ಹಾರೂಗೇರಿಯಲ್ಲಿ ಬೇವು ಹಿ ಅಶ್ವತ್ಥ ಮರಕ್ಕೆ ಕಂಕಣಭಾಗ್ಯ
Neem and Peepal trees united in ceremonial marriage in Harugeri
ಲೋಕದರ್ಶನ ವರದಿ
ಹಾರೂಗೇರಿ 30 : ಬೇವಿನ ಮರ ಹಾಗೂ ಅಶ್ವತ್ಥ (ಅರಳಿ) ಈ ಎರಡೂ ಮರಗಳೂ ಒಂದೇ ಬೇರಿನಡಿಯಲ್ಲಿ ಸಂಗಮವಾಗಿದ್ದು, ಅವು ಬೆಳೆದಂತೆ ಒಂದು ಕಡೆ ಬೇವು ಹಾಗೂ ಇನ್ನೊಂದೆಡೆ ಅಶ್ವತ್ಥ ಮರ, ಹೀಗೆ ಒಟ್ಟೊಟ್ಟಿಗೆ ಬೆಳೆದು ಎರಡೂ ಮರಗಳು ಒಂದೇ ದೇಹ ಹಾಗೂ ಬೇರೆ ಬೇರೆ ರೆಂಬೆ ಕೊಂಬೆಗಳನ್ನು ಹೊಂದಿವೆ.
ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಹತ್ತಿರ ಒಂದಾಗಿರುವ ಈ ಜೋಡಿ ಮರಗಳಿಗೆ ಶುಕ್ರವಾರ ರಾತ್ರಿ ನೂರಾರು ಮಹಿಳೆಯರು ಶಾಸ್ತ್ರೋಕ್ತವಾಗಿ ಮದುವೆ ಮಾಡಿದ ವಿಶೇಷ ಸಮಾರಂಭ ನೆರವೇರಿತು.
ಬೇವಿನ ಮರಕ್ಕೆ ಮುತೈದೆಯರಿಂದ ಸೀರೆ, ಅರಿಸಿನ, ಕುಂಕುಮ, ಹಸಿರು ಬಳೆ, ಕಾಲುಂಗುರ ಹಾಕಲಾಗಿತ್ತು. ಅಶ್ವತ್ಥ (ಅರಳಿ) ಮರಕ್ಕೆ ಬಿಳಿ ಲುಂಗಿ, ಟೋಪಿ, ಧೋತಿ ತೊಡಿಸಿ ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಶಾಸ್ತ್ರೋಕ್ತವಾಗಿ ಮಂತ್ರ ಪಠಿಸಿ, ಅಕ್ಷತೆ ಹಾಕಿ, ಮಾಂಗಲ್ಯ ಧಾರಣೆ ಮಾಡಲಾಯಿತು. ಸ್ವಾಮಿಗಳು ಪೂಜೆ ನೆರವೇರಿಸಿದರು. ಅಕ್ಕನ ಬಳಗದ ಶರಣೆಯರು ಸೋಬಾನ ಗೀತೆಗಳನ್ನು ಹಾಡಿದರು.
ಸೂರ್ಯೋದಯದ ವೇಳೆಯಲ್ಲಿ ಅಶ್ವತ್ಥ ಮರಕ್ಕೆ ಪ್ರತಿ ಗುರುವಾರ ಹಾಗೂ ರವಿವಾರದಂದು ವೃಕ್ಷವನ್ನು ಮಡಿಯಿಂದ 11 ಪ್ರದಕ್ಷಿಣೆ ಹಾಕಿದರೆ ಆಯುಷ್ಯ ವೃದ್ಧಿಯಾಗುತ್ತದೆ ಎಂಬುದು ಪುರಾತನ ಗ್ರಂಥಗಳಲ್ಲಿ ಉಲ್ಲೇಖವಿದೆಯಂತೆ. ಅಲ್ಲದೇ ಮಕ್ಕಳಿಲ್ಲದವರು ಮಕ್ಕಳನ್ನು ಪಡೆಯಲು ಮತ್ತು ಸತಿ-ಪತಿಗಳಲ್ಲಿಯ ಸಂಬಂಧ ವೃದ್ಧಿಗಾಗಿ ಈ ಜೋಡಿ ವೃಕ್ಷಗಳನ್ನು ದಶಕಗಳಿಂದ ಪೂಜಿಸುತ್ತ ಬರಲಾಗಿದೆ.
ಲೇಖಕಿ ಡಾ.ರತ್ನಾ ಬಾಳಪ್ಪನವರ, ಡಾ.ಸಿ.ಆರ್.ಗುಡಸಿ, ಜನತಾ ಬ್ಯಾಂಕ್ ಅಧ್ಯಕ್ಷ ರಾಜಶೇಖರ ಪಾಟೀಲ, ಎಂ.ಬಿ.ಪಾಟೀಲ, ಶಿವಾನಂದ ಮಠಪತಿ, ಶಂಕರ ಮಾನಶೆಟ್ಟಿ, ಜಯಶ್ರೀ ಪಾಟೀಲ, ಅಮೃತಾ ಮಠಪತಿ, ಮಹಾದೇವಿ ಕಬ್ಬೂರ, ಅಕ್ಷತಾ ಕಾಂಬಳೆ, ಪ್ರೇಮಾ ಚಿಂಚಲಿ, ಮಲ್ಲನಗೌಡ ಪಾಟೀಲ, ಮಲ್ಲಯ್ಯ ಮಠಪತಿ, ಬಸಯ್ಯ ಮಠಪತಿ, ವಿರುಪಾಕ್ಷಯ್ಯ ಮಠಪತಿ, ಸೋಮಯ್ಯ ಮಠಪತಿ, ಬಸಯ್ಯ ಹಿರೇಮಠ, ಈರ್ಪ ಲುಡುಬುಡೆ, ಕೆಂಪಣ್ಣ ಗಾಳಿ, ಶ್ರೀಶೈಲ ಹಿರೇಮಠ, ಅಶೋಕ ಬಿಳ್ಳೂರ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 