ಸೈಬರ ಕ್ರೈಂ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ: ಕೆಂಗಾಪೂರ
ಕಲಾದಗಿ 14: ಗ್ರಾಹಕರು ಬ್ಯಾಂಕಿನಲ್ಲಿಟ್ಟಿರುವ ಹಣವನ್ನು ಅಧುನಿಕ ತಂತ್ರಜ್ಞಾನ ಬಳಸಿ ಕೊಳ್ಳೆ ಹೊಡೆಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥ ಕೃತ್ಯಗಳ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಬಾಗಲಕೋಟ ವಿದ್ಯಾಗಿರಿಯ ಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಿ.ಎಸ್.ಕೆಂಗಾಪೂರ ಹೇಳಿದರು.
ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ಅರ್ಥಶಾಸ್ತ್ರ ವಿಭಾಗದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಬ್ಯಾಂಕೋದ್ಯಮದಲ್ಲಿ ಸೈಬರ ಭದ್ರತೆ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ, ಇಂದು ಜನರಿಗೆ ಹಣಕಾಸಿನ ವ್ಯವಹಾರಕ್ಕೆ ಬ್ಯಾಂಕುಗಳು ಸಂಪರ್ಕ ಸೇತುವೆಯಂತೆ ಕೆಲಸ ಮಾಡುತ್ತಿವೆ. ಆದರೆ ನಾವು ಬ್ಯಾಂಕ್ ನಲ್ಲಿ ಇಟ್ಟ ಹಣ ಪೊನ್ ಪೇ, ನೆಟ್ ಬ್ಯಾಂಕಿಂಗ, ಎಟಿಎಂ ಗಳ ಮೂಲಕ ವ್ಯವಹರಿಸುವದರಿಂದ ಬ್ಯಾಂಕ ಹಣಕಾಸು ವ್ಯವಹಾರಕ್ಕೂ ಅನ್ಯ ಮಾರ್ಗಗಳಿಂದ ಹಣ ಲಪಟಾಯಿಸುವ ತಂತ್ರಗಳನ್ನು ಉಪಯೋಗಿಸುವ ಜನರು ಹೆಚ್ಚಾಗುತ್ತಿದ್ದರಿಂದ ಅಂಥವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ನಮ್ಮ ಬ್ಯಾಂಕ ವ್ಯವಹಾರ ಕುರಿತು ಯಾರಿಗೂ ಸುಳಿವು ನೀಡಬಾರದು ಎಂದರು.
ಪ್ರಾಚಾರ್ಯ ಡಾ.ಎಚ್ .ಬಿ.ಮಹಾಂತೇಶ ಮಾತನಾಡಿ, ಇಂದು ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಬ್ಯಾಂಕ್ ಖಾತೆಗಳನ್ನು ನಾವು ಸುಭದ್ರವಾಗಿ ಇಟ್ಟುಕೊಳ್ಳಬೇಕು.ಬ್ಯಾಂಕಿನ. ವ್ಯವಹಾರ ಕುರಿತು ಬ್ಯಾಂಕಿನವರು, ಸರಕಾರ ಎಸ್ ಎಂ ಎಸ್ ಮೂಲಕ, ಜಾಗೃತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಎಚ್ಚರಿಕೆ ನೀಡುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರು ಮತ್ತು ಐಕ್ಯೂಎಸಿ ಸಂಚಾಲಕ ಪ್ರೋ.ಸರೊಜಿನಿ ಹೊಸಕೇರಿ, ಬಾಗಲಕೋಟ ಬಸವೇಶ್ವರ ಕಲಾ ಮಹಾವಿದ್ಯಾಲಯದ ಉಪನ್ಯಾಸಕ ಜ್ಯೊತಿ ದಿವಟೆ, ಶ್ರೀದೇವಿ ಮುಂಡಗನೂರ, ಡಾ.ಬಿಂದು, ಎಚ್.ಎ, ಎಲ್ಲ ಉಪನ್ಯಾಸಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.
ಯಂಕಮ್ಮ ಸ್ವಾಗತಿಸಿದರು. ಶುಷ್ಮಾ ಗುರಿಕಾರ ನಿರೂಪಿಸಿದರು. ರೂಪಾ ಸಂಶಿ ವಂದಿಸಿದರು.