ಲಕ್ನೋ, ಡಿ 17: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಹಿಂದೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿರುವ ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಮಾಯಾವತಿ, ಮಂಗಳವಾರ ಈ ಅಸಂವಿಧಾನಿಕ ಕಾನೂನು ಭವಿಷ್ಯದಲ್ಲಿ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಮಾಯಾವತಿ, "ಈ ಅಸಂವಿಧಾನಿಕ ಕಾನೂನನ್ನು ಹಿಂದೆಗೆದುಕೊಳ್ಳುವಂತೆ ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ, ಇಲ್ಲದಿದ್ದರೆ ಅದು ಭವಿಷ್ಯದಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಕೇಂದ್ರ ಸರ್ಕಾರವು, ತುತರ್ು ಪರಿಸ್ಥಿತಿಯಂತಹ ವಾತಾರವಣ ಸೃಷ್ಟಿಸಬಾರದು, ಕಾಂಗ್ರೆಸ್ ಈ ಹಿಂದೆ ಇದನ್ನೇ ಮಾಡಿತ್ತು ಎಂದು ಹೇಳಿದ್ದಾರೆ.ಸಿಎಎ ಬಗ್ಗೆ ದೂರು ನೀಡಲು ರಾಷ್ಟ್ರಪತಿಯವರ ಭೇಟಿಗೆ ಸಮಯವನ್ನು ಬಿಎಸ್ಪಿ ಸಂಸದೀಯ ಸಮಿತಿ ಕೋರಿದೆ ಎಂದು ಮಾಹಿತಿ ನೀಡಿದರು.ಸಿಎಎ ವಿರುದ್ಧ ಮತ್ತು ಯುಪಿ ಅಸೆಂಬ್ಲಿಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆಯೂ ಬಿಎಸ್ಪಿ ಧ್ವನಿ ಎತ್ತಲಿದೆ ಎಂದು ಅವರು ತಿಳಿಸಿದರು.