳುತ್ತಾರೆಯೋ ಕಾದು ನೋಡೋಣ?